Vaccination Certificate : ನಿಮ್ಮಲ್ಲಿರುವ Vaccine Certificate ಅಸಲಿಯೋ ನಕಲಿಯೋ ಚೆಕ್ ಮಾಡಿ
ನಿಮ್ಮ ಬಳಿ ಇರುವ ಸರ್ಟಿಫೀಕೇಟ್ ಅಸಲಿಯೋ, ನಕಲಿಯೋ ಎಂದು ತಿಳಿದುಕೊಳ್ಳುವುದು ಬಹಳ ಮುಖ್ಯ. ಇದಕ್ಕಾಗಿ, ನಿಮ್ಮ ಇಂಟರ್ನೆಟ್ ಬ್ರೌಸರ್‌ನಲ್ಲಿ https://verify.cowin.gov.in/ ಗೆ ಭೇಟಿ ನೀಡಿ. ಇಲ್ಲಿ ವೆರಿಫೈ ಸರ್ಟಿಫಿಕೇಟ್ ಮೇಲೆ ಕ್ಲಿಕ್ ಮಾಡಿ.
Cowin ವೆರಿಫಿಕೇಶನ್ ವೆಬ್‌ಸೈಟ್‌ನಲ್ಲಿ “Scan QR code” ಮೇಲೆ ಕ್ಲಿಕ್ ಮಾಡಿ. ಕ್ಲಿಕ್ ಮಾಡುವಾಗ, ಕ್ಯಾಮೆರಾಗಳನ್ನು ಸಕ್ರಿಯಗೊಳಿಸಲು ಅಧಿಸೂಚನೆ ಬರುತ್ತದೆ. ಅದನ್ನು Allow ಮಾಡಿ.
ಕ್ಯೂಆರ್ ಕೋಡ್ ಅನ್ನು ಕಾಗದದ ಮೇಲೆ ಅಥವಾ ಡಿಜಿಟಲ್ ಪ್ರಮಾಣಪತ್ರದಲ್ಲಿ ಸ್ಕ್ಯಾನ್ ಮಾಡಬಹುದು. ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡುವಾಗ ಅಧಿಕೃತ ವ್ಯಾಕ್ಸಿನೇಷನ್ ಸರ್ಟಿಫಿಕೇಟ್ ಆಗಿದ್ದರೆ, "Certificate Successfully Verified" ಎಂದು ತೋರಿಸುತ್ತದೆ.
Message: “Certificate Successfully Verified” Name Age Gender Beneficiary Reference ID Date of Dose Certificate Issued: Provisional/Final Vaccination atಈ ಎಲ್ಲಾ ಮಾಹಿತಿಗಳು ನಿಮ್ಮ ಸ್ಕ್ರೀನ್ ನಲ್ಲಿ ಕಾಣಿಸುತ್ತದೆ.
ಪ್ರಮಾಣಪತ್ರವು ನಕಲಿಯಾಗಿದ್ದರೆ, ಮೇಲಿನ ಮಾಹಿತಿ ಕಾಣಿಸುತ್ತದೆ. ಅದರ ಜೊತೆಗೆ Certificate Invalid ಎನ್ನುವುದನ್ನು ಕೂಡಾ ತೋರಿಸುತ್ತದೆ.