June Lucky Rashi 2024: ಜೂನ್‌ನಲ್ಲಿ 5 ರಾಶಿಯವರಿಗೆ ಅದೃಷ್ಟ, ವೃತ್ತಿಯಲ್ಲಿ ಪ್ರಗತಿ, ಕೈ ತುಂಬಾ ಹಣ!

Tue, 28 May 2024-7:00 am,

ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಜೂನ್ ತಿಂಗಳಿನಲ್ಲಿ ದ್ವಾದಶ ರಾಶಿಗಳಲ್ಲಿ ಐದು ರಾಶಿಯವರಿಗೆ ಅದೃಷ್ಟದ ಸಮಯ ಎಂದು ಹೇಳಲಾಗುತ್ತಿದೆ. ಜೂನ್‌ನಲ್ಲಿ ಈ ಐದು ರಾಃಶಿಯವರಿಗೆ ಉದ್ಯೋಗ-ವ್ಯವಹಾರದಲ್ಲಿ ಪ್ರಗತಿ ಕಂಡು ಬರಲಿದ್ದು, ಹಣಕಾಸಿನ ಸ್ಥಿತಿಯೂ ಸುಧಾರಿಸಲಿದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ... 

ಜೂನ್ ಮಾಸವು ವೃಷಭ ರಾಶಿಯ ಜನರಿಗೆ ಅದೃಷ್ಟದ ಸಮಯ ಎಂದು ಸಾಬೀತು ಪಡಿಸಲಿದೆ. ಈ ವೇಳೆ ಹೂಡಿಕೆಯಿಂದ ಲಾಭ, ಉದ್ಯಮಿಗಳಿಗೆ ಅದ್ಭುತ ಸಮಯ. ಧನಾತ್ಮಕತೆಯಿಂದ ಕೂಡಿದ ಮಾಸ ಎಂದು ಹೇಳಬಹುದು. 

ಜೂನ್ ತಿಂಗಳಿನಲ್ಲಿ ವೃಶ್ಚಿಕ ರಾಶಿಯ ಜನರ ವೈವಾಹಿಕ ಜೀವನ ಉತ್ತಮವಾಗಿರುತ್ತದೆ. ಜೀವನದಲ್ಲಿ ಎದುರಾಗಿರುವ ಸಮಸ್ಯೆಗಳು ಬಗೆಹರಿಯಲಿವೆ. ಉದ್ಯೋಗ ರಂಗದಲ್ಲಿ ಹೊಸ ಎತ್ತರಕ್ಕೆ ಏರುವಿರಿ. ಆದಾಯದ ಹೊಸ ಮೂಲಗಳು ಸೃಷ್ಟಿಯಾಗಿ, ಆರ್ಥಿಕವಾಗಿ ಬಲಗೊಳ್ಳುವಿರಿ. 

ಜೂನ್ ತಿಂಗಳು ಧನು ರಾಶಿಯ ಜನರಿಗೆ ಉದ್ಯೋಗದಲ್ಲಿ ಅದೃಷ್ಟವನ್ನು ಹೊತ್ತು ತರಲಿದೆ. ವ್ಯವಹಾರಸ್ಥರಿಗೂ ಪ್ರಯೋಜನಕಾರಿ ಫಲಗಳನ್ನು ನೀಡಲಿದೆ. ಕೌಟುಂಬಿಕ ಸಂಬಂಧದಲ್ಲಿ ಮೂಡಿದ್ದ ಬಿರುಕುಗಳು ಬಗೆಹರಿಯಲಿವೆ. 

ಕುಂಭ ರಾಶಿಯವರಿಗೆ ಈ ತಿಂಗಳು ಹಣಕಾಸಿನ ಸ್ಥಿತಿ ಮೊದಲಿಗಿಂತ ಉತ್ತಮಗೊಳ್ಳಲಿದೆ. ನಿಮ್ಮ ಸಂಗಾತಿಯೊಂದಿಗೆ ಮೂಡಿದ್ದ ವೈಮನಸ್ಯ ಬಗೆಹರೆಯಲಿದೆ. ಉದ್ಯೋಗಸ್ಥರಿಗೆ ವೇತನ ಹೆಚ್ಚಾಗುವ ಸಾಧ್ಯತೆ ಇದೆ. 

ಜೂನ್ ತಿಂಗಳು ಮೀನ ರಾಶಿಯ ಉದ್ಯೋಗಸ್ಥರಿಗೆ ಕೆಲಸದಲ್ಲಿ ಅದೃಷ್ಟದ ಬೆಂಬಲವನ್ನು ನೀಡಲಿದೆ. ಹೊಸತನ್ನು ಕಲಿಯುವ ಅವಕಾಶ ದೊರೆಯಲಿದೆ. ಯಾವುದೇ ಸಮಸ್ಯೆಯನ್ನು ಧೈರ್ಯದಿಂದ ಎದುರಿಸುವುದರಿಂದ ಜಯ ಖಂಡಿತ ನಿಮ್ಮ ಪಾಲಿಗಿದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link