Top 5 Bollywood Star Fees : ಬಾಲಿವುಡ್ ಈ ಸ್ಟಾರ್ ನಟರು ಪಡೆಯುವ ಸಂಭಾವನೆ ಕೇಳಿದ್ರೆ ಬೆಚ್ಚಿ ಬೀಳ್ತಿರಾ!
ಹೃತಿಕ್ ರೋಷನ್: ಎರಡು ದಶಕಗಳಿಗೂ ಹೆಚ್ಚು ಕಾಲ ಅಭಿಮಾನಿಗಳ ಹೃದಯವನ್ನು ಆಳುತ್ತಿರುವ ನಟ ಹೃತಿಕ್ ರೋಷನ್, ತಮ್ಮ ವೃತ್ತಿಜೀವನದಲ್ಲಿ ಹಲವಾರು ಉತ್ತಮ ಸಿನಿಮಾಗಳನ್ನು ನೀಡಿದ ಸೂಪರ್‌ಸ್ಟಾರ್. ಪ್ರಸ್ತುತ ಅವರ ಸಂಭಾವನೆ ಬಗ್ಗೆ ಹೇಳುವುದಾದರೆ, ಹೃತಿಕ್ ಚಿತ್ರವೊಂದಕ್ಕೆ 75 ಕೋಟಿ ವರೆಗೆ ಸಂಭಾವನೆ ಪಡೆಯುತ್ತಾರೆ ಎಂದು ಹೇಳಲಾಗುತ್ತಿದೆ.. (ಫೋಟೋ - ಸಾಮಾಜಿಕ ಮಾಧ್ಯಮ)
ಅಕ್ಷಯ್ ಕುಮಾರ್: ಮುಂದಿನ ಎರಡು ವರ್ಷಗಳ ಕಾಲ ಫುಲ್ ಬ್ಯುಸಿ ಆಗಿರುವ ಏಕೈಕ ನಟರೆಂದರೆ ಅದು ಅಕ್ಷಯ್ ಕುಮಾರ್. ಪ್ರತಿ ವರ್ಷ ಅಕ್ಷಯ್ ನಟಿಸಿದ 4-5 ಸಿನಿಮಾಗಳನ್ನು ಬಿಡುಗಡೆಯಾಗುತ್ತವೆ ಮತ್ತು ಮಾಧ್ಯಮ ವರದಿಗಳ ಪ್ರಕಾರ, ಅವರು ಪ್ರತಿ ಚಿತ್ರಕ್ಕೆ 117 ರಿಂದ 135 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ ಎಂದು ಹೇಳಲಾಗುತ್ತಿದೆ. (ಫೋಟೋ - ಸಾಮಾಜಿಕ ಮಾಧ್ಯಮ)
ಸಲ್ಮಾನ್ ಖಾನ್: ಸಲ್ಮಾನ್ ಖಾನ್ ಅವರ ಅಭಿಮಾನಿಗಳ ಬಗ್ಗೆ ನಾವು ಏನು ಹೇಳಬೇಕು. ಬಂದು ನಮಸ್ಕಾರ ಮಾಡಿದರೂ ಅಭಿಮಾನಿಗಳು ಹುಚ್ಚರಾಗುತ್ತಾರೆ. ಸಲ್ಮಾನ್ ಖಾನ್ ಅನೇಕ ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಟೈಗರ್ 3, ಕಭಿ ಈದ್ ಕಭಿ ದೀಪಾವಳಿ, ಬಜರಂಗಿ ಭಾಯಿಜಾನ್ 2 ಮುಂತಾದ ಚಲನಚಿತ್ರಗಳನ್ನು ಸೇರಿಸಲಾಗಿದೆ. ಮಾಧ್ಯಮ ವರದಿಗಳ ಪ್ರಕಾರ ಸಲ್ಮಾನ್ ಅವರ ಶುಲ್ಕದ ಬಗ್ಗೆ ಮಾತನಾಡುತ್ತಾ, ಅವರು ಚಿತ್ರವೊಂದಕ್ಕೆ 70-75 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ ಎಂದು ಹೇಳಲಾಗುತ್ತಿದೆ. (ಫೋಟೋ - ಸಾಮಾಜಿಕ ಮಾಧ್ಯಮ)
ಶಾರುಖ್ ಖಾನ್: ಶಾರುಖ್ ಖಾನ್ 2018 ರಲ್ಲಿ ಬಿಡುಗಡೆಯಾದ ಝೀರೋ ಸಿನಿಮಾ ನಂತರ ಯಾವುದೆ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲ. ಈಗ 4 ವರ್ಷಗಳ ನಂತರ ಶಾರುಖ್ ಸಿನಿಮಾಗೆ ಪುನರಾಗಮನ ಮಾಡುತ್ತಿದ್ದಾರೆ. ಪಠಾಣ್, ಡಂಕಿ ಅವರ ಮುಂಬರುವ ಚಿತ್ರಗಳಾಗಿದ್ದು, ಈ ಸಿನಿಮಾಗಳನ್ನು ನೋಡಲು ಅಭಿಮಾನಿಗಳು ತುಂಬಾ ಉತ್ಸುಕರಾಗಿದ್ದಾರೆ. ಈ ಚಿತ್ರಗಳಿಗೆ ಶಾರುಖ್ ತಮ್ಮ ಸಂಭಾವನೆಯನ್ನು ದುಪ್ಪಟ್ಟು ಮಾಡಿದ್ದಾರೆ ಎಂಬ ಸುದ್ದಿಯೂ ಇದೆ. ಮಾಧ್ಯಮ ವರದಿಗಳ ಪ್ರಕಾರ ಶಾರುಖ್ ಖಾನ್ ಪಠಾಣ್ ಗೆ 100 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. (ಫೋಟೋ - ಸಾಮಾಜಿಕ ಮಾಧ್ಯಮ)
ಅಮೀರ್ ಖಾನ್: ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ ಅವರ ಪ್ರತಿಯೊಂದು ಸಿನಿಮಾವನ್ನು ಬಹಳ ಎಚ್ಚರಿಕೆಯಿಂದ ಆಯ್ಕೆ ಮಾಡಿಕೊಳ್ಳುತ್ತಾರೆ, ಆದ್ದರಿಂದ ಅವರ ಸಿನಿಮಾಗಳು ನೋಡಲು ತುಂಬಾ ಅದ್ಭುತವಾಗಿ ಮೂಡಿ ಬರುತ್ತವೆ. ಅಮೀರ್ ಖಾನ್ ಶೀಘ್ರದಲ್ಲೇ ಲಾಲ್ ಸಿಂಗ್ ಚಡ್ಡಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮತ್ತೊಂದೆಡೆ, ಅವರ ಸಂಭಾವನೆ ಬಗ್ಗೆ ಹೇಳುವುದಾದರೆ, ಅವರು ಒಂದು ಸಿನಿಮಾಗೆ 75-80 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ ಎಂದು ಹೇಳಲಾಗುತ್ತಿದೆ. (ಫೋಟೋ - ಸಾಮಾಜಿಕ ಮಾಧ್ಯಮ)