ಹೊಸ ವರ್ಷದ ನಂತರವೂ ಡಯಾಬಿಟೀಸ್ ನಿಯಂತ್ರಣದಲ್ಲಿರಬೇಕಾದರೆ ಹೀಗೆ ಮಾಡಿ .!
ಕೆಲವು ವಿಷಯಗಳ ಬಗ್ಗೆ ಕಾಳಜಿ ವಹಿಸುವ ಮೂಲಕ, ಮಧುಮೇಹವನ್ನು ನಿಯಂತ್ರಿಸಬಹುದು. ಅದರ ಸಹಾಯದಿಂದ ಮಧುಮೇಹಿಗಳು ಹಬ್ಬದ ಋತುವಿನಲ್ಲಿ ತಮ್ಮ ಕಾಳಜಿ ವಹಿಸಿಕೊಳ್ಳಬಹುದು.
ನಿಮ್ಮ ಆಹಾರದ ಪ್ಲಾನ್ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸುವಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತದೆ. ಆದ್ದರಿಂದಲೇ ಹಬ್ಬ ಹರಿದಿನಗಳ ಆಗಮನಕ್ಕೆ ಮುನ್ನ ನಿಮ್ಮ ಪೌಷ್ಟಿಕತಜ್ಞರ ಸಲಹೆಯಂತೆ ಡಯಟ್ ಪ್ಲಾನ್ ತಯಾರಿಸಿ.
ಔಷಧಿಗಳನ್ನು ಸಮಯಕ್ಕೆ ತೆಗೆದುಕೊಳ್ಳಿ ಮತ್ತು ರಕ್ತದಲ್ಲಿನ ಸಕ್ಕರೆಯ ಮಟ್ಟದಲ್ಲಿ ಯಾವುದೇ ಬದಲಾವಣೆಯಾದರೆ ವೈದ್ಯರಿಗೆ ತಿಳಿಸಿ.
ಪಾರ್ಟಿ, ಊಟದ ನಂತರ ಸ್ವಲ್ಪ ಸಮಯ ನಡೆಯಿರಿ. ಹೀಗಾದಾಗ ಕ್ಯಾಲೊರಿಗಳನ್ನು ಬರ್ನ್ ಮಾಡಲು ಸಹಾಯ ಮಾಡುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ.
ತೂಕ ನಷ್ಟ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸಲು, ಕಾಲಕಾಲಕ್ಕೆ ಆಹಾರವನ್ನು ಸೇವಿಸಬೇಕು.