ಮನೆಯ ಈ ದಿಕ್ಕಿನಲ್ಲಿ `ಟಾಯ್ಲೆಟ್` ಇದ್ದರೆ ಜೀವನವೇ ಸರ್ವನಾಶ..! ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಲು ಸಾಧ್ಯವೇ ಇಲ್ಲ..!
ವಾಸ್ತು ತಜ್ಞರ ಪ್ರಕಾರ, ಮನೆಯಲ್ಲಿ ಟಾಯ್ಲೆಟ್ ಕೂಡ ಯಾವ ದಿಕ್ಕಿನಲ್ಲಿ ಇರಬೇಕು ಎಂಬುದನ್ನೂ ಉಲ್ಲೇಖಿಸಲಾಗಿದೆ.
ಮನೆಯ ಈಶಾನ್ಯ ಮೂಲೆಯಲ್ಲಿ ಯಾವುದೇ ಕಾರಣಕ್ಕೂ ಟಾಯ್ಲೆಟ್ ನಿರ್ಮಿಸಬಾರದು. ಇದರಿಂದ ಏನೆಲ್ಲಾ ಹಾನಿಯಾಗುತ್ತೆ ಗೊತ್ತಾ...
ಈಶಾನ್ಯ ಮೂಲೆಯ ಅಧಿಪತಿ ಈಶ್ವರ. ಈಶಾನ್ಯ ದಿಕ್ಕನ್ನು ದೇವಗುರು ಬೃಹಸ್ಪತಿಯ ದಿಕ್ಕು ಎನ್ನಲಾಗುತ್ತದೆ. ಈ ದಿಕ್ಕಿನಲ್ಲಿ ಟಾಯ್ಲೆಟ್ ನಿರ್ಮಿಸಿದರೆ ಗುರು ದೋಷ ಉಂಟಾಗುತ್ತದೆ.
ಈಶಾನ್ಯ ಮೂಲೆಯಲ್ಲಿ ಟಾಯ್ಲೆಟ್ ಇದ್ದರೆ ಮನೆಯಲ್ಲಿರುವವರಿಗೆ ಒಂದಿಲ್ಲೊಂದು ಆರೋಗ್ಯ ಸಮಸ್ಯೆಗಳು ಕಾಡುತ್ತವೆ.
ಈಶಾನ್ಯ ಮೂಲೆ ಪಾಸಿಟಿವ್ ಎನರ್ಜಿ ಇರುವ ದಿಕ್ಕು. ಈ ದಿಕ್ಕಿನಲ್ಲಿ ಟಾಯ್ಲೆಟ್ ನಿರ್ಮಿಸುವುದರಿಂದ ದುಡಿದ ಹಣವೆಲ್ಲಾ ನೀರಿನಂತೆ ಖರ್ಚಾಗುತ್ತೆ. ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಲು ಸಾಧ್ಯವೇ ಆಗುವುದಿಲ್ಲ.
ಮನೆಯ ಈಶಾನ್ಯ ದಿಕ್ಕಿನಲ್ಲಿ ಟಾಯ್ಲೆಟ್ ಇದ್ದರೆ ಸರ್ಪದೋಷ ಉಂಟಾಗುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.