ಮಕ್ಕಳಿಗೆ 18 ವರ್ಷವಾಗುವಾಗ ಹೆತ್ತವರ ಕೈ ಸೇರುವುದು 78 ಲಕ್ಷ ರೂಪಾಯಿ!ಸರ್ಕಾರದ ಈ ಯೋಜನೆಗೆ ಇಂದೇ ನೋಂದಾಯಿಸಿಕೊಳ್ಳಿ
NPS ವಾತ್ಸಲ್ಯ ಯೋಜನೆಯು ಈಗಾಗಲೇ ಚಾಲನೆಯಲ್ಲಿರುವ NPS ಯೋಜನೆಯ ವಿಸ್ತರಣೆಯಾಗಿದೆ.ಇದರಲ್ಲಿ 18 ವರ್ಷದೊಳಗಿನ ಮಕ್ಕಳ ಹೆಸರಿನಲ್ಲಿ ಖಾತೆ ತೆರೆಯಬಹುದು. ಮಗುವಿಗೆ 18 ವರ್ಷ ತುಂಬಿದ ನಂತರ ಹೂಡಿಕೆಯನ್ನು ಹಿಂಪಡೆಯಬಹುದು ಅಥವಾ ಸಾಮಾನ್ಯ NPS ಖಾತೆಗೆ ಪರಿವರ್ತಿಸಬಹುದು.
ಐಸಿಐಸಿಐ ಬ್ಯಾಂಕ್ ಮತ್ತು ಆಕ್ಸಿಸ್ ಬ್ಯಾಂಕ್ ಸೇರಿದಂತೆ ಹಲವು ಬ್ಯಾಂಕ್‌ಗಳು 'ಎನ್‌ಪಿಎಸ್ ವಾತ್ಸಲ್ಯ'ಕ್ಕಾಗಿ ಪಿಎಫ್‌ಆರ್‌ಡಿಎ ಜೊತೆ ಒಪ್ಪಂದ ಮಾಡಿಕೊಂಡಿವೆ.NPS ವಾತ್ಸಲ್ಯ ಖಾತೆಯು ಸ್ವಯಂ ಆಯ್ಕೆ ಮತ್ತು ಸಾಮಾನ್ಯ NPS ಖಾತೆಯಂತೆ ಸಕ್ರಿಯ ಆಯ್ಕೆಯೊಂದಿಗೆ ಬರುತ್ತದೆ.
ಮಗುವಿನ ಹೆಸರಿನಲ್ಲಿ ಈ ಖಾತೆಯನ್ನು ತೆರೆಯಲು, ಜನ್ಮ ಪ್ರಮಾಣಪತ್ರ, KYC ಗಾಗಿ ಪೋಷಕರ ಆಧಾರ್ ಕಾರ್ಡ್, DL, ಪಾಸ್‌ಪೋರ್ಟ್, ಮತದಾರರ ಗುರುತಿನ ಚೀಟಿ, MNREGA ಜಾಬ್ ಕಾರ್ಡ್ ಅಥವಾ ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಕಾರ್ಡ್ ಅಗತ್ಯವಿದೆ. ಇದಕ್ಕಾಗಿ ಪೋಷಕರ ಪ್ಯಾನ್ ಕಾರ್ಡ್ ಅಗತ್ಯ. PRAN ಅನ್ನು ಮಗುವಿನ ಹೆಸರಿನಲ್ಲಿ ನೀಡಲಾಗುತ್ತದೆ.
ನಿಮ್ಮ ಮಗುವಿನ ಹೆಸರಿನಲ್ಲಿ NPS ವಾತ್ಸಲ್ಯ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಅವರಿಗೆ 18 ವರ್ಷ ತುಂಬುವಾಗ ಈ ಸ್ಕೀಮ್ ಅನ್ನು ಕ್ಲೋಸ್ ಮಾಡಬಹುದು. ಮಗುವಿನ ಖಾತೆಯಲ್ಲಿ 2.5 ಲಕ್ಷ ಅಥವಾ ಅದಕ್ಕಿಂತ ಕಡಿಮೆ ಇದ್ದರೆ, ಒಂದೇ ಬಾರಿಗೆ ಸಂಪೂರ್ಣ ಹಣವನ್ನು ಹಿಂಪಡೆಯಬಹುದು.ಹೆಚ್ಚಿದ್ದರೆ ಒಮ್ಮೆ 20% ಹಣವನ್ನು ಹಿಂಪಡೆಯಬಹುದು. ಉಳಿದ ಹಣವನ್ನು ನಿಯಮಿತ ಆದಾಯದಂತೆ ವರ್ಷಾಶನವಾಗಿ ಪಡೆಯಬಹುದು.
ಮಗುವಿಗೆ 18 ವರ್ಷವಾಗುವವರೆಗೆ ಪ್ರತಿ ತಿಂಗಳು 10,000 ರೂ.ಗಳನ್ನು ಹೂಡಿಕೆ ಮಾಡುತ್ತಾ ಬಂದರೆ ಪ್ರತಿ ವರ್ಷ 12% ಬಡ್ಡಿ ನೀಡಿದರೆ, 18 ವರ್ಷಗಳ ನಂತರ ನಿಮ್ಮ ಬಳಿ ಸುಮಾರು 71 ಲಕ್ಷದ 17 ಸಾವಿರದ 286 ರೂ.ಇದ್ದಂತೆ ಆಗುತ್ತದೆ.
18 ವರ್ಷಗಳವರೆಗೆ ಪ್ರತಿ ತಿಂಗಳು 10,000 ರೂ.ಗಳನ್ನು ಹೂಡಿಕೆ ಮಾಡುತ್ತಿದ್ದರೆ ಮತ್ತು ಪ್ರತಿ ವರ್ಷ ನಿಮಗೆ 12.86% ಬಡ್ಡಿ ಸಿಗುತ್ತದೆ.ಇದು ಎನ್‌ಪಿಎಸ್‌ನಲ್ಲಿ 75% ಈಕ್ವಿಟಿಯನ್ನು ಆಯ್ಕೆ ಮಾಡುವ ಆದಾಯವಾಗಿದೆ. ಆದ್ದರಿಂದ 18 ವರ್ಷಗಳ ನಂತರ ನೀವು ಸುಮಾರು 78 ಲಕ್ಷ 1 ಸಾವಿರದ 61 ರೂ.ನಿಮ್ಮ ಕೈ ಸೇರುತ್ತದೆ. (ಜೀ ನ್ಯೂಸ್‌ನಿಂದ ನಿಮಗೆ ಕೇವಲ ಅಂದಾಜು ನೀಡಲಾಗಿದೆ. ಹೂಡಿಕೆ ಮಾಡುವ ಮೊದಲು, ನಿಮ್ಮ ತಜ್ಞರಿಂದ ಸಲಹೆ ಪಡೆಯುವುದು ಮುಖ್ಯ.)