ಮನೆಯ ಮೂಲೆ ಮೂಲೆಯಲ್ಲಿ ಅವಿತಿರುವ ಜಿರಳೆಗಳನ್ನು 5 ನಿಮಿಷದಲ್ಲಿ ಹೊರಹಾಕಲು ಸಿಂಪಲ್ ಟ್ರಿಕ್
ನಿಮ್ಮ ಮನೆಯಲ್ಲೂ ಜಿರಳೆಗಳ ಕಾಟ ಹೆಚ್ಚಾಗಿದ್ಯಾ? ಎಷ್ಟೇ ಪ್ರಯತ್ನಿಸಿದರೂ ಜಿರಳೆಗಳು ಮನೆಯಿಂದ ಹೊರಹೋಗ್ತಾ ಇಲ್ವಾ... ಇಲ್ಲಿದೆ ಸಿಂಪಲ್ ಟ್ರಿಕ್.
ಸ್ಪ್ರೆ, ಔಷಧಿ ಏನೇ ಹಾಕಿದ್ರೂ ಜಿರಳೆಗಳು ಹೋಗುತ್ತಲೇ ಇಲ್ವಾ? ನಿಮ್ಮ ಮನೆಯಲ್ಲಿರುವ ಪದಾರ್ಥಗಳಿಂದಲೇ ಇದರಿಂದ ಮುಕ್ತಿ ಪಡೆಯಬಹುದು.
ನಿಮ್ಮ ಮನೆಯಲ್ಲಿರುವ ಕೆಲವೇ ಕೆಲವು ಪದಾರ್ಥಗಳ ಸಹಾಯದಿಂದ ಮನೆಯ ಯಾವುದೇ ಮೂಲೆಯಲ್ಲಿ ಅಡಗಿರುವ ಜಿರಳೆಗಳನ್ನು ಕೂಡ ಕೇವಲ ಐದೇ ನಿಮಿಷಗಳಲ್ಲಿ ಮನೆಯಿಂದ ಓಡಿಸಬಹುದು.
* ಒಂದು ಈರುಳ್ಳಿ * ಪೇಸ್ಟ್ * 4-5 ಲವಂಗ * ಕರ್ಪೂರ
ಮೊದಲು ಈರುಳ್ಳಿಯನ್ನು ತೆಗೆದುಕೊಂಡು ಅದರ ಹಿಂದೆ ಮುಂದೆ ಕತ್ತರಿಸಿ. ಈರುಳ್ಳಿ ಮೇಲ್ಭಾಗದಲ್ಲಿ ಪೇಸ್ಟ್ ಹಾಕಿ ಸುತ್ತಲೂ 4-5 ಲವಂಗಗಳನ್ನು ಅಂಟಿಸಿ. ಇದರ ಮಧ್ಯದಲ್ಲಿ ಕರ್ಪೂರವನ್ನು ಹಚ್ಚಿ. ಒಮ್ಮೆ ಮನೆಯ ಸುತ್ತಲೂ ಇದರ ಹೊಗೆ ಹೋಗುವಂತೆ ಮಾಡಿ.
ಈ ಸಿಂಪಲ್ ಟ್ರಿಕ್ ಮಾಡುವುದರಿಂದ ಮನೆಯ ಯಾವುದೇ ಮೂಲೆಯಲ್ಲಿ ಅವಿತಿರುವ ಜಿರಳೆಗಳು ಕೂಡ ಕೇವಲ ಐದೇ ಐದು ನಿಮಿಷಗಳಲ್ಲಿ ಮನೆಯಿಂದ ಹೊರಹೋಗುತ್ತವೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.