ಮಳೆಗಾಲದಲ್ಲಿ ಕಾಡುವ ನೆಗಡಿ, ಶೀತಕ್ಕೆ ಚಿಟಿಕೆಯಲ್ಲಿ ಪರಿಹಾರ ನೀಡುತ್ತದೆ ಈ ಎಲೆ! ಕೇವಲ ವಾಸನೆ ತೆಗೆದರೆ ಸಾಕು…
ಮಳೆಗಾಲ ಶುರುವಾಗಿದೆ. ಈ ಸಂದರ್ಭದಲ್ಲಿ ಜ್ವರ, ಶೀತ, ನೆಗಡಿ ಸಮಸ್ಯೆಗಳು ಉಲ್ಬಣಗೊಳ್ಳುತ್ತವೆ. ಇವುಗಳ ಹೊರತಾಗಿ, ನಿರಂತರವಾಗಿ ದೇಹದ ನೋವು ಕಾಣಿಸಿಕೊಳ್ಳುತ್ತವೆ. ಈ ಎಲ್ಲಾ ಸಮಸ್ಯೆಗಳಿಂದಾಗಿ ಕೆಲಸ ಮಾಡಲು ಕಷ್ಟವಾಗುತ್ತದೆ.
ಆದರೆ ಶೀತ ಮತ್ತು ಜ್ವರವನ್ನು ನೈಸರ್ಗಿಕವಾಗಿ ಗುಣಪಡಿಸಲು ಅನೇಕ ಮನೆಮದ್ದುಗಳಿವೆ. ಕಾಲೋಚಿತ ಜ್ವರದಿಂದ ಉಂಟಾಗುವ ಶೀತ, ಕೆಮ್ಮು ಮತ್ತು ದೇಹದ ನೋವನ್ನು ಗುಣಪಡಿಸಲು ತುಳಸಿ ಅತ್ಯಂತ ಪರಿಣಾಮಕಾರಿ.
ತುಳಸಿ ಒಂದು ಪವಿತ್ರ ಸಸ್ಯ. ಇದು ಔಷಧೀಯ ಮತ್ತು ಆಧ್ಯಾತ್ಮಿಕ ಗುಣಗಳನ್ನು ಹೊಂದಿದೆ. ಆಯುರ್ವೇದದಲ್ಲಿ ಇದನ್ನು ಪ್ರಕೃತಿಯ ತಾಯಿ ಔಷಧಿ ಮತ್ತು ಗಿಡಮೂಲಿಕೆಗಳ ರಾಣಿ ಎಂದೂ ಕರೆಯುತ್ತಾರೆ.
ತುಳಸಿಯು ಬ್ಯಾಕ್ಟೀರಿಯಾ ವಿರೋಧಿ, ಉರಿಯೂತ ನಿವಾರಕ, ಮತ್ತು ಅಲರ್ಜಿ ನಿವಾರಕವಾಗಿದೆ. ಇನ್ನು ತುಳಸಿ ಎಲೆಗಳನ್ನು ಜೇನುತುಪ್ಪದೊಂದಿಗೆ ಸೇವಿಸುವುದರಿಂದ ಕೆಮ್ಮು ಮತ್ತು ಜ್ವರದಿಂದ ಪರಿಹಾರವನ್ನು ನೀಡುತ್ತದೆ.
ಇನ್ನು ಆಯುರ್ವೇದ ತಜ್ಞೆ ಡಾ.ನೀತು ಭಟ್ ಪ್ರಕಾರ, 'ಕಫ ಹೆಚ್ಚಿ ಜೀರ್ಣಶಕ್ತಿ ಕುಂದುವುದರಿಂದ ನೆಗಡಿ, ಕೆಮ್ಮು ಬರುತ್ತದೆ. ನಾವು ತಿಂದ ಆಹಾರ ಸಂಪೂರ್ಣವಾಗಿ ಜೀರ್ಣವಾಗುವುದಿಲ್ಲ. ಹೀಗಿರುವಾಗ ತುಳಸಿಯು ಜೀರ್ಣಕಾರಿ ಮತ್ತು ಕಫವನ್ನು ಸಮತೋಲನಗೊಳಿಸುವ ಗುಣಗಳನ್ನು ಹೊಂದಿದೆ..
ಶೀತ, ಕೆಮ್ಮು ಮತ್ತು ದೇಹದ ನೋವನ್ನು ಕಡಿಮೆ ಮಾಡಲು ತುಳಸಿ ಎಲೆಯನ್ನು ಜಗಿದು ತಿನ್ನಬೇಕು. ಇಲ್ಲವೇ ಬಿಸಿನೀರಿನಲ್ಲಿ ತುಳಸಿ ಎಲೆಯನ್ನು ಸೇರಿಸಿ ಚೆನ್ನಾಗಿ ಕುದಿಸಿ ಶಾಖ ತೆಗೆದರೂ ಸಾಕು, ಈ ಎಲ್ಲಾ ಸಮಸ್ಯೆಗಳು ಚಿಟಿಕೆಯಲ್ಲಿ ಶಮನವಾಗುತ್ತದೆ.
ಡಾ.ನೀತು ಭಟ್ ಅವರ ಪ್ರಕಾರ, ಕೆಲವೊಮ್ಮೆ ಅಸ್ತಮಾ ಉಸಿರಾಟದ ತೊಂದರೆ ಮತ್ತು ಕಫವನ್ನು ಉಂಟುಮಾಡುತ್ತದೆ. ಆಯುರ್ವೇದದಲ್ಲಿ, ಅಸ್ತಮಾವನ್ನು ಉಸಿರಾಟದ ಕಾಯಿಲೆ ಎಂದು ಕರೆಯಲಾಗುತ್ತದೆ. ವಾತ ಮತ್ತು ಕಫದ ಮುಖ್ಯ ದೋಷಗಳಿಂದ ಇದು ಸಂಭವಿಸುತ್ತದೆ. ತುಳಸಿಯು ಕಫ ಮತ್ತು ವಾತವನ್ನು ಸಮತೋಲನಗೊಳಿಸುವ ಗುಣಗಳನ್ನು ಹೊಂದಿದ್ದು, ಒಂದು ಎಲೆಯನ್ನು ನಿತ್ಯ ಸೇವಿಸಿದರೆ ಒಳ್ಳೆಯದು.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಯಾವುದೇ ರೀತಿಯಲ್ಲಿ ಪರ್ಯಾಯವಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞ ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಈ ಮಾಹಿತಿಯ ಹೊಣೆಯನ್ನು Zee Kannada News ಖಚಿತಪಡಿಸಿಕೊಳ್ಳುವುದಿಲ್ಲ.