ತುಳಸಿ ಎಲೆ, ಕಡ್ಡಿ ಅಲ್ಲ ಈ ಭಾಗವನ್ನು ಮನೆ ಮುಖ್ಯ ದ್ವಾರಕ್ಕೆ ಕಟ್ಟಿ!ಮನೆ ಹೊಸಲು ದಾಟಿ ಹೋಗುವುದಿಲ್ಲ ಮಹಾಲಕ್ಷ್ಮೀ !ಉಕ್ಕಿ ಬರುತ್ತಲೇ ಇರುವುದು ಧನ ಸಂಪತ್ತು
ಜ್ಯೋತಿಷ್ಯ ಮತ್ತು ಧರ್ಮದಲ್ಲಿ ತುಳಸಿಗೆ ವಿಶೇಷ ಪ್ರಾಮುಖ್ಯತೆ ಇದೆ. ನಮ್ಮ ಎಲ್ಲಾ ಸಮಸ್ಯೆಗಳಿಗೆ ತುಳಸಿ ಬಳಿಯೇ ಉತ್ತರವಿರುತ್ತದೆ.
ತುಳಸಿಯ ಈ ಪರಿಹಾರ ಕಾರ್ಯವನ್ನು ಅನುಸರಿಸುವುದರಿಂದ ಆರ್ಥಿಕ ಬಿಕ್ಕಟ್ಟು ಎದುರಾಗುವುದೇ ಇಲ್ಲ. ಮಹಾ ಲಕ್ಷ್ಮೀಯ ಕೃಪೆ ಸದಾ ಮನೆ ಮತ್ತು ಮನೆ ಮಂದಿ ಮೇಲೆ ಇರುತ್ತದೆ.
ವಾಸ್ತು ಶಾಸ್ತ್ರದ ಪ್ರಕಾರ,ಬಡತನ ತೊಡೆದು ಹಾಕುವ ಮೂಲ ಮಂತ್ರವೇ ತುಳಸಿ ಬೇರು. ಮನೆಯ ಮುಖ್ಯ ಬಾಗಿಲಿಗೆ ತುಳಸಿ ಬೇರನ್ನು ಕಟ್ಟಿದರೆ ಆ ಮನೆಯ ಮೇಲೆ ಲಕ್ಷ್ಮೀ ಕೃಪೆ ನಿರಂತರವಾಗಿ ಇರುತ್ತದೆಯಂತೆ.
ಹೀಗೆ ಮಾಡುವುದರಿಂದ ಎಲ್ಲಾ ರೀತಿಯ ಸಾಲಗಳು ನಿವಾರಣೆಯಾಗುತ್ತವೆ. ಈ ಕುಟುಂಬ ಮತ್ತು ಕುಟುಂಬಕ್ಕೆ ಸಂಬಂಧಪಟ್ಟವರ ಪ್ರತಿಯೊಬ್ಬರ ಜೀವನದಲ್ಲಿ ಸಂಪತ್ತಿನ ಸುಧೆ ಹರಿಯುತ್ತದೆಯಂತೆ.
ತುಳಸಿಯ ಬೇರನ್ನು ಕೆಂಪು ಬಟ್ಟೆಯಲ್ಲಿ ಇಟ್ಟು, ಅದಕ್ಕೆ ಅಕ್ಷತೆ ಬೆರೆಸಿ ಕಟ್ಟಿಕೊಳ್ಳಿ. ಈಗ ಈ ಬಟ್ಟೆಯ ಗಂಟನ್ನು ಮನೆಯ ಮುಖ್ಯ ದ್ವಾರಕ್ಕೆ ಕಟ್ಟಬೇಕು.
ಇದಲ್ಲದೇ ಲಕ್ಷ್ಮೀ ದೇವಿಯ ಪಾದಗಳ ಚಿಹ್ನೆ ಅಥವಾ ಸ್ವಸ್ತಿಕ ಚಿಹ್ನೆಯನ್ನು ಕೂಡಾ ಬಾಗಿಲಿಗೆ ಹಾಕಬಹುದು.ಇದು ಕೂಡಾ ಶುಭ ಫಲಿತಾಂಶವನ್ನೇ ನೀಡುತ್ತದೆ ಎಂದು ಹೇಳಲಾಗುತ್ತದೆ.
ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.