“ಫೈನಲ್ ಪಂದ್ಯದಲ್ಲಿ ಸಿರಾಜ್ ಬದಲಿಯಾಗಿ ಈ ಅನುಭವಿ ಸ್ಪಿನ್ನರ್ ಆಡಲಿದ್ದಾರೆ”- ಬಿಸಿಸಿಐ ಅಧಿಕಾರಿ ಮಾಹಿತಿ
ಪ್ರಸ್ತುತ ಟೀಂ ಇಂಡಿಯಾ ಅದ್ಭುತ ಫಾರ್ಮ್ ಕಾಯ್ದುಕೊಂಡಿದ್ದು, ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಎಲ್ಲದರೂ ಉತ್ತಮವಾಗಿದೆ.
ಸೆಮಿಫೈನಲ್ ಹಣಾಹಣಿಯಲ್ಲಿ ಗೆದ್ದ ಭಾರತ ನಾಳೆ ಅಂದರೆ ನವೆಂಬರ್ 19ರಂದು ಆಸ್ಟ್ರೇಲಿಯಾ ವಿರುದ್ಧ ಫೈನಲ್’ನಲ್ಲಿ ಮುಖಾಮುಖಿಯಾಗಲಿದೆ. ಆದರೆ ಅದಕ್ಕೂ ಮುನ್ನ ಬಿಸಿಸಿಐ ಮೂಲದಿಂದ ಮಾಹಿತಿಯೊಂದು ಲಭ್ಯವಾಗಿದೆ.
ಬಿಸಿಸಿಐ ಮೂಲದ ಮಾಹಿತಿ ಪ್ರಕಾರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ ಆಡುತ್ತಿಲ್ಲ. ಅವರ ಬದಲಾಗಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಬೌಲಿಂಗ್ ಮಾಡಲಿದ್ದಾರೆ.
ಈ ಹೇಳಿಕೆಗೆ ಪೂರಕ ಎಂಬಂತೆ ಕಳೆದ ದಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಭಾರತ ಕ್ರಿಕೆಟ್ ತಂಡ ಅಭ್ಯಾಸದ ವೇಳೆ ಅಶ್ವಿನ್ ಭಾಗವಹಿಸಿದ್ದರು. ಆದರೆ ಸಿರಾಜ್ ಅನುಪಸ್ಥಿತಿ ಕಾಣುತ್ತಿತ್ತು.
ಒಂದು ವೇಳೆ ಸಿರಾಜ್ ಬದಲು ಅಶ್ವಿನ್ ಟೀಂ ಇಂಡಿಯಾದ ಪ್ಲೇಯಿಂಗ್ 11 ನಲ್ಲಿ ಸ್ಥಾನ ಪಡೆದರೆ ಮೂವರು ಸ್ಪಿನ್ನರ್’ಗಳು ತಂಡದಲ್ಲಿ ಸ್ಥಾನ ಪಡೆದಂತಾಗುತ್ತದೆ.
ಅಂದಹಾಗೆ ಅಶ್ವಿನ್ ಅವರನ್ನು ಫೈನಲ್ ಪಂದ್ಯದಲ್ಲಿ ಕಣಕ್ಕಿಳಿಸಲು ಹಲವು ಕಾರಣಗಳಿವೆ. ದಾಖಲೆಗಳನ್ನು ಅನುಸರಿಸಿದರೆ, ಆರ್ ಅಶ್ವಿನ್ ಆಸ್ಟ್ರೇಲಿಯಾ ವಿರುದ್ಧ ಅದ್ಭುತವಾಗಿ ಆಡಿದ್ದಾರೆ. ಡೇವಿಡ್ ವಾರ್ನರ್’ಗೆ ಇದುವರೆಗೆ ಸಿಂಹಸ್ವಪ್ನವಾಗಿ ಕಾಡಿದ ಅಶ್ಚಿನ್ ಈ ಬಾರಿಯೂ ಭರ್ಜರಿ ಬೌಲಿಂಗ್ ಮಾಡುವ ಸಾಧ್ಯತೆ ಇದೆ.