Health Tips: ನಿಯಂತ್ರಣಕ್ಕೆ ಬಾರದ ಮಧುಮೇಹವನ್ನೂ ಕಂಟ್ರೋಲ್ ಮಾಡುತ್ತದೆ ಈ ಕಹಿ-ಹುಳಿ ಜ್ಯೂಸ್
ಅಧಿಕ ಸಕ್ಕರೆ ಕಾಯಿಲೆಯು ವಿವಿಧ ಆಹಾರಗಳು ಮತ್ತು ಪಾನೀಯಗಳನ್ನು ಸೇವನೆ ಮಾಡಲು ನಿರ್ಬಂಧ ಮಾಡುತ್ತದೆ. ಚಹಾವನ್ನು ಕುಡಿಯುವುದು ಸಹ ಕಷ್ಟವಾಗುತ್ತದೆ. ಹೆಚ್ಚಿನ ಗ್ಲೈಸೆಮಿಕ್ ಸೂಚಿಯನ್ನು ಹೊಂದಿರುವ ಆಹಾರಗಳು ಅಥವಾ ಪಾನೀಯಗಳನ್ನು ಸಕ್ಕರೆಯ ಜೊತೆಗೆ ಸೇವಿಸಿದ ನಂತರ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಳಕ್ಕೆ ಕಾರಣವಾಗಬಹುದು.
ಇಲ್ಲಿ ನಾವು ಮೂರು ಜ್ಯೂಸ್ ಗಳ ಬಗ್ಗೆ ಮಾಹಿತಿ ನೀಡಲಿದ್ದು, ಅವುಗಳು ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಸಹಾಯ ಮಾಡುತ್ತದೆ.
ಹಾಗಲಕಾಯಿಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಪ್ರಯೋಜನಕಾರಿಯಾಗಿದೆ. ಇದು ಇನ್ಸುಲಿನ್‌ನಂತೆ ಕಾರ್ಯನಿರ್ವಹಿಸುವ ಪಾಲಿಪೆಪ್ಟೈಡ್-ಪಿ ಅನ್ನು ಹೊಂದಿರುತ್ತದೆ.
ಸಾಮಾನ್ಯವಾಗಿ ನೇರಳೆ ಹಣ್ಣಿನಲ್ಲಿನ ಹೆಚ್ಚಿನ ಪೊಟ್ಯಾಸಿಯಮ್ ಮತ್ತು ಉತ್ಕರ್ಷಣ ನಿರೋಧಕ ಅಂಶಗಳು ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ.
ನೆಲ್ಲಿಕಾಯಿ ಕಾರ್ಬೋಹೈಡ್ರೇಟ್ ಚಯಾಪಚಯವನ್ನು ನಿಯಂತ್ರಿಸುತ್ತದೆ ಮತ್ತು ಹೆಚ್ಚಿನ ಫೈಬರ್ ಅಂಶದೊಂದಿಗೆ ಜೀರ್ಣಕಾರಿ ಕಾಯಿಲೆಗಳನ್ನು ನಿವಾರಿಸುತ್ತದೆ.
ಈ ಮೂರು ಪದಾರ್ಥಗಳ ಪಾನೀಯವು ಟೈಪ್ 2 ಡಯಾಬಿಟಿಸ್ ರೋಗಿಗಳಿಗೆ ಸೂಕ್ತವಾಗಿರುತ್ತದೆ. ಅವರು ತಮ್ಮ ನಿಯಮಿತ ಔಷಧಿಗಳೊಂದಿಗೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ನೈಸರ್ಗಿಕ ಪರಿಹಾರವನ್ನು ಕಂಡುಕೊಳ್ಳಬಹುದು.
(ಸೂಚನೆ: ಈ ಲೇಖನವು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. Zee News Kannada ಇದನ್ನು ಖಚಿತಪಡಿಸುವುದಿಲ್ಲ.)