ಬ್ಯಾಟರಿ ಇಲ್ಲದೆ 2000KM ಮೈಲೇಜ್ ನೀಡುತ್ತಂತೆ ಈ ಎಲೆಕ್ಟ್ರಿಕ್ ಕಾರ್
ಇತ್ತೀಚಿಗೆ ಎಲೆಕ್ಟ್ರಿಕ್ ಕಾರ್ ಮಾರುಕಟ್ಟೆಯಲ್ಲಿ ಹೊಸ ತಂತ್ರಜ್ಞಾನದೊಂದಿಗೆ ಬರುತ್ತಿರುವ ಕಾರ್ ಎಂದರೆ ಕ್ವಾಂಟಿನೋ ಟ್ವೆಂಟಿಫೈವ್. ಈ ಎಲೆಕ್ಟ್ರಿಕ್ ಕಾರಿನ ವೈಶಿಷ್ಟ್ಯವೆಂದರೆ, ಇದರಲ್ಲಿ ಲಿಥಿಯಂ ಐಯಾನ್ ಬ್ಯಾಟರಿಯ ಬದಲಿಗೆ, ಸಮುದ್ರದ ನೀರು ಅಥವಾ ಕೈಗಾರಿಕಾ ನೀರಿನ ತ್ಯಾಜ್ಯದ ನ್ಯಾನೊ-ಸ್ಟ್ರಕ್ಚರ್ಡ್ ಬೈ-ಐಯಾನ್ ಅಣುಗಳನ್ನು ಬಳಸಲಾಗುತ್ತದೆ.
ಈ ಎಲೆಕ್ಟ್ರಿಕ್ ಕಾರನ್ನು ಸಮುದ್ರದ ನೀರು ಅಥವಾ ಕೈಗಾರಿಕಾ ನೀರಿನ ತ್ಯಾಜ್ಯದಿಂದ ಚಲಾಯಿಸಲು ಸಾಧ್ಯವಾಗುತ್ತದೆ. ಈ ನೀರು ಜೈವಿಕ ಇಂಧನವಾಗಿ ಕಾರ್ಯನಿರ್ವಹಿಸುತ್ತದೆ. ಈ ಕಾರಿನ ನಾಲ್ಕು ಚಕ್ರಗಳಲ್ಲಿ ಎಲೆಕ್ಟ್ರಿಕ್ ಮೋಟಾರ್ ಗಳಿವೆ.
ಈ ಕಾರ್ ಫುಲ್ ಟ್ಯಾಂಕ್ ನಲ್ಲಿ ಸುಮಾರು 2000 ಕಿಮೀ ಮೈಲೇಜ್ ನೀಡಬಲ್ಲದು ಎಂದು ಕಂಪನಿ ಹೇಳಿಕೊಂಡಿದೆ.
ಕಂಪನಿ ನೀಡಿರುವ ಮಾಹಿತಿಯ ಪ್ರಕಾರ, ಈ ಕಾರ್ ಕೇವಲ 3 ಸೆಕೆಂಡುಗಳಲ್ಲಿ 100KMPH ವೇಗವನ್ನು ಪಡೆಯುತ್ತದೆ ಎಂದು ಹೇಳಲಾಗುತ್ತಿದೆ.
ಕ್ವಾಂಟಿನೋ ಟ್ವೆಂಟಿಫೈವ್ ಎಲೆಕ್ಟ್ರಿಕ್ ಕಾರಿನ ವಿನ್ಯಾಸವು ತುಂಬಾ ಆಕರ್ಷಕವಾಗಿದೆ.