Weather Update: ವಿವಿಧೆಡೆ ಗುಡುಗು ಸಹಿತ ಮಳೆ-ಬಿರುಗಾಳಿಯ ಮುನ್ಸೂಚನೆ! ಎಚ್ಚರಿಕೆ ವಹಿಸಲು ಇಲಾಖೆ ಮನವಿ
ಗಂಗಾನಗರ, ಜೈಪುರ್, ಚುರು, ಸಿಕರ್ ಮತ್ತು ಭಿಲ್ವಾರಾದಂತಹ ರಾಜಸ್ಥಾನದ ಹಲವು ನಗರಗಳಲ್ಲಿ ಲಘುವಾಗಿ ಮಧ್ಯಮ ಪೂರ್ವ ಮಾನ್ಸೂನ್ ಮಳೆ ದಾಖಲಾಗಿದೆ. ಈ ಕಾರಣದಿಂದಾಗಿ, ವಿವಿಧ ಪ್ರದೇಶಗಳಲ್ಲಿ ತಾಪಮಾನವು 4-5 ಡಿಗ್ರಿ ಸೆಲ್ಸಿಯಸ್ ಕಡಿಮೆಯಾಗಿದೆ.
ಹವಾಮಾನ ಇಲಾಖೆ ಪ್ರಕಾರ, ಈ ವೆಸ್ಟರ್ನ್ ಡಿಸ್ಟರ್ಬನ್ಸ್ ನಡುವೆಯೂ, ಇಂದು ತಾಪಮಾನವು ಮತ್ತೆ ಏರಲಿದೆ. ಹೀಗಾಗಿ ಜನರು ಬಿಸಿಲಿನಿಂದ ಕಂಗಾಲಾಗಿ ಹೋಗಲಿದ್ದಾರೆ. ಇಂದಿನಿಂದ, ಮುಂದಿನ 3-4 ದಿನಗಳಲ್ಲಿ ರಾಜಸ್ಥಾನ, ದೆಹಲಿ-ಎನ್‌ಸಿಆರ್, ಪಂಜಾಬ್ ಮತ್ತು ಹರಿಯಾಣದಲ್ಲಿ ತಾಪಮಾನವು 42-43 ಡಿಗ್ರಿಗಳಿಗೆ ಏರಲಿದೆ.
ಖಾಸಗಿ ಹವಾಮಾನ ಸಂಸ್ಥೆ ಸ್ಕೈಮೆಟ್ ಮುಂದಿನ ಒಂದು ವಾರದಲ್ಲಿ ಬಿಸಿಲಿನ ತಾಪದಿಂದ ಜನರು ಪರಿಹಾರ ಪಡೆಯುವ ಸಾಧ್ಯತೆಯಿದೆ. ಪಶ್ಚಿಮ ಹಿಮಾಲಯದ ಮೇಲೆ ಮತ್ತೊಂದು ತಾಜಾ ಪಾಶ್ಚಾತ್ಯ ಅಡಚಣೆ ಸಕ್ರಿಯವಾಗುತ್ತಿದೆ. ಇದರಿಂದಾಗಿ ಮೇ 22ರಿಂದ 28ರ ನಡುವೆ ಹಲವೆಡೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.
ಮೇ 22 ಮತ್ತು 23 ರಂದು ಭಾಗಶಃ ಮೋಡ ಕವಿದ ವಾತಾವರಣವಿರುತ್ತದೆ. ಆದರೂ ಮಳೆಯ ಸಾಧ್ಯತೆ ಕಡಿಮೆ ಇರುತ್ತದೆ ಎಂದು ಸಂಸ್ಥೆ ತಿಳಿಸಿದೆ. ಮೇ 24 ರಿಂದ 28 ರವರೆಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಪಂಜಾಬ್, ಹರಿಯಾಣ, ಚಂಡೀಗಢ, ಉತ್ತರ ಮತ್ತು ಪೂರ್ವ ರಾಜಸ್ತಾನ, ದೆಹಲಿ, ಪಶ್ಚಿಮ ಉತ್ತರ ಪ್ರದೇಶ, ಉತ್ತರ ಮಧ್ಯಪ್ರದೇಶದಲ್ಲಿ ಹಗಲು ರಾತ್ರಿ ಹಿತಕರ ವಾತಾವರಣ ಇರಲಿದೆ ಎಂದು ಅಂದಾಜಿಸಲಾಗಿದೆ.
ಹವಾಮಾನಶಾಸ್ತ್ರಜ್ಞರ ಪ್ರಕಾರ, ಹರಿಯಾಣ, ಉತ್ತರ ರಾಜಸ್ಥಾನ ಮತ್ತು ದೆಹಲಿಯ ಕೆಲ ಸ್ಥಳಗಳಲ್ಲಿ ಗುಡುಗು ಮಳೆಯಾಗುವ ಸಾಧ್ಯತೆಯಿದೆ. ಕರಾವಳಿ ಒಡಿಶಾ ಮತ್ತು ಆಂಧ್ರಪ್ರದೇಶದ ಕರಾವಳಿಯಲ್ಲಿ ಸಾಧಾರಣ ಮಳೆಯಾಗಬಹುದು.
ಮುಂದಿನ 24 ಗಂಟೆಗಳಲ್ಲಿ, ಈಶಾನ್ಯ ಭಾರತ ಮತ್ತು ಪಶ್ಚಿಮ ಬಂಗಾಳದ ಕೆಲವು ಭಾಗಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.