Ugadi 2024: ಮೂವತ್ತು ವರ್ಷಗಳ ಬಳಿಕ ಮೂರು ರಾಜಯೋಗಗಳಲ್ಲಿ ಹಿಂದೂ ಹೊಸ ವರ್ಷ ಯುಗಾದಿ ಆಚರಣೆ, ಈ ಜನರ ಜೀವನದಲ್ಲಿ ಒಳ್ಳೆಯ ದಿನಗಳ ಆರಂಭ!
Ugadi 2024 Horoscope: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಹಿಂದೂ ಹೊಸವರ್ಷ ಯುಗಾದಿಯ ದಿನ ಮೂರು ರಾಜಯೋಗಗಳು ರಚನೆಯಾಗಲಿವೆ. ಇದರಿಂದ ಕೆಲ ರಾಶಿಗಳಜನರ ಭಾಗ್ಯ ಸೂರ್ಯನಂತೆ ಹೊಳೆಯಲಿದ್ದು ಅವರ ಜೀವನದಲ್ಲಿ ಅದೃಷ್ಟ ಲಕ್ಷ್ಮಿಯ ಕೃಪೆಯಿಂದ ಒಳ್ಳೆಯ ದಿನಗಳ ಆರಂಭವಾಗಲಿದೆ. (Spiritual News In Kannada)
ವೃಷಭ ರಾಶಿ: ಹಿಂದೂ ಹೊಸವರ್ಷ ಯುಗಾದಿ ನಿಮ್ಮ ಪಾಲಿಗೆ ಲಾಭದಾಯಕ ಸಿದ್ಧ ಸಾಬೀತಾಗಲಿದೆ. ಈ ವರ್ಷ ಕಾರ್ಯಕ್ಷೇತ್ರದಲ್ಲಿ ಅಪಾರ ಯಶಸ್ಸು ನಿಮ್ಮದಾಗಲಿದೆ ಮತ್ತು ಈ ಅವಧಿಯಲ್ಲಿ ನೀವು ಹೊಸ ಬಿಸ್ನೆಸ್ ಕೂಡ ಆರಂಭಿಸಬಹುದು. ಇದರಿಂದ ನಿಮ್ಮ ಆದಾಯದಲ್ಲಿ ಅಪಾರ ಹೆಚ್ಚಳ ಕಂಡುಬರಲಿದೆ. ನಿಮ್ಮ ಸಕಲ ಇಷ್ಟಾರ್ಥಗಳು ನೆರವೇರುವ ಸಂಕೇತಗಳಿವೆ. ಇದರ ಜೊತೆಗೆ ನೀವು ಯಾವುದಾದರೊಂದು ಹೊಸ ಕೆಲಸ ಕೂಡ ಆರಂಭಿಸಬಹುದು. ವಿದ್ಯಾರ್ಥಿಗಳ ಪಾಲಿಗೆ ಸಮಯ ಅನಕೂಲಕರವಾಗಿದೆ. ಯಾವುದಾದರೊಂದು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸನ್ನು ನೀವು ಪಡೆಯಬಹುದು. ಆಸ್ತಿ ಪಾಸ್ತಿ, ವಾಹನ ಖರೀದಿ ಯೋಗ ಕೂಡ ಇದೆ. ವರ್ಷವಿಡೀ ನೀವು ಯಾವುದಾದರೊಂದು ತೀರ್ಥ ಯಾತ್ರೆ ಮಾಡಬಹುದು ಅಥವಾ ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮ ಆಯೋಜಿಸಬಹುದು.
ಧನು ರಾಶಿ: ಹಿಂದೂ ಹೊಸವರ್ಷ ಆರ್ಥಿಕವಾಗಿ ನಿಮ್ಮ ಪಾಲಿಗೆ ಲಾಭದಾಯಕವಾಗಿರಲಿದೆ. ಈ ವರ್ಷ ನಿಮಗೆ ಕಾಲಕಾಲಕ್ಕೆ ಆಕಸ್ಮಿಕ ಧನಲಾಭ ಉಂಟಾಗುವ ಸಾಧ್ಯತೆ ಇದೆ. ಪಾಟ್ನರ್ಶಿಪ್ ನಲ್ಲಿ ಬಿಸ್ನೆಸ್ ಮಾಡುತ್ತಿದ್ದರೆ, ನಿಮ್ಮ ಇಚ್ಚೆಗೆ ತಕ್ಕಂತೆ ಲಾಭ ಸಿಗಲಿದೆ ಮತ್ತು ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗಲಿದೆ. ಈ ವರ್ಷ ನೀವು ವಾಹನ, ಆಸ್ತಿಪಾಸ್ತಿ ಖರೀದಿಸುವ ಸಾಧ್ಯತೆ ಇದೆ. ಈ ವರ್ಷ ನೀವು ಅಪಾರ ಹಣ ಕೂಡಿಹಾಕುವಲ್ಲಿಯೂ ಕೂಡ ಯಶಸ್ಸನ್ನು ಸಾಧಿಸಬಹುದು. ಸಾಹಸ ಪರಾಕ್ರಮ ಹೆಚ್ಚಾಗಲಿದೆ.
ಮಿಥುನ ರಾಶಿ: ಹಿಂದೂ ಹೊಸವರ್ಷ ಯುಗಾದಿ ನಿಮ್ಮ ಪಾಲಿಗೆ ಹಲವು ಸಂತಸಗಳನ್ನು ಹೊತ್ತು ತರಲಿದೆ. ನಿಮ್ಮ ಆದಾಯದಲ್ಲಿ ಅಪಾರ ಹೆಚ್ಚಳ ಸಂಭವಿಸಲಿದೆ. ಆದಾಯದ ಹೊಸ ಮಾರ್ಗಗಳು ತೆರೆದುಕೊಳ್ಳಲಿವೆ. ಕುಟುಂಬದಲ್ಲಿ ಸುಖ ಶಾಂತಿ ಇರಲಿದೆ. ಕುಟುಂಬ ಸದಸ್ಯರ ನಡುವೆ ಸಾಮರಸ್ಯ ಮುದುವರೆಯಲಿದೆ. ನಿಮ್ಮ ಹಲವು ಯೋಜನೆಗಳು ಪೂರ್ಣಗೊಳ್ಳಲಿವೆ. ಸ್ಥಾನಮಾನ ಪ್ರತಿಷ್ಠೆ ಹೆಚ್ಚಾಗಲಿದೆ. ವರ್ಷದ ರಾಜ ಮಂಗಳನ ಕೃಪೆಯಿಂದ ನಿಮಗೆ ಹಳೆ ಸಾಲಬಾಧೆಯಿಂದ ಮುಕ್ತಿ ಸಿಗಲಿದೆ. ಹೂಡಿಕೆಗಾಗಿ ಸಮಯ ಸಾಕಷ್ಟು ಅನುಕೂಲಕರವಾಗಿದೆ. ವ್ಯಾಪಾರಿಗಳಿಗೆ ಈ ವರ್ಷ ಸಾಕಷ್ಟು ಧನಲಾಭ ಕಾದಿದೆ. ವ್ಯಾಪಾರ ವಿಸ್ತರಣೆಯ ಅವಕಾಶ ಕೂಡ ಒದಗಿಬರಲಿದೆ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)