ದುಬಾರಿಯಾಗಲಿವೆ TV, fridge, AC, Washing machine: ಬೆಲೆ ಯಾವಾಗ, ಎಷ್ಟು ಹೆಚ್ಚಾಗುತ್ತೆ?

Mon, 07 Dec 2020-2:45 pm,

ನವದೆಹಲಿ: ನೀವು ಟಿವಿ, ಫ್ರಿಜ್, ವಾಷಿಂಗ್ ಮೆಷಿನ್ ಅಥವಾ ಮೈಕ್ರೊವೇವ್ ಓವನ್ ನಂತಹ ವಸ್ತುಗಳನ್ನು ಖರೀದಿಸಲು ಯೋಜಿಸುತ್ತಿದ್ದರೆ, ತಕ್ಷಣ ಅದನ್ನು ಖರೀದಿಸಿ. ಏಕೆಂದರೆ ಮುಂದಿನ ದಿನಗಳಲ್ಲಿ ಈ ಎಲ್ಲ ವಸ್ತುಗಳ ಬೆಲೆಗಳು ಹೆಚ್ಚಾಗಲಿವೆ.  ಕಂಪನಿಗಳು ಈ ತಿಂಗಳು ಬೆಲೆಗಳನ್ನು ಹೆಚ್ಚಿಸಲು ನಿರ್ಧರಿಸಬಹುದು.

ಆಂಗ್ಲ ಸುದ್ದಿ ವೆಬ್‌ಸೈಟ್ ದಿ ಎಕನಾಮಿಕ್ಸ್ ಟೈಮ್ಸ್ನ ಸುದ್ದಿಯ ಪ್ರಕಾರ, ಕಂಪನಿಗಳು ಟಿವಿ, ಫ್ರಿಜ್, ವಾಷಿಂಗ್ ಮೆಷಿನ್, ಹವಾನಿಯಂತ್ರಣ, ಮೈಕ್ರೊವೇವ್ ಇತ್ಯಾದಿಗಳ ಬೆಲೆಯನ್ನು ಶೀಘ್ರದಲ್ಲಿಯೇ ಶೇಕಡಾ 20 ರಷ್ಟು ಹೆಚ್ಚಿಸಬಹುದು. ಸುದ್ದಿಗಳ ಪ್ರಕಾರ ಕಚ್ಚಾ ವಸ್ತುಗಳಾದ ತಾಮ್ರ, ಸತು, ಉಕ್ಕು, ಪ್ಲಾಸ್ಟಿಕ್ ಮತ್ತು ಅಲ್ಯೂಮಿನಿಯಂಗಳು ಕಂಪೆನಿಗಳಿಗೆ ದುಬಾರಿಯಾಗುತ್ತಿದೆ. ಅಲ್ಲದೆ ಸಮುದ್ರ ಮಾರ್ಗದ ಮೂಲಕ ಸರಕು ಸಾಗಣೆ 40-50% ಹೆಚ್ಚಾಗಿದೆ.

ಸುದ್ದಿಗಳ ಪ್ರಕಾರ, ವಿಶ್ವಾದ್ಯಂತ ಟಿವಿ ಪ್ಯಾನೆಲ್‌ಗಳ ಕೊರತೆಯಿಂದಾಗಿ ಅದರ ಬೆಲೆಗಳು 30-100 ಪ್ರತಿಶತದಷ್ಟು ಹೆಚ್ಚಾಗಿದೆ. ಇದು ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಗಳ ಮೇಲೆ ಪರಿಣಾಮ ಬೀರುತ್ತದೆ. ಬೆಲೆಗಳ ಹೆಚ್ಚಳವು ಮುಂದಿನ ತ್ರೈಮಾಸಿಕದ ಬೆಳವಣಿಗೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು ಎಂದು ಕಂಪನಿಗಳು ನಂಬುತ್ತವೆ. ಆದರೆ ಇನ್ಪುಟ್ ವೆಚ್ಚದಲ್ಲಿ ಈ ಹೆಚ್ಚಳವನ್ನು ಅವರು ಭರಿಸಲಾರರು ಎಂದು ಹಲವು ಕಂಪನಿಗಳು ಅಳಲು ತೋಡಿಕೊಂಡಿವೆ.  

ಗೋದ್ರೇಜ್ ಉಪಕರಣಗಳ (Godrej Appliances) ವ್ಯವಹಾರ ಮುಖ್ಯಸ್ಥ ಕಮಲ್ ನಂದಿ, ಎಲ್ಲಾ ಉತ್ಪನ್ನಗಳ ಬೆಲೆಗಳು ವೇಗವಾಗಿ ಏರಿವೆ. ಹಬ್ಬದ ಋತುವಿನ ಅಂತ್ಯದ ನಂತರ ಕಂಪನಿಗಳು ಈಗ ಬೆಲೆ ಏರಿಕೆ ಭಾರವನ್ನು ಗ್ರಾಹಕರ ಮೇಲೆ ಹೇರಲು ಸಿದ್ಧವಾಗಿವೆ. ಈ ತಿಂಗಳ ಕೊನೆಯಲ್ಲಿ ಅಥವಾ ಮುಂದಿನ ತಿಂಗಳ ಆರಂಭದಲ್ಲಿ ಬೆಲೆಗಳು ಹೆಚ್ಚಾಗಬಹುದು ಎಂದು ತಿಳಿಸಿದ್ದಾರೆ.

ವಾಷಿಂಗ್ ಮೆಷನ್ ಮತ್ತು ಎಸಿಯ ಬೆಲೆ 8-10% ಹೆಚ್ಚಾಗಬಹುದು. ರೆಫ್ರಿಜರೇಟರ್ ಬೆಲೆಗಳು 12-15% ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಟಿವಿ ಬೆಲೆಗಳು ಸಹ ಗಾತ್ರಕ್ಕೆ ಅನುಗುಣವಾಗಿ 7-20% ಹೆಚ್ಚಾಗಲಿವೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link