ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಅತೀ ಹೆಚ್ಚು ಕ್ಯಾಚ್ ಪಡೆದ ಆಟಗಾರ ಯಾರು ಗೊತ್ತಾ?
ಭಾರತದ ಆತಿಥ್ಯದಲ್ಲಿ ಅಕ್ಟೋಬರ್ 5 ರಿಂದ ವಿಶ್ವಕಪ್ ಮಹಾ ಟೂರ್ನಿ ಪ್ರಾರಂಭವಾಗಲಿದೆ. ಈ ಸಂದರ್ಭದಲ್ಲಿ ‘ವಿಶ್ವಕಪ್ ವಿಶೇಷ’ ಲೇಖನದ ಮೂಲಕ ಕೆಲವೊಂದು ದಾಖಲೆಗಳ ಬಗ್ಗೆ ನಾವಿಂದು ನಿಮಗೆ ಸಂಕ್ಷಿಪ್ತ ಮಾಹಿತಿ ನೀಡಲಿದ್ದೇವೆ.
ಅಂದಹಾಗೆ ಈ ವರದಿಯಲ್ಲಿ ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಅತೀ ಹೆಚ್ಚು ಕ್ಯಾಚ್ ಪಡೆದ ಟಾಪ್ 10 ಆಟಗಾರರ ಬಗ್ಗೆ ನಿಮಗೆ ತಿಳಿಸಲಿದ್ದೇವೆ.
ಮಹೇಲಾ ಜಯವರ್ಧನೆ: ಶ್ರೀಲಂಕಾದ ದಂತಕಥೆ ಮಹೇಲಾ ಜಯವರ್ಧನೆ 1999 ಮತ್ತು 2015 ರ ನಡುವೆ ಆಡಿರುವ 40 ಏಕದಿನ ವಿಶ್ವಕಪ್ ಪಂದ್ಯಗಳಲ್ಲಿ 16 ಕ್ಯಾಚ್’ಗಳನ್ನು ಪಡೆದಿದ್ದಾರೆ.
ಬ್ರಿಯಾನ್ ಲಾರಾ: ವೆಸ್ಟ್ ಇಂಡೀಸ್ ದಿಗ್ಗಜ ಆಟಗಾರ ಬ್ರಿಯಾನ್ ಲಾರಾ 1992 ಮತ್ತು 2007 ರ ನಡುವೆ 34 ವಿಶ್ವಕಪ್ ಪಂದ್ಯಗಳನ್ನಾಡಿದ್ದು, 16 ಕ್ಯಾಚ್’ಗಳನ್ನು ಪಡೆದಿದ್ದಾರೆ.
ಇಯಾನ್ ಮೋರ್ಗಾನ್: 2007 ಮತ್ತು 2019 ರ ನಡುವೆ ಇಂಗ್ಲೆಂಡ್ ಮತ್ತು ಐರ್ಲೆಂಡ್ ಪರ 29 ವಿಶ್ವಕಪ್ ಪಂದ್ಯಗಳನ್ನು ಆಡಿರುವ ಇಯಾನ್ 16 ಕ್ಯಾಚ್ ಪಡೆದಿದ್ದಾರೆ.
ಕ್ರಿಸ್ ಕೈರ್ನ್ಸ್: ಮಾಜಿ ನ್ಯೂಜಿಲೆಂಡ್ ಆಟಗಾರ 1992 ಮತ್ತು 2003 ರ ನಡುವೆ 28 ಏಕದಿನ ವಿಶ್ವಕಪ್ ಪಂದ್ಯಗಳನ್ನು ಆಡಿದ್ದು, 16 ಕ್ಯಾಚ್ ಪಡೆದಿದ್ದಾರೆ
ಫಾಫ್ ಡು ಪ್ಲೆಸಿಸ್: ದಕ್ಷಿಣ ಆಫ್ರಿಕಾದ ಮಾಜಿ ನಾಯಕ 2011 ಮತ್ತು 2019 ರ ನಡುವೆ 23 ಪಂದ್ಯಗಳನ್ನಾಡಿದ್ದ 16 ಕ್ಯಾಚ್ ಪಡೆದಿದ್ದಾರೆ.
ಕ್ರಿಸ್ ಗೇಲ್: ವೆಸ್ಟ್ ಇಂಡೀಸ್ ಪವರ್-ಹಿಟ್ಟರ್ ಕ್ರಿಸ್ ಗೇಲ್ 2003 ಮತ್ತು 2019 ರ ನಡುವೆ 35 ವಿಶ್ವಕಪ್ ಪಂದ್ಯಗಳನ್ನಾಡಿದ್ದಾರೆ. ಅದರಲ್ಲಿ 17 ಕ್ಯಾಚ್’ಗಳನ್ನು ಪಡೆದಿದ್ದಾರೆ.
ಸನತ್ ಜಯಸೂರ್ಯಾ: ಶ್ರೀಲಂಕಾದ ದಿಗ್ಗಜ ಮತ್ತು ಅನುಭವಿ ಓಪನರ್ ಸನತ್ ಜಯಸೂರ್ಯಾ 1992 ಮತ್ತು 2007 ರ ನಡುವೆ 38 ಪಂದ್ಯಗಳಲ್ಲಿ 18 ಕ್ಯಾಚ್’ಗಳನ್ನು ಪಡೆದಿದ್ದಾರೆ.
ಜೋ ರೂಟ್: ಈ ಇಂಗ್ಲೆಂಡ್ ಆಟಗಾರ 2015 ರಿಂದ 2019 ರವರೆಗೆ 17 ಪಂದ್ಯಗಳಲ್ಲಿ 20 ಕ್ಯಾಚ್’ಗಳನ್ನು ಪಡೆದಿದ್ದಾರೆ.
ಆಸ್ಟ್ರೇಲಿಯಾದ ದಿಗ್ಗಜ ಮಾಜಿ ನಾಯಕ ರಿಕಿ ಪಾಂಟಿಂಗ್ 1996 ಮತ್ತು 2011 ರ ನಡುವೆ 46 ಪಂದ್ಯಗಳಲ್ಲಿ ಗರಿಷ್ಠ ಅಂದರೆ 28 ಕ್ಯಾಚ್’ಗಳನ್ನು ಪಡೆದಿದ್ದಾರೆ.