IPL ಇತಿಹಾಸದಲ್ಲಿ ಈ 5 ದಾಖಲೆಗಳನ್ನು ಇದುವರೆಗೆ ಯಾರಿಂದಲೂ ಬ್ರೇಕ್ ಮಾಡಲು ಸಾಧ್ಯವೇ ಆಗಿಲ್ಲ: ಯಾವುವು ಗೊತ್ತಾ?
ಮಾರ್ಚ್ 22 ರಿಂದ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಟೂರ್ನಿ ಆರಂಭವಾಗಲಿದೆ. ಕ್ರಿಕೆಟ್ ಅಭಿಮಾನಿಗಳು ಮಹಾ ಸಂಗ್ರಾಮ ಕಣ್ತುಂಬಿಕೊಳ್ಳಲು ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆ.
ಮೊದಲ ಪಂದ್ಯ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಡೆಯಲಿದ್ದು, ಸಖತ್ ಮನರಂಜನೆ ನೀಡೋದು ಕನ್ಫರ್ಮ್, ಅಂದಹಾಗೆ ಈ ಪಂದ್ಯ ಆಯೋಜನೆಗೊಳ್ಳುತ್ತಿರುವುದು ಚೆನ್ನೈನ ಚೆಪಾಕ್ ಮೈದಾನದಲ್ಲಿ.
ವಿರಾಟ್ ಕೊಹ್ಲಿ 2016ರ ಐಪಿಎಲ್ ಋತುವಿನಲ್ಲಿ 973 ರನ್ ಗಳಿಸಿದ್ದರು. ಅತ್ಯುತ್ತಮ ಫಾರ್ಮ್‌ನಲ್ಲಿದ್ದ ಅವರು, ಈ ವರ್ಷ 16 ಪಂದ್ಯಗಳಲ್ಲಿ 81.08 ಸರಾಸರಿಯಲ್ಲಿ 973 ರನ್ ಗಳಿಸಿದ್ದರು. ಇದರಲ್ಲಿ ನಾಲ್ಕು ಶತಕಗಳು ಸೇರಿದ್ದು, ಈ ದಾಖಲೆಯನ್ನು ಯಾರಿಂದಲೂ ಬ್ರೇಕ್ ಮಾಡಲು ಸಾಧ್ಯವೇ ಆಗಿಲ್ಲ.
2013 ರಲ್ಲಿ, ವಿಶ್ವದ ಅತ್ಯಂತ ಸ್ಫೋಟಕ ಬ್ಯಾಟ್ಸ್‌ಮನ್ ಎಂದೇ ಪರಿಗಣಿಸಲ್ಪಟ್ಟ ಕ್ರಿಸ್ ಗೇಲ್ ಬಿರುಗಾಳಿ ಸೃಷ್ಟಿಸಿದ್ದರು. ಆ ವರ್ಷ ಪುಣೆ ವಾರಿಯರ್ಸ್ ವಿರುದ್ಧ 66 ಎಸೆತಗಳಲ್ಲಿ 175 ರನ್ ಗಳಿಸಿದ್ದರು. ಮೈದಾನದಾದ್ಯಂತ ಬೌಂಡರಿ ಹಾಗೂ ಸಿಕ್ಸರ್ ಸಿಡಿಸಿದ್ದರು.
ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್’ನಲ್ಲಿ ಹೆಚ್ಚು ಪ್ರಾಬಲ್ಯ ಹೊಂದಿರುವ ತಂಡವಾಗಿದೆ. ಈ ತಂಡ 5 ಬಾರಿ ಐಪಿಎಲ್ ಪ್ರಶಸ್ತಿ ಗೆದ್ದಿದೆ. ಇನ್ನೊಂದೆಡೆ 14 ಸೀಸನ್’ಗಳಲ್ಲಿ 12 ಬಾರಿ ಪ್ಲೇ-ಆಫ್ ಹಂತಗಳಿಗೆ ಅರ್ಹತೆ ಪಡೆದಿದ್ದು, 10 ಬಾರಿ ಫೈನಲ್ ಪ್ರವೇಶಿಸಿದ ತಂಡವಾಗಿದೆ.
2017 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ RCB ಕಳಪೆ ದಾಖಲೆಯನ್ನು ಮಾಡಿತ್ತು. ಆ ವರ್ಷ 131 ರನ್’ಗಳ ಗುರಿ ಬೆನ್ನತ್ತಿದ ಆರ್’ಸಿಬಿ ತಂಡ ಕೇವಲ 49 ರನ್’ಗಳಿಗೆ ಆಲೌಟ್ ಆಗಿತ್ತು. ಇದು ಐಪಿಎಲ್ ಇತಿಹಾಸದಲ್ಲೇ ಅತ್ಯಂತ ಕಡಿಮೆ ಸ್ಕೋರ್ ಆಗಿದೆ.
ಕೆರಿಬಿಯನ್ ಅನುಭವಿ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್, ಪ್ರಶಾಂತ್ ಪರಮೇಶ್ವರನ್ ಅವರ ಒಂದು ಓವರ್’ನಲ್ಲಿ 37 ರನ್ ಗಳಿಸಿ ಇತಿಹಾಸ ನಿರ್ಮಿಸಿದ್ದರು. 2011ರಲ್ಲಿ ಕೊಚ್ಚಿ ಟಸ್ಕರ್ಸ್ ವಿರುದ್ಧ ಗೇಲ್ ಈ ಸಾಧನೆ ಮಾಡಿದ್ದರು. ಇದಕ್ಕಿಂತ ದುಬಾರಿ ಓವರ್ ಐಪಿಎಲ್ ಇತಿಹಾಸದಲ್ಲಿ ಇನ್ನೂ ಬೌಲ್ ಆಗಿಲ್ಲ.