ಇದುವರೆಗೆ ಕರ್ನಾಟಕದಲ್ಲಿ 25 ಸಿಎಂಗಳು ಅಧಿಕಾರಕ್ಕೆ ಬಂದ್ರೂ... 5 ವರ್ಷ ಪೂರ್ಣಗೊಳಿಸಿದ್ದು ಈ ಮೂವರು ಮಾತ್ರ;
ಕರ್ನಾಟಕದ ಇತಿಹಾಸದಲ್ಲಿ 25 ಮುಖ್ಯಮಂತ್ರಿಗಳು ಬಂದು ಹೋಗಿದ್ದಾರೆ. ಅದರಲ್ಲಿ ಸಂಪೂರ್ಣ ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಲು ಸಮರ್ಥರಾಗಿದ್ದು ಕೇವಲ ಮೂವರಿಗೆ ಮಾತ್ರ. ಅವರೆಲ್ಲರೂ ಕಾಂಗ್ರೆಸ್’ನಿಂದ ಆಯ್ಕೆಯಾದವರು.
ಎಸ್ ನಿಜಲಿಂಗಪ್ಪ (1962-68), ಡಿ ದೇವರಾಜ ಅರಸು (1972-77) ಮತ್ತು ಸಿದ್ದರಾಮಯ್ಯ (2013-2018) ತಮ್ಮ ಪೂರ್ಣಾವಧಿಯನ್ನು ಪೂರ್ಣಗೊಳಿಸಿದ ಕರ್ನಾಟಕದ ಮುಖ್ಯಮಂತ್ರಿಗಳು. ಬಿಜೆಪಿ ಮತ್ತು ಕುಮಾರಸ್ವಾಮಿಯವರ ಜೆಡಿಎಸ್‌ನಿಂದ ಯಾವುದೇ ಮುಖ್ಯಮಂತ್ರಿ ಕರ್ನಾಟಕದಲ್ಲಿ ಪೂರ್ಣಾವಧಿಯನ್ನು ಪೂರ್ಣಗೊಳಿಸಲು ಸಾಧ್ಯವಾಗಿಲ್ಲ.
ಮೈಸೂರು ರಾಜ್ಯದ ಮುಖ್ಯಮಂತ್ರಿಗಳು ಮತ್ತು ಅವಧಿ:
ಕೆ. ಚೆಂಗಲರಾಯ ರೆಡ್ಡಿ-4 ವರ್ಷಗಳು, 157 ದಿನಗಳು (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್) ಕೆಂಗಲ್ ಹನುಮಂತಯ್ಯ- 4 ವರ್ಷ 142 ದಿನಗಳು (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್) ಕಡಿದಾಳ್ ಮಂಜಪ್ಪ 73 ದಿನಗಳು ಮೈಸೂರಿನ ಮುಖ್ಯಮಂತ್ರಿ (ರಾಜ್ಯ ಪುನರ್ರಚನೆಯ ನಂತರ) ಎಸ್.ನಿಜಲಿಂಗಪ್ಪ 1 ವರ್ಷ, 197 ದಿನಗಳು (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)ಬಿ.ಡಿ ಜಟ್ಟಿ 3 ವರ್ಷಗಳು, 302 ದಿನಗಳು (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್) ಎಸ್. ಆರ್. ಕಂಠಿ 99 ದಿನಗಳು (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್) ಎಸ್.ನಿಜಲಿಂಗಪ್ಪ 5 ವರ್ಷ, 343 ದಿನಗಳು (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್) ವೀರೇಂದ್ರ ಪಾಟೀಲ್ ಚಿಂಚೋಳಿ 2 ವರ್ಷ, 293 ದಿನಗಳು (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)– ರಾಷ್ಟ್ರಪತಿ ಆಳ್ವಿಕೆ 1 ವರ್ಷ, 1 ದಿನ ಡಿ.ದೇವರಾಜ್ ಅರಸ್ 1 ವರ್ಷ, 225 ದಿನಗಳು (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)
ಕರ್ನಾಟಕದ ಮುಖ್ಯಮಂತ್ರಿಗಳು:
ಡಿ.ದೇವರಾಜ್ ಅರಸ್ 4 ವರ್ಷ, 91 ದಿನಗಳು (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್) ರಾಷ್ಟ್ರಪತಿ ಆಳ್ವಿಕೆ 59 ದಿನಗಳು ಡಿ.ದೇವರಾಜ್ ಅರಸು 1 ವರ್ಷ, 318 ದಿನಗಳು (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್) ಆರ್. ಗುಂಡೂರಾವ್ 2 ವರ್ಷ, 363 ದಿನಗಳು (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್) ರಾಮಕೃಷ್ಣ ಹೆಗಡೆ 5 ವರ್ಷ, 216 ದಿನಗಳು (2 ಬಾರಿ ಆಯ್ಕೆಎ ಪರಿಗಣಿಸಿ) ಜನತಾ ಪಕ್ಷ ಸೋಮಪ್ಪ ರಾಯಪ್ಪ ಬೊಮ್ಮಾಯಿ 281 ದಿನಗಳು (ಜನತಾ ಪಕ್ಷ) ರಾಷ್ಟ್ರಪತಿ ಆಳ್ವಿಕೆ 193 ದಿನಗಳುವೀರೇಂದ್ರ ಪಾಟೀಲ್ ಚಿಂಚೋಳಿ 314 ದಿನಗಳು (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್) ರಾಷ್ಟ್ರಪತಿ ಆಳ್ವಿಕೆ ರಾಷ್ಟ್ರಪತಿ ಆಳ್ವಿಕೆ - 7 ದಿನಗಳು ಎಸ್.ಬಂಗಾರಪ್ಪ 2 ವರ್ಷ, 33 ದಿನಗಳು (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್) ವೀರಪ್ಪ ಮೊಯ್ಲಿ 2 ವರ್ಷ, 22 ದಿನಗಳು (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್) ಎಚ್.ಡಿ.ದೇವೇಗೌಡ 1 ವರ್ಷ, 172 ದಿನಗಳು (ಜನತಾ ದಳ) J. H. ಪಟೇಲ್ ಚನ್ನಗಿರಿ 3 ವರ್ಷ, 133 ದಿನಗಳು(ಜನತಾ ದಳ)
ಎಸ್ ಎಂ ಕೃಷ್ಣ ಮದ್ದೂರ್ 4 ವರ್ಷ, 230 ದಿನಗಳು (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್) ಧರಂ ಸಿಂಗ್ ಜೇವರ್ಗಿ 1 ವರ್ಷ, 251 ದಿನಗಳು (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್) ಎಚ್.ಡಿ.ಕುಮಾರಸ್ವಾಮಿ 1 ವರ್ಷ, 253 ದಿನಗಳು ಜನತಾ ದಳ (ಜಾತ್ಯತೀತ) ರಾಷ್ಟ್ರಪತಿ ಆಳ್ವಿಕೆ 35 ದಿನಗಳು ಬಿ.ಎಸ್. ಯಡಿಯೂರಪ್ಪ 7 ದಿನಗಳು (ಭಾರತೀಯ ಜನತಾ ಪಕ್ಷ) ರಾಷ್ಟ್ರಪತಿ ಆಳ್ವಿಕೆ 191 ದಿನಗಳು ಬಿ. ಎಸ್. ಯಡಿಯೂರಪ್ಪ 3 ವರ್ಷ, 67 ದಿನಗಳು (ಭಾರತೀಯ ಜನತಾ ಪಕ್ಷ) ಡಿ ವಿ ಸದಾನಂದ ಗೌಡ 342 ದಿನಗಳು (ಭಾರತೀಯ ಜನತಾ ಪಕ್ಷ) ಜಗದೀಶ್ ಶೆಟ್ಟರ್ 305 ದಿನಗಳು (ಭಾರತೀಯ ಜನತಾ ಪಕ್ಷ)
ಸಿದ್ದರಾಮಯ್ಯ 5 ವರ್ಷ 4 ದಿನ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್) ಬಿ.ಎಸ್.ಯಡಿಯೂರಪ್ಪ 6 ದಿನಗಳು (ಭಾರತೀಯ ಜನತಾ ಪಕ್ಷ) H. D. ಕುಮಾರಸ್ವಾಮಿ 1 ವರ್ಷ, 64 ದಿನಗಳು ಜನತಾ ದಳ (ಜಾತ್ಯತೀತ) ಬಿ ಎಸ್ ಯಡಿಯೂರಪ್ಪ 2 ವರ್ಷ, 2 ದಿನಗಳು (ಭಾರತೀಯ ಜನತಾ ಪಕ್ಷ) ಬಸವರಾಜ ಬೊಮ್ಮಾಯಿ – 27 ಜುಲೈ 2021 - 2023 (ಭಾರತೀಯ ಜನತಾ ಪಕ್ಷ) ಸಿದ್ದರಾಮಯ್ಯ- ಪ್ರಸ್ತುತ ಅಧಿಕಾರ ನಡೆಸುತ್ತಿರುವ ಮುಖ್ಯಮಂತ್ರಿ