Century in 100th test: 100ನೇ ಟೆಸ್ಟ್ ಪಂದ್ಯದಲ್ಲಿ ಶತಕ ಬಾರಿಸಿದ ಟಾಪ್ ಬ್ಯಾಟ್ಸ್‌ಮನ್‌ಗಳು
ತಮ್ಮ 100ನೇ ಟೆಸ್ಟ್ ಪಂದ್ಯದಲ್ಲಿ ಶತಕ ಸಾಧನೆ ಮಾಡಿದ ಆಟಗಾರ ಇಂಗ್ಲೆಂಡ್‌ನ ಕಾಲಿನ್ ಕೌಡ್ರೆ. ಈತ 1968ರಲ್ಲಿ ಈ ವಿಶೇಷ ಸಾಧನೆ ಮಾಡಿದ ಮೊದಲ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರನಾದ. ಆಸ್ಟ್ರೇಲಿಯಾ ವಿರುದ್ಧದ ತಮ್ಮ 100ನೇ ಟೆಸ್ಟ್ ಪಂದ್ಯದಲ್ಲಿ ಕಾಲಿನ್ 104 ರನ್ ಗಳಿಸಿ ಶತಕ ಸಿಡಿಸಿ ಮಿಂಚಿದ್ದರು.
1989ರಲ್ಲಿ ಪಾಕಿಸ್ತಾನದ ದಂತಕಥೆ, ಸ್ಟಾರ್ ಬ್ಯಾಟ್ಸ್‌ಮನ್ ಖ್ಯಾತಿಯ ಜಾವೇದ್ ಮಿಯಾಂದಾದ್ ಭಾರತದ ವಿರುದ್ಧ ತಮ್ಮ 100ನೇ ಟೆಸ್ಟ್ ಪಂದ್ಯ ಆಡುವಾಗ ಈ ವಿಶೇಷ ಸಾಧನೆ ಮಾಡಿದ್ದರು. ಅಂದು ಮಿಯಾಂದಾದ್ ಭಾರತದ ವಿರುದ್ಧ 145 ರನ್ ಗಳಿಸಿ ಈ ಸಾಧನೆ ಮಾಡಿದ್ದರು.
1990ರಲ್ಲಿ ವೆಸ್ಟ್ ಇಂಡೀಸ್‌ನ ಗಾರ್ಡನ್ ಗ್ರೀನಿಡ್ಜ್ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದರು. ತಮ್ಮ 100ನೇ ಟೆಸ್ಟ್ ಪಂದ್ಯದಲ್ಲಿ ಅವರು 149 ರನ್ ಗಳಿಸಿ ಅದ್ಭುತ ಇನ್ನಿಂಗ್ಸ್ ಆಡಿದ್ದರು.
ಇಂಗ್ಲೆಂಡ್‌ನ ಅಲೆಕ್ ಸ್ಟೀವರ್ಟ್ ಅವರು 2000ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿ ಈ ಸಾಧನೆ ಮಾಡಿದ್ದರು. ತಮ್ಮ 100ನೇ ಟೆಸ್ಟ್ ಪಂದ್ಯದಲ್ಲಿ ಅವರು 105 ರನ್ ಗಳಿಸಿ ಶತಕ ಸಿಡಿಸಿದ್ದರು.
ಈ ಸಾಧನೆ ಮಾಡಿದವರ ಪಟ್ಟಿಯಲ್ಲಿ ಪಾಕ್ ತಂಡದ ಮಾಜಿ ಕ್ಯಾಪ್ಟನ್ ಇಂಜಮಾಮ್ ಉಲ್ ಹಕ್ 5ನೇ ಸ್ಥಾನದಲ್ಲಿದ್ದಾರೆ. 2005ರಲ್ಲಿ ಭಾರತದ ವಿರುದ್ಧ ತಮ್ಮ 100ನೇ ಟೆಸ್ಟ್ ಪಂದ್ಯದಲ್ಲಿ ಅವರು 184 ರನ್‌ಗಳ ಅಮೋಘ ಶತಕ ಸಿಡಿಸಿದ್ದರು.
ಹಾಲಿ ಇಂಗ್ಲೆಂಡ್ ಕ್ರಿಕೆಟಿಗ ಜೋರೂಟ್ ಕೂಡ ಈ ಸಾಧನೆ ಮಾಡಿದ್ದಾರೆ. ಇತ್ತೀಚೆಗಷ್ಟೇ ಲಂಡನ್‌ನ ಲಾರ್ಡ್ಸ್ ಮೈದಾನದಲ್ಲಿ ಮುಕ್ತಾಯಗೊಂಡ ಶ್ರೀಲಂಕಾದ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ರೂಟ್ 143 ರನ್ ಗಳಿಸುವ ಮೂಲಕ ಈ ಸಾಧನೆ ಮಾಡಿದರು.