Saddest city: ಇದು ವಿಶ್ವದ ಅತ್ಯಂತ ದುಃಖದ ನಗರ: ಇಲ್ಲಿ ರಕ್ತವಾಗಿ ಹರಿಯುತ್ತೆ ನದಿ; ಜನರ ಆಯುಷ್ಯವೂ ಕಡಿಮೆ!

Wed, 22 Mar 2023-4:14 pm,

ರಾಸಾಯನಿಕ ಮಳೆ, ಶೂನ್ಯಕ್ಕಿಂತ ಕಡಿಮೆ ತಾಪಮಾನ ಮತ್ತು ಹಾನಿಕಾರಕ ಅನಿಲಗಳ ನಡುವೆ 45 ದಿನಗಳವರೆಗೆ ಕತ್ತಲೆಯಲ್ಲಿ ಯಾರಿಂದಾದರೂ ಬದುಕಲು ಸಾಧ್ಯವೇ? ಇಂದು ನಾವು ಹೇಳುತ್ತಿರುವ ಸುದ್ದಿಯು ಇದಕ್ಕೆ ಸಂಬಂಧಪಟ್ಟಿದೆ. ಇದು ವಿಚಿತ್ರ ಎನಿಸಿದರೂ ಜಗತ್ತಿನ ಅತ್ಯಂತ ದುಃಖಕರ ನಗರ ಎಂಬ ಕುಖ್ಯಾತಿಗೆ ಕಾರಣವಾಗಿದೆ.

ಜೀವನದಲ್ಲಿ ಪ್ರತಿಯೊಬ್ಬರೂ ಸಾಧ್ಯವಾದಷ್ಟು ಸಂತೋಷದಿಂದ ಬದುಕಲು ಮತ್ತು ಐಷಾರಾಮಿ ಜೀವನವನ್ನು ಆನಂದಿಸಲು ಇಷ್ಟಪಡುತ್ತಾರೆ. ಆದರೆ ನೆಮ್ಮದಿಯ ಅರ್ಥವೇ ತಿಳಿಯದೆ ಬದುಕುತ್ತಿರುವ ನಗರವೊಂದು ತನ್ನ ಬದುಕಿನ ಅರ್ಧಕ್ಕೆ ಫುಲ್ ಸ್ಟಾಪ್ ಹಾಕುತ್ತಿದೆ ಎಂದರೆ ನಂಬಲು ಸಾಧ್ಯವಿಲ್ಲ.

ನೊರಿಲ್ಸ್ಕ್ ಎಂಬುದು ರಷ್ಯಾದ ಪರ್ವತಗಳ ನಡುವೆ ಇರುವ ನಗರದ ಹೆಸರು. ಈಗ ನಾವು ಈ ನಗರದ ಬಗ್ಗೆ ಮಾತನಾಡುತ್ತಿದ್ದೇವೆ. ಈ ನಗರವನ್ನು ವಿಶ್ವದ 'ಅತ್ಯಂತ ಖಿನ್ನತೆಯ ಅಥವಾ ದುಃಖದ ನಗರ' ಎಂದು ಕರೆಯಲಾಗುತ್ತದೆ.

ರಷ್ಯಾದ ಉತ್ತರದ ನೊರಿಲ್ಸ್ಕ್ ನಗರದ ನಿವಾಸಿಗಳ ದುಃಸ್ಥಿತಿ ಹೇಳಲೂ ಕೂಡ ಅಸಾಧ್ಯವಾಗಿದೆ. ಆ ನಗರದಲ್ಲಿ ರಸ್ತೆ ಸೌಲಭ್ಯ ಸರಿಯಾಗಿಲ್ಲದಿರುವುದು ಮಾತ್ರವಲ್ಲದೆ, ಹಲವಾರು ಅನಾನುಕೂಲತೆಗಳ ಕೂಪವಾಗಿದೆ.

ನಗರಕ್ಕೆ ಹೋಗಲು ಅಥವಾ ನಗರದಿಂದ ಹೊರಗೆ ಹೋಗಲು ಬಯಸಿದ್ದರೂ, ಸರಕುಗಳ ಸಾಗಣೆಗೆ ಒಂದೇ ಮಾರ್ಗವನ್ನು ಬಳಸಲಾಗುತ್ತದೆ. ವಿಮಾನ ನಿಲ್ದಾಣದ ಸಂಪರ್ಕವಿದ್ದರೂ ಅಲ್ಲಿಗೆ ಹೋಗಲು ಧೈರ್ಯ ಮಾಡುವವರು ಕಡಿಮೆ.

ಕಠಿಣ ಪರಿಸ್ಥಿತಿಗಳ ಹೊರತಾಗಿಯೂ, ನಗರವು ಸುಮಾರು 170,000 ಜನರಿಗೆ ನೆಲೆಯಾಗಿದೆ. ನೊರಿಲ್ಸ್ಕ್‌ನಲ್ಲಿರುವ ಹೆಚ್ಚಿನ ಜನರ ಸರಾಸರಿ ಮಾಸಿಕ ಆದಾಯವು $986 ಅಮೆರಿಕನ್ ಡಾಲರ್ ಆಗಿದೆ. ಇದು $739 ರ ರಷ್ಯನ್ನರ ಸರಾಸರಿ ಮಾಸಿಕ ಆದಾಯಕ್ಕಿಂತ ಹೆಚ್ಚು.

ಈ ನಗರವು ವಿಶ್ವದ ನಿಕಲ್-ತಾಮ್ರ-ಪಲ್ಲಾಡಿಯಮ್ ಗಣಿಗಳ ಅತಿದೊಡ್ಡ ಖನಿಜ ನಿಕ್ಷೇಪಗಳಿಗೆ ಹತ್ತಿರದಲ್ಲಿದೆ. ಈ ಖನಿಜಗಳ ಹೊರತೆಗೆಯುವಿಕೆ ಈ ನಗರದ ನಿವಾಸಿಗಳಿಗೆ ಮುಖ್ಯ ಆದಾಯದ ಮೂಲವಾಗಿದೆ. ನಗರದಲ್ಲಿ ಅನೇಕ ಜನರು ನೊರಿಲ್ಸ್ಕ್ ನಿಕಲ್ ಗಾಗಿ ಕೆಲಸ ಮಾಡುತ್ತಾರೆ.

ನಿಕಲ್ ಸ್ಥಾವರದಿಂದ 20 ಲಕ್ಷ ಟನ್‌ ಗೂ ಹೆಚ್ಚು ವಿಷಕಾರಿ ಅನಿಲಗಳು ಬಿಡುಗಡೆಯಾಗುತ್ತಿವೆ ಎಂದು ಅಂಕಿಅಂಶಗಳು ತೋರಿಸುತ್ತವೆ. ಈ ಮಾಲಿನ್ಯದಿಂದ ರಾಸಾಯನಿಕ ಮಳೆ ಸುರಿದು ನೀರು ಕಲುಷಿತಗೊಳ್ಳುತ್ತಿದೆ. ಇದರಿಂದ ಅಲ್ಲಿನ ಜನರ ಆರೋಗ್ಯ ಚಿಕ್ಕ ವಯಸ್ಸಿನಲ್ಲೇ ಸಂಪೂರ್ಣ ಹಾಳಾಗುತ್ತದೆ. ನೊರಿಲ್ಸ್ಕ್ನಲ್ಲಿ ವ್ಯಕ್ತಿಯ ಸರಾಸರಿ ಜೀವಿತಾವಧಿ ಕೇವಲ 59 ವರ್ಷಗಳು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link