ಇದು ವಿಶ್ವದಲ್ಲೇ ಅತ್ಯಂತ ಅದೃಷ್ಟದ ಸಂಖ್ಯೆ: ಈ ಡೇಟ್‌ನಲ್ಲಿ ಹುಟ್ಟಿದವರಿಗೆ ಲಕ್ಷ್ಮೀ ಯೋಗ ಜನ್ಮಜನ್ಮಕ್ಕೂ ಇರುವುದು! ಧೋನಿ, ಕತ್ರಿನಾ ಹುಟ್ಟಿದ್ದು ಕೂಡ ಇದೇ ದಿನಾಂಕದಲ್ಲಿ
ಸಂಖ್ಯಾಶಾಸ್ತ್ರದ ಸಹಾಯದಿಂದ ಒಬ್ಬ ವ್ಯಕ್ತಿಯ ಅದೃಷ್ಟ ಹೇಗಿದೆ ಎಂಬುದನ್ನು ಅರಿಯಬಹುದು. ಹುಟ್ಟಿದ ದಿನಾಂಕ ವ್ಯಕ್ತಿಯ ಡೆಸ್ಟಿನಿಯನ್ನು ನಿರ್ಧಾರ ಮಾಡುತ್ತದೆ ಎನ್ನುತ್ತದೆ ಸಂಖ್ಯಾಶಾಸ್ತ್ರ. ಅದೃಷ್ಟವಾಗಲಿ, ದುರಾದೃಷ್ಟವಾಗಲಿ ಸಂಖ್ಯಾಶಾಸ್ತ್ರದ ಮೂಲಕ ಅವುಗಳ ಬಗ್ಗೆ ತಿಳಿಯಬಹುದು. 'ಸಂಖ್ಯೆ 7 ಅನ್ನು ಕೇತು ಗ್ರಹ ಪ್ರತಿನಿಧಿಸುತ್ತದೆ. ಈ ಗ್ರಹವು ತುಂಬಾ ಕಾಲ್ಪನಿಕವಾಗಿದ್ದು, ಅದೇ ಗುಣ ಆ ರಾಡಿಕ್ಸ್ ಸಂಖ್ಯೆಯಲ್ಲಿ ಹುಟ್ಟಿದ ಜನರಿಗೆ ಇರುತ್ತದೆ
ಇದು ಅತ್ಯಂತ ಶಕ್ತಿಶಾಲಿ ಸಂಖ್ಯೆ. ಅದೃಷ್ಟ ಯಾವಾಗಲೂ ಈ ಸಂಖ್ಯೆಯೊಂದಿಗೆ ಸಂಬಂಧ ಹೊಂದಿರುತ್ತದೆ. ಈ ಸಂಖ್ಯೆಯ ವ್ಯಕ್ತಿ ಹೊಂದಿರುವ ಗುಣಗಳು ಕೆಲವೇ ಜನರಲ್ಲಿ ಕಂಡುಬರುತ್ತವೆ. ಈ ಸಂಖ್ಯೆಯ ಜನರು ನೋಟದಲ್ಲಿ ಆಕರ್ಷಕರಾಗಿರುವುದು ಮಾತ್ರವಲ್ಲ, ಸ್ವಭಾವತಃ ಸೂಕ್ಷ್ಮವಾಗಿರುತ್ತಾರೆ. ನಿಮ್ಮ ಈ ಸ್ವಭಾವದಿಂದಾಗಿಯೇ ಎಂಥವರೂ ಸಹ ನಿಮ್ಮಲ್ಲಿ ಬೆರೆಯುತ್ತಾರೆ.
7ನೇ ಸಂಖ್ಯೆಯನ್ನು ಹೊಂದಿರುವ ಜನರು ಯಾರನ್ನೂ ತ್ವರಿತವಾಗಿ ನಂಬುವುದಿಲ್ಲ ಅಥವಾ ತ್ವರಿತವಾಗಿ ಸನ್ನಿವೇಶಗಳೊಂದಿಗೆ ರಾಜಿ ಮಾಡಿಕೊಳ್ಳುವುದಿಲ್ಲ. ಅವರಿಗೆ ಬೇಗ ಮಾತನಾಡುವ ಅಭ್ಯಾಸವೂ ಇಲ್ಲ, ಮೊದಲು ಪರಿಸ್ಥಿತಿಯನ್ನು ವಿಶ್ಲೇಷಿಸಿ ನಂತರ ಸಾಕಷ್ಟು ಯೋಚಿಸಿ ತೀರ್ಮಾನಕ್ಕೆ ಬರುತ್ತಾರೆ. ಈ ಜನರು ಚಿಂತನಶೀಲರು. ಆದ್ದರಿಂದ ಅವರು ಯಾವುದೇ ಕೆಲಸದ ಕ್ಷೇತ್ರದಲ್ಲಿ ಯಶಸ್ಸನ್ನು ಸಾಧಿಸುತ್ತಾರೆ.
7 ನೇ ಸಂಖ್ಯೆ ಹೊಂದಿರುವ ಜನರು 7 ನೇ ಸಂಖ್ಯೆಯ ಜನರೊಂದಿಗೆ ಮಾತ್ರ ಹೊಂದಿಕೊಳ್ಳುವುದಿಲ್ಲ. ಆದರೆ ಅವರು 3, 4 ಮತ್ತು 9 ಸಂಖ್ಯೆಗಳನ್ನು ಹೊಂದಿರುವ ಜನರೊಂದಿಗೆ ಚೆನ್ನಾಗಿ ಹೊಂದಿಕೊಳ್ಳುತ್ತಾರೆ.
ಸೂಚನೆ: ಇಲ್ಲಿ ನೀಡಲಾಗಿರುವ ಮಾಹಿತಿ ಸಂಖ್ಯಾಶಾಸ್ತ್ರವನ್ನು ಅನ್ವಯಿಸಿದೆ, ಹೊರತಾಗಿ ಜೀ ಕನ್ನಡ ನ್ಯೂಸ್ ಇದರ ಜವಾಬ್ದಾರಿ ವಹಿಸಿಕೊಳ್ಳುವುದಿಲ್ಲ.