ಕಡಿಮೆ ಬೆಲೆಗೆ ಸಿಗುತ್ತಿದೆ Top 5 Smartphone, ವೈಶಿಷ್ಟ್ಯ ತಿಳಿಯಿರಿ
IP68 ರಕ್ಷಣೆಯ ವೈಶಿಷ್ಟ್ಯವನ್ನು ಹೊಂದಿರುವ ಫೋನ್ ನೀರಿನಲ್ಲಿ ಬಿದ್ದರೂ ಹಾಳಾಗುವುದಿಲ್ಲ. 6.5-ಇಂಚಿನ AMOLED ಡಿಸ್‌ಪ್ಲೇ ಮತ್ತು 120Hz ರಿಫ್ರೆಶ್ ರೇಟ್ ಹೊಂದಿರುವ ಈ ಸ್ಯಾಮ್‌ಸಂಗ್ ಫೋನ್‌ನಲ್ಲಿ 8GB RAM ಮತ್ತು 128GB ಸ್ಟೋರೇಜ್ ಇದೆ. ಎಕ್ಸಿನೋಸ್ 990 ಚಿಪ್ ನಿಂದ ನಡೆಸಲ್ಪಡುವ ಈ ಫೋನ್ ಅನ್ನು ನೀವು ಫ್ಲಿಪ್ ಕಾರ್ಟ್ ನಲ್ಲಿ ಈಗ 39,865 ರೂ ಗಳಿಗೆ ಖರೀದಿಸಬಹುದು.
ಅಮೆಜಾನ್ ನಲ್ಲಿ 39,999 ರೂ.ಗಳಿಗೆ ಸಿಗುವ ಫೋನ್ ವಾಟರ್ ಪ್ರೂಫ್ ಫೋನ್ ಗಳಲ್ಲಿ ಅತ್ಯಂತ ಜನಪ್ರಿಯವಾಗಿದೆ. IP53 ಡಸ್ಟ್ ಮತ್ತು ವಾಟರ್ ರೆಜಿಸ್ಟೆಂಟ್ ಹೊಂದಿರುವ ಈ ಫೋನ್‌ವಿಶೆಷತೆಗಳಿವೆ. 8GB RAM ಮತ್ತು 256GB UFS 3.1 ಸ್ಟೋರೇಜ್ ಹೊಂದಿರುವ ಈ ಫೋನ್ ಸ್ನಾಪ್‌ಡ್ರಾಗನ್ 888 ನಿಂದ ಚಾಲಿತವಾಗಿದೆ. 6.67-ಇಂಚಿನ AMOLED ಡಿಸ್‌ಪ್ಲೇ ಮತ್ತು 120Hz ರಿಫ್ರೆಶ್ ರೇಟ್ನೊಂದಿಗೆ Mi 11X ಪ್ರೊ 108MP ಕ್ಯಾಮೆರಾ ಜೊತೆಗೆ 8MP ಅಲ್ಟ್ರಾ-ವೈಡ್ ಸೆನ್ಸರ್ ಮತ್ತು 5MP ಸೆನ್ಸರ್‌ನೊಂದಿಗೆ ಬರುತ್ತದೆ.
2020 ರಲ್ಲಿ ಬಂದ ಐಫೋನ್ ಎಸ್ಇ IP57 ಸ್ಪೆಸಿಫಿಕೇಶನ್ ನೊಂದಿಗೆ ಬರುತ್ತದೆ. ಆದ್ದರಿಂದ ಇದು 1 ಮೀಟರ್ ವರೆಗೆ ನೀರಿನಲ್ಲಿ ಹಾಳಾಗದಂತೆ ಸ್ವಲ್ಪ ಸಮಯ ಉಳಿಯಬಹುದು. 64GB ಇಂಟರ್ನಲ್ ಸ್ಟೋರೇಜ್ ಹೊಂದಿರುವ ಈ ಫೋನ್ 4.7 ಇಂಚಿನ ಡಿಸ್ಪ್ಲೇ, 7MP ಫ್ರಂಟ್ ಕ್ಯಾಮೆರಾ ಮತ್ತು 12MP ಬ್ಯಾಕ್ ಕ್ಯಾಮೆರಾವನ್ನು ಹೊಂದಿದೆ. ಈ ಫೋನ್ ಆಪಲ್ ನ A13 ಬಯೋನಿಕ್ ಚಿಪ್ ನಿಂದ ಚಾಲಿತವಾಗಿದೆ. ನೀವು ಈ ಫೋನ್ ಅನ್ನು ರಿಲಯನ್ಸ್ ಡಿಜಿಟಲ್ ನಲ್ಲಿ .39,900 ರೂ. ಗೆ ಖರೀದಿಸಬಹುದು.
ಸ್ಯಾಮ್‌ಸಂಗ್‌ನ ಮತ್ತೊಂದು ಫೋನ್ ಕೂಡಾ ಈ ಪಟ್ಟಿಯಲ್ಲಿದೆ. 1 ಮೀಟರ್ ವರೆಗೆ ನೀರಿನಲ್ಲಿ ಸುರಕ್ಷಿತವಾಗಿರಿಸುವ ಸಾಮರ್ಥ್ಯ ಹೊಂದಿರುವ ಈ ಫೋನ್, IP67 ಸ್ಪೆಸಿಫಿಕೇಶನ್ ನೊಂದಿಗೆ ಬರುತ್ತದೆ. ಸ್ನಾಪ್‌ಡ್ರಾಗನ್ 720 ನಿಂದ ನಡೆಸಲ್ಪಡುವ ಈ ಫೋನ್ 6.7-ಇಂಚಿನ AMOLED ಡಿಸ್‌ಪ್ಲೇ ಸ್ಕ್ರೀನ್, 8GB RAM ಮತ್ತು 256GB ಸ್ಟೊರೇಜ್ ನೊಂದಿಗೆ ಲಭ್ಯವಿರುತ್ತದೆ. 64MP ಟ್ರಿಪಲ್ ಕ್ಯಾಮೆರಾ ಮತ್ತು 32MP ಸೆಲ್ಫಿ ಕ್ಯಾಮೆರಾ ಕೂಡ ಇದರ ವೈಶಿಷ್ಟ್ಯವಾಗಿದೆ. ಅಮೆಜಾನ್‌ನಲ್ಲಿ ಈ ಫೋನ್ 38,650 ರೂ.ಗಳಿಗೆ ಸಿಗುತ್ತದೆ.
ಈ ಫೋನ್‌ನ IPX4 ವೈಶಿಷ್ಟ್ಯವನ್ನು ಹೊಂದಿದ್ದು, ಇದರ ಮೇಲೆ ಎಷ್ಟೇ ನೀರು ಬಿದ್ದರೂ, ಏನೂ ಆಗುವುದಿಲ್ಲ ಎಂಬ ಭರವಸೆಯನ್ನು ಕಂಪನಿ ನೀಡುತ್ತದೆ. ಮೀಡಿಯಾ ಟೆಕ್ ಡೈಮೆನ್ಶನ್ 1000+ ನಿಂದ ನಡೆಸಲ್ಪಡುವ ಈ ಫೋನ್ 128GB ನೀಡುವುದಲ್ಲದೆ, ಸ್ಟೋರೇಜ್ ಅನ್ನು ಹೊಂದಿದೆ. ಈ ಫೋನ್ ಅನ್ನು ಅಮೆಜಾನ್ ನಲ್ಲಿ, 35,990 ರೂ. ಗೆ ಖರೀದಿಸಬಹುದು.