ಜನವರಿಯಲ್ಲಿ ಪವರ್ಫುಲ್ ಯೋಗಗಳ ನಿರ್ಮಾಣ: 3 ರಾಶಿಯವರಿಗೆ ಹೆಗಲೇರುವುದು ಅದೃಷ್ಟ, ಬಂಪರ್ ಲಾಭ!
ವೈದಿಕ ಪಂಚಾಂಗದ ಪ್ರಕಾರ, ಹೊಸ ವರ್ಷ 2025ರ ಜನವರಿ ತಿಂಗಳಿನಲ್ಲಿ ಜನವರಿ 04ರಂದು ಧನು ರಾಶಿಗೆ ಪ್ರವೇಶಿಸಲಿರುವ ಬುಧ ಮತ್ತೆ ಜನವರಿ 24ರಂದು ಮಕರ ರಾಶಿಗೆ ಪದಾರ್ಪಣೆ ಮಾಡಲಿದ್ದಾನೆ. ಈ ಮಧ್ಯೆ ಜನವರಿ 14ರಂದು ಸೂರ್ಯ ಮಕರ ರಾಶಿಗೆ ಕಾಲಿಡಳಿದ್ದಾನೆ. ಇದರಿಂದಾಗಿ ಬುಧಾದಿತ್ಯ ರಾಜಯೋಗ ನಿರ್ಮಾಣವಾಗಲಿದೆ.
ಜನವರಿಯಲ್ಲೇ ಮಂಗಳ ಗ್ರಹ ಮಿಥುನ ರಾಶಿಗೆ ಪ್ರವೇಶಿಸಿದರೆ, ಶುಕ್ರ ಮೀನ ರಾಶಿಗೆ ಪದಾರ್ಪಣೆ ಮಾಡಲಿದ್ದಾನೆ. ಒಂದೆಡೆ ಮೂಲ ತ್ರಿಕೋನ ರಾಶಿಯಲ್ಲಿ ಶಶ ಮಹಾಪುರುಷ ರಾಜಯೋಗ ನಿರ್ಮಾಣವಾದರೆ, ಶುಕ್ರ ರಾಹು ಯುತಿಯಿಂದ ಮೀನ ರಾಶಿಯಲ್ಲಿ ಮಾಲವ್ಯ ರಾಜಯೋಗ ನಿರ್ಮಾಣವಾಗುತ್ತಿದೆ.
ಮಕರ ರಾಶಿಯಲ್ಲಿ ಸೂರ್ಯ ತ್ರಿಗ್ರಾಹಿಯೋಗ ಜೊತೆಗೆ ಬುಧ, ಚಂದ್ರ, ರಾಹು, ಮಂಗಳರೊಟ್ಟಿಗೆ ನವಪಂಚಮ ರಾಜಯೋಗವನ್ನು ಸೃಷ್ಟಿಸಲಿದ್ದಾನೆ.
ಈ ರೀತಿಯಾಗಿ 2025ರ ಜನವರಿ ತಿಂಗಳಿನಲ್ಲಿ ಈ ಎಲ್ಲಾ ರಾಜ ಯೋಗಗಳು ಒಟ್ಟಿಗೆ ರೂಪುಗೊಳ್ಳುವುದರಿಂದ ಈ ಸಮಯವು ಕೆಲವು ರಾಶಿಯವರ ಬದುಕಿನಲ್ಲಿ ಭಾರೀ ಅದೃಷ್ಟವನ್ನು ತರಲಿದೆ ಎನ್ನಲಾಗುತ್ತಿದೆ.
ಮೇಷ ರಾಶಿ: ಜನವರಿ ತಿಂಗಳಿನಲ್ಲಿ ಈ ರಾಶಿಯವರಿಗೆ ಅದೃಷ್ಟದ ಸಂಪೂರ್ಣ ಬೆಂಬಲ ದೊರೆಯಲಿದ್ದು ಉದ್ಯೋಗದಲ್ಲಿ ಉನ್ನತ ಹುದ್ದೆ ಅಲಂಕರಿಸುವುದರ ಜೊತೆಗೆ ದಿಢೀರ್ ಧನಲಾಭದಿಂದ ಆರ್ಥಿಕ ಸ್ಥಿತಿ ಸುಧಾರಿಸಲಿದೆ.
ತುಲಾ ರಾಶಿ: ವರ್ಷದ ಮೊದಲ ತಿಂಗಳು ಈ ರಾಶಿಯವರಿಗೆ ಪ್ರತಿ ಕೆಲಸದಲ್ಲೂ ಯಶಸ್ಸನ್ನು ನೀಡಲಿದೆ. ಜೀವನದಲ್ಲಿ ಭೌತಿಕ ಸೌಕರ್ಯಗಳು ಹೆಚ್ಚಾಗಿ ಬೇರೆಡೆ ಸಿಲುಕಿರುವ ಹಣ ಮರಳಿ ಕೈ ಸೇರಲಿದೆ. ಪ್ರೀತಿಯ ಜೀವನವು ಆನಂದದಾಯಕವಾಗಿರಲಿದೆ.
ಕುಂಭ ರಾಶಿ: ಹೊಸ ವರ್ಷದ ಮೊದಲ ತಿಂಗಳಿನಲ್ಲಿ ಪವರ್ಫುಲ್ ರಾಜಯೋಗಗಳ ರೂಪುಗೊಳ್ಳುವಿಕೆ ಈ ರಾಶಿಯವರಿಗೆ ವಿಶೇಷ ಪ್ರಯೋಜನಗಳನ್ನು ನೀಡಲಿದೆ. ಈ ವೇಳೆ ಸರ್ಕಾರಿ ಕೆಲಸದಿಂದ ಲಾಭವಾಗಬಹುದು. ಶನಿ ಆಶೀರ್ವಾದರಿಂದ ಜೀವನದಲ್ಲಿ ಸಮಸ್ಯೆಗಳು ಸರಿದು ಸಂತೋಷದ ಕಾಲ ಸನ್ನಿಹಿತವಾಗಲಿದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.