Vitamin C Rich Foods: ವಿಟಮಿನ್ ಸಿ ಸಮೃದ್ಧ ಟಾಪ್ 5 ಹಣ್ಣು-ತರಕಾರಿಗಳು
ಆರೋಗ್ಯ ತಜ್ಞರ ಪ್ರಕಾರ, ಆರೋಗ್ಯವಂತ ದೇಹಕ್ಕೆ ವಿಟಮಿನ್ ಸಿ ತುಂಬಾ ಅಗತ್ಯ. ಆರೋಗ್ಯವಂತ ವಯಸ್ಕ ಪುರುಷನಿಗೆ ದಿನಕ್ಕೆ 90 ಮಿಗ್ರಾಂ ನಷ್ಟು ವಿಟಮಿನ್ ಸಿ ಅಗತ್ಯವಿದ್ದರೆ, ಆರೋಗ್ಯವಂತ ಮಹಿಳೆಗೆ ಪ್ರತಿದಿನ 75 ಮಿಗ್ರಾಂ ಅಗತ್ಯವಿದೆ. ಹಾಗಾಗಿ ನಮ್ಮ ದಿನ ನಿತ್ಯದ ಆಹಾರದಲ್ಲಿ ವಿಟಮಿನ್ ಸಿ ಸಮೃದ್ಧ ಹಣ್ಣು-ತರಕಾರಿಗಳ ಸೇವನೆ ಬಹಳ ಅಗತ್ಯ. ಕಿತ್ತಳೆಗಿಂತ ಹೆಚ್ಚಿನ ವಿಟಮಿನ್ ಸಿ ಕಂಡುಬರುವ ಅನೇಕ ನೈಸರ್ಗಿಕ ಮೂಲಗಳಿವೆ. ಅವುಗಳೆಂದರೆ...
ಪೌಷ್ಟಿಕಾಂಶ ಭರಿತ ಕಿವಿ ಹಣ್ಣಿನಲ್ಲಿ ನಾರಿಣಾಂಶ ಹೇರಳವಾಗಿದ್ದು ಇದು ಜೀರ್ಣಾಂಗ ವ್ಯವಸ್ಥೆಯನ್ನು ಬಲಗೊಳಿಸುತ್ತದೆ. ಒಂದು ಸಣ್ಣ ಗಾತ್ರದ ಕಿವಿ ಹಣ್ಣಿನಲ್ಲಿ 137 ಮಿಗ್ರಾಂ ವಿಟಮಿನ್ ಸಿ ಕಂಡು ಬರುತ್ತದೆ.
ಬಹಳ ಸುಲಭವಾಗಿ ಲಭ್ಯವಿರುವ ಹಣ್ಣುಗಳಲ್ಲಿ ಪರಂಗಿ ಹಣ್ಣು ಕೂಡ ಒಂದು. ಇದರಲ್ಲಿ ಕಂಡು ಬರುವ ಉತ್ಕರ್ಷಣ ನಿರೋಧಕವು ಹಲವು ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಒಂದು ಕಪ್ ಪರಂಗಿ ಹಣ್ಣಿನಲ್ಲಿ 88 ಮಿಗ್ರಾಂ ವಿಟಮಿನ್ ಸಿ ಇರುತ್ತದೆ.
ಭಾರತೀಯ ಅಡುಗೆ ಮನೆಗಳಲ್ಲಿ ಸಾಮಾನ್ಯವಾಗಿ ಕಂಡು ಬರುವ ಹಣ್ಣು ದಪ್ಪ ಮೆಣಸಿನ ಕಾಯಿ. ಇದು ಆಹಾರದ ರುಚಿ ಹೆಚ್ಚಿಸುವ ಜೊತೆಗೆ ಆರೋಗ್ಯಕ್ಕೂ ಪ್ರಯೋಜನಕಾರಿ. ಒಂದು ಮಧ್ಯಮ ಗಾತ್ರದ ದಪ್ಪ ಮೆಣಸಿನ ಕಾಯಿಯಲ್ಲಿ 152 ಗ್ರಾಂ ವಿಟಮಿನ್ ಸಿ ಸಿಗುತ್ತದೆ.
ರುಚಿಕರ ಹಣ್ಣುಗಳಲ್ಲಿ ಒಂದಾದ ಸೀಬೆ ಹಣ್ಣಿನಲ್ಲಿ ಹಲವು ಪೋಷಕಾಂಶಗ್ಲೌ ಕಂಡುಬರುತ್ತವೆ. ಒಂದು ಮಧ್ಯಮ ಗಾತ್ರದ ಸೀಬೆ ಹಣ್ಣಿನಲ್ಲಿ ಸುಮಾರು 125 ಗ್ರಾಂ ವಿಟಮಿನ್ ಸಿ ಪಡೆಯಬಹುದು.
ತುಂಬಾ ರಸಭರಿತವಾದ ಹಣ್ಣು ಅನಾನಸ್. ಇದರಲ್ಲಿರುವ ಜೀರ್ಣಕಾರಿ ಕಿಣ್ವಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಒಂದು ಕಪ್ ಕತ್ತರಿಸಿದ ಅನಾನಸ್‌ನಲ್ಲಿ 79 ಮಿಗ್ರಾಂ ವಿಟಮಿನ್ ಸಿ ಲಭ್ಯವಾಗಲಿದೆ ಎಂದು ಹೇಳಲಾಗುತ್ತದೆ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಕೆಲವು ಸಂಶೋಧನೆ ಹಾಗೂ ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.