UIDAI Toll Free Helpline: Aadhaar Cardಗೆ ಸಂಬಂಧಿಸಿದ ಈ ನಂಬರ್ ಈಗಲೇ ಸೇವ್ ಮಾಡಿ
1. ಆಧಾರ್ ಗೆ ಸಂಬಂಧಿಸಿದ ಪ್ರತಿಯೊಂದು ಸಮಸ್ಯೆಗಳ ಸಮಾಧಾನಕ್ಕಾಗಿ UIDAI 1947 ಹೆಲ್ಪ್ ಲೈನ್ ನಂಬರ್ ನೀಡಿದೆ. ಈ ಸಂಖ್ಯೆಗೆ ಕರೆ ಮಾಡಿ ನೀವು ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ಆಧಾರ್ ನ ಈ ಸೇವೆ ಒಟ್ಟು 12 ಭಾಷೆಗಳಲ್ಲಿ ಅಂದರೆ, ಹಿಂದಿ, ತೆಲುಗು, ಕನ್ನಡ, ತಮಿಳು, ಮಲಯಾಳಂ, ಪಂಜಾಬಿ, ಗುಜರಾತಿ, ಮರಾಠಿ, ಒಡಿಯಾ, ಬಂಗಾಳಿ, ಅಸ್ಸಾಮಿ ಹಾಗೂ ಉರ್ದು ಭಾಷೆಗಳಲ್ಲಿ ಲಭ್ಯವಿರಲಿದೆ.
2. ಮೇಲ್ ಕೂಡ ಮಾಡಬಹುದು - ಮೇಲ್ ಮಾಡುವ ಮೂಲಕ ಕೂಡ ನೀವು ನಿಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು. ಇದಕ್ಕಾಗಿ ನೀವು help@uidai.gov.in ಮೇಲ್ ಐಡಿಗೆ ನಿಮ್ಮ ಸಮಸ್ಯೆಯನ್ನು ವಿವರಿಸಿ ಮೇಲ್ ಮಾಡಬೇಕು.
3. UIDAI ಅಧಿಕಾರಿಗಳು ಈ ಮಾಹಿತಿ ನೀಡಿದ್ದಾರೆ - UIDAI ಅಧಿಕಾರಿಗಳು ಕಾಲಕಾಲಕ್ಕೆ ನಾಗರಿಕರಿಂದ ಬರುವ ಮೇಲ್ ಗಳನ್ನು ಪರಿಶೀಲಿಸುತ್ತಾರೆ ಹಾಗೂ ಜನರ ಸಮಸ್ಯೆಗಳನ್ನು ಪರಿಹರಿಸುತ್ತಾರೆ. ದೂರು ನಿರ್ವಹಣಾ ಸೆಲ್ ಜನರಿಂದ ಬರುವ ಮೇಲ್ ಗಳಿಗೆ ಪ್ರತಿ ಮೇಲ್ ಕಳುಹಿಸುವ ಮೂಲಕ ಉತ್ತರ ನೀಡುತ್ತದೆ.
4. ವೆಬ್ ಸೈಟ್ ಮೂಲಕ ಕೂಡ ನೀವು ದೂರು ದಾಖಲಿಸಬಹುದು - 1. ಇದಕ್ಕಾಗಿ ಎಲ್ಲಕ್ಕಿಂತ ಮೊದಲು ನೀವು UIDAI ಅಧಿಕೃತ ತಾಣಕ್ಕೆ (https://resident.uidai.gov.in/) ಭೇಟಿ ನೀಡಬೇಕು . 2. ಬಳಿಕ ಸಂಪರ್ಕ ಹಾಗೂ ಸಮರ್ಥನೆಗಾಗಿ 'Ask Aadhaar' ವಿಭಾಗಕ್ಕೆ ಹೋಗಬೇಕು. 3. ಇಲ್ಲಿ ನೀವು ಓರ್ವ ಆಧಾರ್ ಎಕ್ಸಿಕ್ಯೂಟಿವ್ ಜೊತೆಗೆ ಲಿಂಕ್ ಆಗುವಿರಿ. ನೀವು ಅವರೊಂದಿಗೆ ನಿಮ್ಮ ಸಮಸ್ಯೆಗಳ ಕುರಿತು ಮಾತುಕತೆ ನಡೆಸಬಹುದು. ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಅವರು ನಿಮಗೆ ಸಹಾಯ ಮಾಡಲಿದ್ದಾರೆ.