ರಾತ್ರಿ ಮಲಗುವ ಮುನ್ನ ಈ ಸೊಪ್ಪಿನ ನೀರನ್ನು ಕುಡಿದರೆ ಒಂದೇ ವಾರದಲ್ಲಿ ಇಳಿಯುತ್ತೆ ಸೊಂಟದ ಬೊಜ್ಜು
ತೂಕ ಹೆಚ್ಚಾಗಲು ರಾತ್ರಿಯ ಊಟವೇ ದೊಡ್ಡ ಕಾರಣ ಎಂದು ಕೆಲವೇ ಜನರಿಗೆ ತಿಳಿದಿದೆ. ರಾತ್ರಿ ಮಲಗುವ ಮುನ್ನ ಪೂರ್ಣ ಪ್ರಮಾಣದ ಊಟವನ್ನು ಸೇವಿಸಿದರೆ, ತೂಕ ಹೆಚ್ಚಾಗಲು ಪ್ರಾರಂಭಿಸುತ್ತದೆ. ಹಾಗಾಗಿ ಮಲಗುವ ಮುನ್ನ ಈ ನೀರನ್ನು ಕುಡಿದರೆ ತೂಕ ಇಳಿಕೆ ಮಾಡಬಹುದು.
ತೂಕವನ್ನು ನಿಯಂತ್ರಿಸಲು ಬಯಸಿದರೆ, ರಾತ್ರಿ ಮಲಗುವ ಎರಡು ಗಂಟೆಗಳ ಮೊದಲು ಆಹಾರವನ್ನು ಸೇವಿಸಿ. ಮಲಗುವ ಸಮಯದಲ್ಲಿ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುವ ಕೆಲವು ಪಾನೀಯಗಳನ್ನು ಸೇವಿಸಿ..
ಮೆಂತ್ಯ ಚಹಾ - ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ ಮೆಂತ್ಯ ಚಹಾವನ್ನು ಕುಡಿಯಬಹುದು. ಇದು ತೂಕ ಇಳಿಕೆಗೆ ಮಾತ್ರವಲ್ಲ, ಜೀರ್ಣಕ್ರಿಯೆಯನ್ನು ಸುಧಾರಿಸುವಲ್ಲಿ ಪರಿಣಾಮಕಾರಿಯಾಗಿದೆ. ಒಂದು ಚಮಚ ಮೆಂತ್ಯವನ್ನು ರಾತ್ರಿಯಿಡೀ ಒಂದು ಲೋಟ ನೀರಿನಲ್ಲಿ ನೆನೆಸಿ, ಬೆಳಿಗ್ಗೆ ಅದನ್ನು ಫಿಲ್ಟರ್ ಮಾಡಿ ಮತ್ತು ನೀರನ್ನು ಪಕ್ಕಕ್ಕೆ ಇರಿಸಿ. ಮತ್ತು ಈ ನೀರನ್ನು ಉಗುರು ಬೆಚ್ಚಗೆ ಇರುವಾಗ ಕುಡಿಯಿರಿ. ರಾತ್ರಿ ಮಲಗುವ ಮುನ್ನ ಕುಡಿದರೂ ಒಳ್ಳೆಯದೇ..
ಅರಿಶಿನ ಹಾಲು- ಅರಿಶಿನದ ಗುಣಲಕ್ಷಣಗಳ ಬಗ್ಗೆ ನಮಗೆಲ್ಲರಿಗೂ ತಿಳಿದಿದೆ. ಅರಿಶಿನವು ಆಹಾರಕ್ಕೆ ಬಣ್ಣ ಮತ್ತು ರುಚಿಯನ್ನು ನೀಡುವುದು ಮಾತ್ರವಲ್ಲದೆ, ಇದು ಹಲವಾರು ಗುಣಗಳಿಗೆ ಹೆಸರುವಾಸಿಯಾಗಿದೆ. ಪ್ರತಿದಿನ ರಾತ್ರಿ ಮಲಗುವ ಮೊದಲು ಅರಿಶಿನ ಹಾಲನ್ನು ಕುಡಿಯಬೇಕು. ಹೀಗೆ ಮಾಡುವುದರಿಂದ ನಿಮ್ಮ ತೂಕ ನಿಯಂತ್ರಣದಲ್ಲಿರುತ್ತದೆ.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee ಮಾಧ್ಯಮವು ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)