Health Tips: ಫ್ರಿಡ್ಜ್‌ನಲ್ಲಿ ಈ ಆಹಾರ ಇಡುವ ಮುನ್ನ 10 ಸಾರಿ ಯೋಚಿಸಿ, ಇಂದೇ ಎಚ್ಚರಿಕೆ ವಹಿಸಿ!
ಅನೇಕರು ಟೊಮೇಟೊವನ್ನು ಫ್ರಿಡ್ಜ್‌ನಲ್ಲಿ ಇಡುತ್ತಾರೆ. ಆದರೆ ಇದು ಸುವಾಸನೆ, ರುಚಿ ಮತ್ತು ರಸವನ್ನು ಹಾಳುಮಾಡುತ್ತದೆ ಎಂದು ಬಹುಶಃ ಬಹುತೇಕರಿಗೆ ತಿಳಿದಿಲ್ಲ. ಇದಲ್ಲದೆ ಅದರ ಪೋಷಣೆ ಕೂಡ ಕೊನೆಗೊಳ್ಳುತ್ತದೆ. ಟೊಮೇಟೊಗಳನ್ನು ಸರಿಯಾದ ಉಷ್ಣಾಂಶದಲ್ಲಿ ಇಡಬೇಕು, ಇಲ್ಲದಿದ್ದರೆ ಅದು ಹಾಳಾಗಿ ನಿಮಗೆ ಅನಾರೋಗ್ಯವನ್ನುಂಟು ಮಾಡಬಹುದು.
ಈ ತರಕಾರಿಯನ್ನು ಸರಿಯಾದ ಉಷ್ಣಾಂಶದದಲ್ಲಿ ಸಂಗ್ರಹಿಸಿಡಬೇಕು. ಇದರಿಂದ ಆಲೂಗಡ್ಡೆಯ ರುಚಿ ಹಾಳಾಗುವುದಿಲ್ಲ. ಒಂದು ವೇಳೆ ಇದನ್ನು ಫ್ರಿಡ್ಜ್ನಲ್ಲಿಟ್ಟರೆ ಅದು ಹಾಳಾಗಿ ನಿಮಗೆ ವಿಷವಾಗಿ ಪರಿಣಮಿಸಬಹುದು.
ಬೆಳ್ಳುಳ್ಳಿಯನ್ನು ಕೂಡ ಫ್ರಿಡ್ಜ್ ನಲ್ಲಿ ಇಡಬಾರದು. ಒಂದು ವೇಳೆ ಇಟ್ಟರೆ ಅವು ಒಳಗಿನಿಂದ ರಬ್ಬರ್ ರೀತಿ ಆಗುತ್ತವೆ. ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಯಾವಾಗಲೂ ಒಣ ಮತ್ತು ತಂಪಾದ ಸ್ಥಳದಲ್ಲಿ ಇರಿಸಬೇಕು.
ನೀವು ಕ್ಯಾಪ್ಸಿಕಂ ಅನ್ನು ಫ್ರಿಡ್ಜ್‌ನಲ್ಲಿ ಇಡುತ್ತಿದ್ದರೆ, ಇನ್ಮುಂದೆ ಆ ತಪ್ಪನ್ನು ಮಾಡಬೇಡಿ. ಏಕೆಂದರೆ ಕಡಿಮೆ ತಾಪಮಾನದಲ್ಲಿ ಕ್ಯಾಪ್ಸಿಕಂನ ಸಿಪ್ಪೆಯು ಮೃದು ಮತ್ತು ಗರಿಗರಿಯಾಗುತ್ತದೆ. ಇದು ಅದರ ರುಚಿಯನ್ನು ಕೊಲ್ಲುತ್ತದೆ.
ಈರುಳ್ಳಿಯನ್ನು ಯಾವುದೇ ಕಾರಣಕ್ಕೂ ಫ್ರಿಡ್ಜ್‌ನಲ್ಲಿ ಇಡಬಾರದು. ಈ ರೀತಿ ಮಾಡುವುದರಿಂದ ತೇವಾಂಶವು ದೂರ ಹೋಗುತ್ತದೆ. ಇದರಿಂದ ಈರುಳ್ಳಿ ತನ್ನ ನೈಸರ್ಗಿಕ ರುಚಿಯನ್ನು ಕಳೆದುಕೊಳ್ಳುತ್ತದೆ. ಇದನ್ನು ಹೊರತುಪಡಿಸಿದ್ರೆ ಪ್ಲಾಸ್ಟಿಕ್ ಚೀಲ ಅಥವಾ ಆಲೂಗಡ್ಡೆಯ ಬದಿ ಈರುಳ್ಳಿಯನ್ನು ಇಡಬಾರದು.