BBK 10 : ಹೆಚ್ಚುತ್ತಲೇ ಇದ್ದಾರೆ ಈ ಸ್ಪರ್ಧಿಯ ಫಾಲೋವರ್ಸ್!ವೋಟಿಂಗ್ ನಲ್ಲೂ ಮುಂದು !ಇವರೇ ಅಂತೆ ವಿಜೇತ

Wed, 24 Jan 2024-4:46 pm,

ಇನ್ನೆರಡು ದಿನಗಳಲ್ಲಿ ಬಿಗ್ ಬಾಸ್ ಸೀಸನ್ 10 ರ ಫಿನಾಲೆ ನಡೆಯಲಿದೆ. ಯಾರು ಈ ಬಾರಿಯ ವಿಜೇತ ಎನ್ನುವ ಕುತೂಹಲ ಕೂಡಾ ಈ ಮೂಲಕ ತಣಿಯಲಿದೆ.  

ಈ ಮಧ್ಯೆ ಈ ಬಾರಿಯ ಬಿಗ್ ಬಾಸ್ ಸೀಸನ್ ಯಾರು ಗೆಲ್ಲುತ್ತಾರೆ ಎನ್ನುವ ಲೆಕ್ಕಾಚಾರ ಕೂಡಾ ಜೋರಾಗಿದೆ. ಅಭಿಮಾನಿಗಳು ತಮ್ಮ ನೆಚ್ಚಿನ ಸ್ಪರ್ಧಿಗಾಗಿ ವೋಟ್  ಮಾಡುವ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ. 

ಎಲ್ಲರೂ ಯಾರು ಗೆಲ್ಲುತ್ತಾರೆ? ಯಾರು ಗೆಲ್ಲಬೇಕು  ಎನ್ನುವ ಲೆಕ್ಕಾಚಾರದಲ್ಲಿ ನಿರತರಾಗಿದ್ದಾರೆ. ಈ ಮಧ್ಯೆ ಮನೆಯಿಂದ ಈಗಾಗಲೇ ಹೊರ ಹೋಗಿರುವ ಮಾಜಿ ಸ್ಪರ್ಧಿಗಳು ಕೂಡಾ ಯಾರು ಗೆಲ್ಲಬೇಕು ಎನ್ನುವ ಅಭಿಪ್ರಾಯವನ್ನು ಹೊರ ಹಾಕಿದ್ದಾರೆ. 

ಇನ್ನು  ಮನೆಯೊಳಗೆ ಇರುವ ಸ್ಪರ್ಧಿಗಳ ಪೈಕಿ ಇಬ್ಬರಿಗೆ  ಮನೆಯ ಹೊರಗೆ ಫಾಲೋವರ್ಸ್ ಹೆಚ್ಚುತ್ತಲೇ ಇದ್ದಾರೆಯಂತೆ. ಅದರಲ್ಲೂ ಕಾರ್ತಿಕ್ ಮಹೇಶ್ ಫಾಲೋವರ್ಸ್ ದಿನೇ ದಿನೇ ಹೆಚ್ಚುತ್ತಿದ್ದಾರೆ ಎನ್ನಲಾಗಿದೆ. ಸೋಶಿಯಲ್  ಮೀಡಿಯಾದಲ್ಲಿಯೂ ಇವರು ಟ್ರೆಂಡ್ ಆಗುತ್ತಿದ್ದಾರೆ.   

 ಹಾಗಾಗಿ ಕಾರ್ತಿಕ್ ಮಹೇಶ್ ಈ ಬಾರಿಯ ಸೀಸನ್ ಗೆಲ್ಲುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗುತ್ತಿದೆ. ಸಂಗೀತಾ ಶೃಂಗೇರಿ ಕೂಡಾ ಕಾರ್ತಿಕ್ ಗೆ ಭರ್ಜರಿಯಾಗಿಯೇ ಟಕ್ಕರ್ ನೀಡು ತ್ತಿದ್ದಾರೆ ಎನ್ನುತ್ತದೆ  ಮೂಲಗಳು.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link