Maha Yuti: 12 ವರ್ಷಗಳ ಬಳಿಕ ಹತ್ತಿರಕ್ಕೆ ಬರಲಿವೆ ಈ 3 ದೊಡ್ಡ ಗ್ರಹಗಳು, 3 ರಾಶಿಗಳ ಜನರಿಗೆ ಅಪಾರ ಧನಲಾಭ ಯೋಗ!

Wed, 05 Apr 2023-5:27 pm,

1. ಮೇಷ ರಾಶಿ- ಮೇಷ ರಾಶಿಯ ಜಾತಕದವರ ಪಾಲಿಗೆ ಬುಧ-ಗುರು ಹಾಗೂ ಸೂರ್ಯನ ಮೈತ್ರಿ ಅತ್ಯಂತ ಶುಭ ಫಲಪ್ರದಾಯಿ ಸಾಬೀತಾಗಲಿದೆ. ಏಕೆಂದರೆ ಈ ಯುತಿ ನಿಮ್ಮ ಗೋಚರ ಜಾತಕದ ಲಗ್ನ ಭಾವದಲ್ಲಿ ರೂಪುಗೊಳ್ಳುತ್ತಿದೆ. ಇದರಿಂದ ನಿಮ್ಮ ಆರೋಗ್ಯದಲ್ಲಿ ಅಪಾರ ಸುಧಾರಣೆ ಕಂಡುಬರಲಿದೆ. ಇದಲ್ಲದೆ ನಿಮ್ಮ ಆತ್ಮವಿಶ್ವಾಸದಲ್ಲಿಯೂ ಕೂಡ ಅಪಾರ ಹೆಚ್ಚಳವನ್ನು ನೀವು ಗಮನಿಸುವಿರಿ. ಕೌಟುಂಬಿಕ ಜೀವನದಲ್ಲಿ ನಡೆದುಕೊಂಡು ಬರುತ್ತಿದ್ದ ಸಮಸ್ಯೆಗಳು ಅಂತ್ಯವಾಗಲಿವೆ ಮತ್ತು ಸಂಬಂಧಗಳು ಗಟ್ಟಿಗೊಳ್ಳಲಿವೆ. ಈ ಅವಧಿಯಲ್ಲಿ ನಿಮ್ಮ ವ್ಯಕ್ತಿತ್ವದಲ್ಲಿ ಹೊಸ ಹೊಳಪು ಕಾಣಿಸಿಕೊಳ್ಳಲಿದೆ. ವ್ಯಾಪಾರದಲ್ಲಿ ಹಲವು ಒಪ್ಪಂದಗಳನ್ನು ನೀವು ಮಾಡಿಕೊಳ್ಳುವ ಸಾಧ್ಯತೆ ಇದೆ. ಇನ್ನೊಂದೆಡೆ ನೀವು ಪಾರ್ಟ್ನರ್ಶಿಪ್ ನಲ್ಲಿ ಕೆಲಸ ಆರಂಭಿಸಲು ಬಯಸುವವರಿಗೆ ಇದು ಸಕಾಲವಾಗಿದೆ.   

ಕರ್ಕ ರಾಶಿ: ಸೂರ್ಯ, ಬುಧ ಹಾಗೂ ಗುರುವಿನ ಯುತಿ ನಿಮ್ಮ ಜಾತಕದ ಪಾಲಿಗೆ ಸಾಕಷ್ಟು ಅನುಕೂಲಕರ ಸಿದ್ಧವಾಗಲಿದೆ. ಏಕೆಂದರೆ ಈ ಮೈತ್ರಿ ನಿಮ್ಮ ಜಾತಕದ ಕರ್ಮ ಭಾವದಲ್ಲಿ ನಿರ್ಮಾಣಗೊಳ್ಳುತ್ತಿದೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ನೌಕರಿಯ ಹೊಸ ಅವಕಾಶಗಳು ಪ್ರಾಪ್ತಿಯಾಗುವ ಸಾಧ್ಯತೆ ಇದೆ. ಕಾರ್ಯಸ್ಥಳದಲ್ಲಿ ನೀವು ನಿಮ್ಮ ಕೆಲಸದ ಸಹಾಯದಿಂದ ಇತರರ ಭಾರಿ ಮೆಚ್ಚುಗೆಗೆ ಪಾತ್ರರಾಗುವಿರಿ. ಈ ಅವಧಿಯಲ್ಲಿ ನಿಮ್ಮ ಎಲ್ಲಾ ಮನೋಕಾಮನೆಗಳು ಪೂರ್ಣಗೊಳ್ಳಲಿವೆ ನಿಮಗೆ ಕಾರ್ಯಸಿದ್ಧಿ ಪ್ರಾಪ್ತಿಯಾಗಲಿದೆ. ವ್ಯಾಪಾರ ವರ್ಗದ ಜನರಿಗೆ ವಿಶೇಷವಾಗಿ ಈ ಸಮಯ ಸಾಕಷ್ಟು ಅನುಕೂಲಕರವಾಗಿದೆ. ಪಾರ್ಟ್ನರ್ಶಿಪ್ ವ್ಯವಹಾರದಲ್ಲಿ ನಿಮಗೆ ಸಾಕಷ್ಟು ಲಾಭವಾಗುವ ಸಾಧ್ಯತೆ ಇದೆ. ಆದರೆ, ನಿಮ್ಮ ಮೇಲೆ ಶನಿಯ ಎರಡೂವರೆ ವರ್ಷಗಳ ಕಾಟ ನಡೆಯುತ್ತಿರುವ ಕಾರಣ, ನಿರ್ಣಯಗಳನ್ನು ಸ್ವಲ್ಪ ಜಾಗ್ರತೆಯಿಂದ ಕೈಗೊಳ್ಳಿ.  

ಮಿಥುನ ರಾಶಿ: ಸೂರ್ಯ, ಬುಧ ಹಾಗೂ ಗುರುವಿನ ಮೈತ್ರಿ ನಿಮ್ಮ ಪಾಲಿಗೆ ಅತ್ಯಂತ ಲಾಭದಾಯಕ ಸಿದ್ಧವಾಗಲಿದೆ. ಏಕೆಂದರೆ ಈ ಮೈತ್ರಿ ನಿಮ್ಮ ಗೋಚರ ಜಾತಕದ ಆದಾಯದ ಭಾವದಲ್ಲಿ ನೆರವೇರುತ್ತಿದೆ. ಹೀಗಾಗಿ ಈ ಅವಧಿಯಲ್ಲಿ ನಿಮ್ಮ ಆದಾಯದಲ್ಲಿ ಅಪಾರ ಹೆಚ್ಚಳವನ್ನು ನೀವು ಗಮನಿಸುವಿರಿ. ಜೊತೆಗೆ ಆದಾಯದ ಹೊಸ-ಹೊಸ ಮಾಧ್ಯಮಗಳು ನಿರ್ಮಾಣಗೊಳ್ಳಲಿವೆ. ಕಾರ್ಯ ಕ್ಷೇತ್ರದಲ್ಲಿ ಹಿರಿಯ ಅಧಿಕಾರಿಗಳಿಂದ ನಿಮ್ಮ ಪರಿಶ್ರಮಕ್ಕೆ ಮೆಚ್ಚುಗೆ ವ್ಯಕ್ತವಾಗಲಿದೆ. ನಿಮಗೆ ಪ್ರೋಯಮೋಷನ್ ಕೂಡ ಲಭಿಸುವ ಸಾಧ್ಯತೆ ಇದೆ. ಆರ್ಥಿಕ ವೇದಿಕೆಯಲ್ಲಿ ಉನ್ನತಿಯ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಒಂದು ವೇಳೆ ನೀವು ಷೇರು ಮಾರುಕಟ್ಟೆಯಲ್ಲಿ ಅಥವಾ ಲಾಟರಿಯಲ್ಲಿ ಹಣ ಹೂಡಿಕೆ ಮಾಡುತ್ತಿದ್ದರೆ, ಈ ಸಮಯ ನಿಮ್ಮ ಪಾಲಿಗೆ ಅನುಕೂಲಕರ ಸಾಬೀತಾಗಲಿದೆ. ಸಾಲ, ಅನಾವಶ್ಯಕ ಖರ್ಚನ್ನು ನಿಯಂತ್ರಿಸಲು ಪ್ರಯತ್ನಿಸಿ. ಇದರಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಉತ್ತಮ ನಿರ್ವಹಣೆಯಾಗಲಿದೆ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)  

ZEENEWS TRENDING STORIES

By continuing to use the site, you agree to the use of cookies. You can find out more by Tapping this link