ಶ್ವಾಸಕೋಶಗಳನ್ನು ಆರೋಗ್ಯಕರವಾಗಿರಿಸಲು, ವಾರಕ್ಕೆ ಎರಡು ಬಾರಿಯಾದರೂ ಈ ಆಹಾರವನ್ನು ಸೇವಿಸಿ..!
Diet for lungs: ಉಸಿರಾಡುವ ಗಾಳಿ, ಆಧುನಿಕ ಜೀವನಶೈಲಿಯ ಕಾರಣ, ಜನರ ಶ್ವಾಸಕೋಶಗಳು ದುರ್ಬಲಗೊಂಡಿವೆ. ಇದರ ಪರಿಣಾಮದಿಂದಾಗಿ ಜನರು ಆಗಾಗ ಅನೇಕ ರೀತಿಯ ಆರೋಗ್ಯ ಸಮಸ್ಯೆ ಹಾಗೂ ಸೋಂಕುಗಳಿಗೆ ತುತ್ತಾಗುತ್ತಾರೆ. ಹಾಗಾದರೆ ನಮ್ಮ ಶ್ವಾಸಕೋಶಗಳನ್ನು ಆರೋಗ್ಯವಾಗಿರಿಸಲು ನಾವ ಯಾವ ಆಹಾರವನ್ನು ಸೇವಿಸಬೇಕು? ತಿಳಿಯಲು ಮುಂದೆ ಓದಿ...
ಮಾನವನ ದೇಹದಲ್ಲಿ ಶ್ವಾಸಕೋಶಗಳು ತುಂಬಾ ಮುಖ್ಯ ಪಾತ್ರವನ್ನು ವಹಿಸುತ್ತವೆ, ಮನುಷ್ಯನಿಗೆ ಉಸಿರಾಡುವ ಗಾಳಿ ಹಾಗೂ ಉಸಿರಾಡುವುದು ಎಷ್ಟು ಮುಖ್ಯವೋ, ಈ ಕಾರ್ಯವನ್ನು ನಿರ್ವಹಿಸುವ ಶ್ವಾಸಕೋಶಗಳು ಕೂಡ ಅಷ್ಟೆ ಮುಖ್ಯ.
ನಮ್ಮ ದೇಹಕ್ಕೆ ಪೋಷ್ಠಿಕಾಂಶಗಳು ಎಷ್ಟು ಮುಖ್ಯವೋ, ನಮ್ಮ ಶ್ವಾಸಕೋಶಗಳನ್ನು ಆರೋಗ್ಯವಾಗಿಡುವ ಆಹಾರ ಸೇವಿಸುವುದು ಕೂಡ ಅಷ್ಟೆ ಮುಖ್ಯ. ಅದರಿಂದ ನಿಮ್ಮ ಶ್ವಾಸಕೋಶಗಳನ್ನು ಆರೋಗ್ಯವಾಗಿಡುವ ಈ ಆಹಾರಗಳನ್ನು ಸೇವಿಸುವುದರಿಂದ, ಇದರಿಂದ ಉಂಟಾಗುವ ಅನೇಕ ಆರೋಗ್ಯ ಸಮಸ್ಯೆಗಳಿಂದ ನೀವು ದೂರ ಉಳಿಯಬಹುದು.
ಮೀನಿನಲ್ಲಿ ಒಮೆಗಾ 3 ಕೊಬ್ಬಿನಾಮ್ಲಗಳು ಸಮೃದ್ಧವಾಗಿವೆ. ಮೀನು ತಿನ್ನುವುದರಿಂದ ಉಸಿರಾಟದ ಸಮಸ್ಯೆ ನಿವಾರಣೆಯಾಗುತ್ತದೆ. ಅಷ್ಟೆ ಅಲ್ಲದೆ, ಇದು ಶ್ವಾಸಕೋಶದಲ್ಲಿ ಸೋಂಕನ್ನು ತಡೆಯುವಲ್ಲಿ ಸಹಾಯ ಮಾಡುತ್ತದೆ.
ಚಳಿಗಾಲದಲ್ಲಿ ಮೀನು ತಿನ್ನುವುದು ಚರ್ಮದ ಆರೋಗ್ಯಕ್ಕೆ ಒಳ್ಳೆಯದು ಎನ್ನುತ್ತಾರೆ ವೈದ್ಯರು. ಮೀನಿನಲ್ಲಿರುವ ಒಮೆಗಾ 3 ಮತ್ತು ಒಮೆಗಾ 6 ಕೊಬ್ಬಿನಾಮ್ಲಗಳು ಚರ್ಮದ ಪದರ ಒಣಗುವುದನ್ನು ತಡೆಗಟ್ಟಿ, ತ್ವಚೆಯ ಒಳಪನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ.
ಚಳಿಗಾಲದಲ್ಲಿ ಮೀನುಗಳನ್ನು ಸೇವಿಸುವುದರಿಂದ, ಇದರಲ್ಲಿರುವ ಒಮೆಗಾ 3 ಕೊಬ್ಬಿನಾಮ್ಲಗಳು, ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ, ಅಷ್ಟೆ ಅಲ್ಲದೆ, ಪಾರ್ಶ್ವವಾಯು ನಿಮ್ಮ ದೇಹದ ಮೇಲೆ ಬೀರುವ ಪರಿಣಾಮವನ್ನು ಕಡಿಮೆ ಮಾಡುತ್ತದೆ.
ಮೀನು ತಿನ್ನುವುದು ಮೆದುಳು ಮತ್ತು ಕಣ್ಣುಗಳಿಗೆ ತುಂಬಾ ಆರೋಗ್ಯಕರ. ಅಲ್ಲದೆ ಹಾಲುಣಿಸುವ ತಾಯಂದಿರಿಗೆ ಮೀನು ತುಂಬಾ ಒಳ್ಳೆಯ ಆಹಾರ ಎಂದೆ ಹೇಳಬಹುದು.