ಸಹೋದರಿಯೊಂದಿಗೆ ಮದುವೆ, ಮುದ್ದು ಮಗಳ ಸಾವು!ನಂತರ ಧಾರ್ಮಿಕ ಗುರುವಾಗಿ ಪರಿವರ್ತನೆ !ಕ್ರಿಕೆಟ್ ದಿಗ್ಗಜ್ಜನ ಬದುಕಿದು

Wed, 04 Sep 2024-12:18 pm,

ಸಹೋದರಿ ಅಥವಾ ಸೋದರ ಸಂಬಂಧಿಯನ್ನು ವಿವಾಹವಾಗಿರುವ ಅನೇಕ ಕ್ರಿಕೆಟಿಗರು ನಮ್ಮ ನಡುವೆ ಇದ್ದಾರೆ.ಇದರಲ್ಲಿ ಬಹುತೇಕರು ದಿಗ್ಗಜ್ಜ ಆಟಗಾರರೇ. 

ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆರಂಭಿಕ ಆಟಗಾರ ಸೈಯ್ಯದ್ ಅನ್ವರ್ 1996 ರಲ್ಲಿ ಲುಬ್ನಾ ಅನ್ವರ್ ಅವರನ್ನು ವಿವಾಹವಾದರು.ಲುಬ್ನಾ ಸೈಯ್ಯದ್ ಅನ್ವರ್ ಅವರ ಸೋದರ ಸಂಬಂಧಿ. 

ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅನ್ವರ್ ಪುತ್ರಿ ಬಿಸ್ಮಾ 2001ರಲ್ಲಿ  ಅಸು ನೀಗುತ್ತಾರೆ. ಮೂರೂವರೆ ವರ್ಷದ ಪುಟ್ಟ ಕಂದಮ್ಮನನ್ನು ಕಳೆದುಕೊಂಡ ಬಳಿಕ  ಅನ್ವರ್ ಮಾನಸಿಕವಾಗಿ ಕುಸಿದಿದ್ದರು. 

 ಪುತ್ರಿ ಶೋಕದಿಂದ ಬಳಲುತ್ತಿದ್ದ ಅನ್ವರ್ ಕ್ರಿಕೆಟ್‌ನಿಂದ ವಿರಾಮ ತೆಗೆದುಕೊಂಡು ತಬ್ಲಿಘಿ ಜಮಾತ್‌ಗೆ ಸೇರಿದರು. ಧಾರ್ಮಿಕ ಜೀವನದತ್ತ ವಾಲಿದರು. ನೋವು ಮರೆಯಲು ಕ್ರಿಕೆಟಿಗ ಆರಿಸಿಕೊಂಡ ದಾರಿ ಅದು.   

ಅನ್ವರ್ 2003 ರಲ್ಲಿ ಮತ್ತೆ ಕ್ರಿಕೆಟ್‌ಗೆ ಮರಳಿದರು.ಅದೇ ವರ್ಷದಲ್ಲಿ ವಿಶ್ವ ಕಪ್ ಅನ್ನು ಕೂಡಾ ಆಡಿದರು. ಆದರೆ ಮೊದಲಿನಂತೆ ಆಡಲು ಸಾಧ್ಯವಾಗದೆ ಟೀಕೆಗೆ ಗುರಿಯಾಗಬೇಕಾಯಿತು. ಇದಾದ ನಂತರ ಶೀಘ್ರದಲ್ಲೇ ಕ್ರಿಕೆಟ್ ಜೀವನಕ್ಕೂ ಗುಡ್ ಬೈ ಹೇಳಿದರು. 

ಸೈಯ್ಯದ್ ಅನ್ವರ್ ಪಾಕಿಸ್ತಾನದ ಪರವಾಗಿ 247 ODI ಪಂದ್ಯಗಳನ್ನು ಆಡಿದ್ದಾರೆ.  ಇದರಲ್ಲಿ ಅವರು 39.21 ಸರಾಸರಿಯಲ್ಲಿ 8,824 ರನ್ ಗಳಿಸಿದ್ದಾರೆ. ಆ ಸಮಯದಲ್ಲಿ ಅವರ ಗರಿಷ್ಠ ವೈಯಕ್ತಿಕ ಸ್ಕೋರ್ 194 ಆಗಿತ್ತು.55 ಟೆಸ್ಟ್ ಪಂದ್ಯಗಳಲ್ಲಿ,ಅನ್ವರ್ 45.52 ಸರಾಸರಿಯಲ್ಲಿ 4,052 ರನ್ ಗಳಿಸಿದರು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link