ಇಷ್ಟು ದಿನ ಸಲ್ಮಾನ್‌ ಖಾನ್‌ ಜೀವ ಉಳಿಸಿದ್ದೇ ಈ ಬ್ರೇಸ್ಲೆಟ್! ಇದರ ವಿಶೇಷತೆಗಳೇನು ಗೊತ್ತಾ?

Fri, 18 Oct 2024-8:35 am,

ಹಿಂದಿ ಚಿತ್ರರಂಗದಲ್ಲಿ ಸಲ್ಮಾನ್ ಖಾನ್ ಗೆ ಒಳ್ಳೆಯ ಬೇಡಿಕೆ ಇದೆ. ಬಾಲಿವುಡ್ ನಲ್ಲಿ ಸೂಪರ್ ಸ್ಟಾರ್ ಆಗಿ ಹೊರಹೊಮ್ಮುತ್ತಿದ್ದಾರೆ. ಒಂದೆಡೆ ಸಿನಿಮಾ ಮಾಡುತ್ತಲೇ ಮತ್ತೊಂದೆಡೆ ಬಿಗ್ ಬಾಸ್ ನಂತಹ ಜನಪ್ರಿಯ ಟಿವಿ ಶೋಗಳಲ್ಲಿ ಮಿಂಚುತ್ತಿದ್ದಾರೆ. ಹೀಗಾಗಿಯೇ ಸಲ್ಮಾನ್‌ಗೆ ಅಪಾರ ಅಭಿಮಾನಿಗಳಿದ್ದಾರೆ.  

ಆದರೆ ಇತ್ತೀಚೆಗಷ್ಟೇ ಸಲ್ಮಾನ್ ಖಾನ್ ತಮ್ಮ ಆಪ್ತ ಗೆಳೆಯ ಬಾಬಾ ಸಿದ್ದಿಕಿ ಹತ್ಯೆಯಿಂದ ತುಂಬಾ ನೊಂದಿದ್ದರು. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಅಧಿಕೃತವಾಗಿ ಬಾಬಾನನ್ನು ಹತ್ಯೆ ಮಾಡಿದೆ ಎಂದು ಹೇಳಿಕೊಂಡಿದೆ.  

ಸಲ್ಮಾನ್ ಖಾನ್ ಕೈಯಲ್ಲಿ ಯಾವಾಗಲೂ ಬ್ರಸ್ಲೈಟ್ ಇರುತ್ತದೆ. ಜೀವನದಲ್ಲಿ ನಡೆದ ಕೆಲವು ಘಟನೆಗಳಿಂದಾಗಿ ಅವರು ಅದನ್ನು ಧರಿಸುತ್ತಾರೆ ಎಂದು ಆಪ್ತರು ಹೇಳುತ್ತಾರೆ. ಈ ಬ್ರೇಸ್ಲೆಟ್ ಧರಿಸುವುದರಿಂದ ನಕಾರಾತ್ಮಕ ಅಂಶಗಳು ದೂರವಾಗುತ್ತವೆ ಎಂದು ಸಲ್ಮಾನ್ ನಂಬಿದ್ದಾರೆ.  

ಈ ನೀಲಿ ಬಣ್ಣದ ಸ್ಟೋನ್ ಬ್ರೇಸ್ಲೆಟ್‌ ಧರಿಸುವುದರ ಹಿಂದಿನ ರಹಸ್ಯವನ್ನು ಸಲ್ಮಾನ್ ಖಾನ್ ಬಹಿರಂಗಪಡಿಸಿದರು, 'ನನ್ನ ತಂದೆ ಯಾವಾಗಲೂ ಇದನ್ನು ಧರಿಸುತ್ತಿದ್ದರು. ಅದಕ್ಕೇ ನಾನೂ ಧರಿಸುತ್ತಿದ್ದೇನೆ' ಎಂದಿದ್ದಾರೆ ಸಲ್ಲು ಭಾಯ್.  

ಸಲ್ಮಾನ್ ಖಾನ್ ಹಲವು ವರ್ಷಗಳಿಂದ ಬಲಗೈಗೆ ಬ್ರೇಸ್ಲೆಟ್ ತೊಟ್ಟಿದ್ದಾರೆ. ಈ ರತ್ನವನ್ನು ಫಿರುಜಾ ಎಂದು ಕರೆಯಲಾಗುತ್ತದೆ. ಇದನ್ನು ಧರಿಸಿದರೆ ಅದೃಷ್ಟ ಒಲಿದು ಮತ್ತು ತೊಂದರೆಗಳು ದೂರವಾಗುತ್ತವೆ ಎಂಬುದು ಸಲ್ಮಾನ್ ನಂಬಿಕೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link