ತುಳಸಿ ಗಿಡವನ್ನು ಈ ದಿಕ್ಕಿನಲ್ಲಿಟ್ಟು ಪೂಜಿಸಿದರೆ ಅಷ್ಟೈಶ್ವರ್ಯ ಪ್ರಾಪ್ತಿಯಾಗುವುದು! ಧನ ಸಂಪತ್ತು ವೃದ್ಧಿಯಾಗುವುದು
Vastu Tips For Keeping Tulsi Plant: ತುಳಸಿ ಮದುವೆ ಅಥವಾ ತುಳಸಿ ಪೂಜೆಗೆ ವಿಶೇಷ ಮಹತ್ವವಿದೆ. ಕಾರ್ತಿಕ ಏಕಾದಶಿಯ ಮರುದಿನ ಬರುವ ದ್ವಾದಶಿ ದಿನ ತುಳಸಿ ದೇವಿ ಮತ್ತು ವಿಷ್ಣುವಿನ ರೂಪವಾದ ಶಾಲಿಗ್ರಾಮ ಮದುವೆ ಮಾಡುವ ಶಾಸ್ತ್ರವಿದೆ.
ಕಾರ್ತಿಕ ಮಾಸದ ಶುಕ್ಲ ಪಕ್ಷದ ದ್ವಾದಶಿ ದಿನದಂದು ತುಳಸಿ ವಿವಾಹವನ್ನು ಆಚರಿಸಲಾಗುತ್ತದೆ. ಈ ಬಾರಿ ತುಳಸಿ ವಿವಾಹ ನವೆಂಬರ್ 13 ರಂದು ಆಚರಿಸಲಾಗುತ್ತಿದೆ. ಕಾರ್ತಿಕ ಏಕಾದಶಿ ಉಪವಾಸವನ್ನು ಮಾಡಿದ ಮರುದಿನ ತುಳಸಿ ಮದುವೆ ಆಚರಿಸಲಾಗುತ್ತದೆ.
ಹಿಂದೂ ಧಾರ್ಮಿಕ ಗ್ರಂಥಗಳಲ್ಲಿ, ತುಳಸಿ ಗಿಡವನ್ನು ಲಕ್ಷ್ಮಿ ದೇವಿಯ ರೂಪ ಎಂದು ವಿವರಿಸಲಾಗಿದೆ, ಅಂದರೆ ತುಳಸಿ ಎಲ್ಲಿ ಇರುತ್ತದೋ ಅಲ್ಲಿ ಲಕ್ಷ್ಮಿ ದೇವಿ ನೆಲೆಸುತ್ತಾಳೆ ಎಂದರ್ಥ. ಇದೊಂದು ಅದ್ಭುತ ಔಷಧೀಯ ಸಸ್ಯವಾಗಿದೆ.
ತುಳಸಿ ಗಿಡದ ವಿಶೇಷ ಪ್ರಾಮುಖ್ಯತೆಯನ್ನು ವಾಸ್ತುಶಾಸ್ತ್ರದಲ್ಲಿಯೂ ಉಲ್ಲೇಖಿಸಲಾಗಿದೆ. ತುಳಸಿ ಗಿಡವನ್ನು ಮನೆ ಅಂಗಳದಲ್ಲಿ ನೆಟ್ಟರೆ ನೆಗೆಟಿವ್ ಎನರ್ಜಿ ನಿವಾರಣೆಯಾಗುತ್ತದೆ ಮತ್ತು ಧನಾತ್ಮಕ ಶಕ್ತಿ ಹೆಚ್ಚುತ್ತದೆ ಎಂಬ ನಂಬಿಕೆ ಇದೆ.
ಮನೆಯ ಅಂಗಳದಲ್ಲಿ ತುಳಸಿ ಗಿಡವನ್ನು ಉತ್ತರ, ಈಶಾನ್ಯ ಅಥವಾ ಪೂರ್ವ ದಿಕ್ಕನಲ್ಲಿಯೇ ಇಡಬೇಕು. ಈ ದಿಕ್ಕುಗಳಲ್ಲಿ ತುಳಸಿ ಗಿಡವನ್ನು ನೆಟ್ಟರೆ ಮನೆಯಲ್ಲಿ ಧನಾತ್ಮಕ ಶಕ್ತಿ ಉಂಟಾಗುತ್ತದೆ.
ತುಳಸಿ ಗಿಡವನ್ನು ದಕ್ಷಿಣ ದಿಕ್ಕಿನಲ್ಲಿ ನೆಡಬಾರದು. ಹೀಗೆ ಮಾಡುವುದರಿಂದ ನಿಮಗೆ ಲಾಭವಾಗುವ ಬದಲು ಹಾನಿಯೂ ಉಂಟು ಮಾಡಬಹುದು.
ವಾಸ್ತು ಶಾಸ್ತ್ರದ ಪ್ರಕಾರ, ಪ್ರತಿ ಭಾನುವಾರ, ಏಕಾದಶಿ, ಸೂರ್ಯ ಮತ್ತು ಚಂದ್ರಗ್ರಹಣದ ದಿನದಂದು ತುಳಸಿಗೆ ನೀರನ್ನು ಅರ್ಪಿಸಬಾರದು. ಸೂರ್ಯ ಮುಳುಗಿದ ನಂತರ ತುಳಸಿ ಎಲೆಗಳನ್ನು ಕೀಳಬಾರದು. ಹೀಗೆ ಮಾಡುವುದರಿಂದ ವಾಸ್ತು ದೋಷ ಉಂಟಾಗುತ್ತದೆ.
ಅಡುಗೆ ಮನೆಯ ಹತ್ತಿರವೂ ತುಳಸಿ ಗಿಡವನ್ನು ಇಡಬಾರದು. ಹೀಗೆ ಮಾಡುವುದರಿಂದ ಮನೆಯಲ್ಲಿ ಕೌಟುಂಬಿಕ ಕಲಹಗಳು ಹೆಚ್ಚಾಗುತ್ತವೆ. ಮಕ್ಕಳು ಹಠಮಾರಿಗಳಾಗಿದ್ದರೆ, ಪೂರ್ವಾಭಿಮುಖವಾಗಿರುವ ಕಿಟಕಿಯ ಬಳಿ ತುಳಸಿ ಗಿಡವನ್ನು ಇಡುವುದರಿಂದ ಅವರ ಮೊಂಡುತನ ನಿಲ್ಲುತ್ತದೆ.
ತುಳಸಿ ವಿವಾಹದ ದಿನ ಸಂಜೆ ತುಳಸಿ ಗಿಡದ ಬಳಿ ತುಪ್ಪದ ದೀಪವನ್ನು ಬೆಳಗಿಸಬೇಕು. ಇದರಿಂದ ಶುಭವಾಗುತ್ತದೆ ಜೊತೆಗೆ ಮನೆಯಲ್ಲಿ ಸಮೃದ್ಧಿಯೂ ಹೆಚ್ಚಲಿದೆ.
ಗಮನಿಸಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಧಾರ್ಮಿಕ ವಿಚಾರವನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.