ಪೇರಳೆ, ನೆಲ್ಲಿ, ನಿಂಬೆ ಅಲ್ಲ, ಈ ಒಂದು ಹಣ್ಣು ಬಳಸಿದರೆ ಬಿಳಿ ಕೂದಲು ಕಡು ಕಪ್ಪಾಗುವುದು! ಬಿಳಿ ಕೂದಲ ಬೆಳವಣಿಗೆ ಕೂಡಾ ನಿಲ್ಲುವುದು
ಇಂದು ನಾವು ಬಿಳಿ ಕೂದಲು ಶಾಶ್ವತವಾಗಿ ಮತ್ತು ನೈಸರ್ಗಿಕವಾಗಿ ಕಲ್ಲಿದ್ದಲಿನಂತೆ ಕಪ್ಪಾಗಿಸುವ ವಿಧಾನವನ್ನು ಹೇಳುತ್ತಿದ್ದೇವೆ. ಇನ್ನು ಬಿಳಿ ಕೂದಲನ್ನು ಕಪ್ಪಾಗಿಸಲು ಹೇರ ಕಲರ್, ಮೆಹೆಂದಿ, ನೆಲ್ಲಿಕಾಯಿ, ಚಹಾ, ಕಾಫಿ ಇದ್ಯಾವುದನ್ನೂ ಬಳಸುವ ಅಗತ್ಯವಿಲ್ಲ.
ಇಲ್ಲಿ ನಾವು ಹೇಳುತ್ತಿರುವ ಪರಿಹಾರದ ಪ್ರಮುಖ ಅಂಶವೆಂದರೆ ಅಂಜೂರ. ಅಂಜೂರದ ಹಣ್ಣಿನ ಹೇರ ಮಾಸ್ಕ್ ಬಳಸಿದರೆ ಬಿಳಿ ಕೂದಲು ಶೀಘ್ರವಾಗಿ ಮಾತು ಬಹಳ ಕಾಲದವರೆಗೆ ಕಪ್ಪು ಬಣ್ಣಕ್ಕೆ ತಿರುಗುತ್ತದೆ.ಅಲ್ಲದೆ ಮತ್ತೆ ಬಿಳಿ ಕೂದಲು ಬೆಳೆಯದಂತೆ ಮಾಡುತ್ತದೆ.
1. 4-5 ಅಂಜೂರದ ತುಂಡುಗಳು 2.ಟೀಸ್ಪೂನ್ ಅಂಜೂರದ ಎಣ್ಣೆ 3.4-5 ಚಮಚ ಮೊಸರು 4.2-3 ಚಮಚ ಕಡಲೆ ಹಿಟ್ಟು 5.1 ಟೀಚಮಚ ಮೆಂತ್ಯೆ ಬೀಜಗಳು 6. ಅಗತ್ಯಕ್ಕೆ ತಕ್ಕಂತೆ ನೀರು 7. 2 ಟೀಸ್ಪೂನ್ ತಾಜಾ ಅಲೋವೆರಾ ಜೆಲ್
ನೆನೆಸಿದ ಅಂಜೂರ ಮತ್ತು ಮೆಂತ್ಯೆಯನ್ನು ಮಿಕ್ಸಿಯಲ್ಲಿ ಹಾಕಿ ಪೇಸ್ಟ್ ತಯಾರಿಸಿ. ಅಗತ್ಯ ಬಿದ್ದರೆ ನೀರು ಸೇರಿಸಿಕೊಳ್ಳಿ. ಈಗ ಅದಕ್ಕೆ ಮೊಸರು ಮತ್ತು ಕಡಲೆ ಹಿಟ್ಟು ಸೇರಿಸಿ ಮಿಶ್ರಣ ಮಾಡಿ.ನಂತರ ಅಲೋವೆರಾ ಜೆಲ್ ಹಾಕಿ ಚೆನಾಗಿ ಬೀಟ್ ಮಾಡಿ. ಪೇಸ್ಟ್ ತುಂಬಾ ದಪ್ಪ ಎನಿಸಿದರೆ ಅಗತ್ಯಕ್ಕೆ ಅನುಗುಣವಾಗಿ ನೀರನ್ನು ಬೆರೆಸಬಹುದು.
ಈ ಪೇಸ್ಟ್ ಅನ್ನು ಕೂದಲಿಗೆ ಹಚ್ಚಿ ಸುಮಾರು 20-30 ನಿಮಿಷಗಳ ಕಾಲ ಕೂದಲಿನ ಮೇಲೆ ಬಿಡಿ.ಒಣಗಿದಾಗ, ಸಾಮಾನ್ಯ ನೀರಿನಿಂದ ಕೂದಲನ್ನು ತೊಳೆಯಿರಿ. ಮೊದಲ ಬಾರಿಗೆ ಕೂದಲು ತೊಳೆಯುವಾಗ ಶಾಂಪೂ ಬಳಸಬೇಡಿ.
ಈ ಮಾಸ್ಕ್ ತಯಾರಿಸಲು ಬಳಸುವ ಪ್ರತಿಯೊಂದು ಪದಾರ್ಥ ಕೂದಲಿಗೆ ತುಂಬಾ ಪ್ರಯೋಜನಕಾರಿ. ಮೊಸರು ತಲೆಹೊಟ್ಟು,ಕೂದಲು ಉದುರುವಿಕೆಯನ್ನು ತಡೆಯುತ್ತದೆ. ಮತ್ತೊಂದೆಡೆ, ಅಲೋವೆರಾ ಕೂದಲನ್ನು ಹೊಳೆಯುವಂತೆ ಮಾಡುತ್ತದೆ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ.ಈ ಮಾಹಿತಿಯ ಹೊಣೆಯನ್ನು Zee Kannada News ಖಚಿತಪಡಿಸಿಕೊಳ್ಳುವುದಿಲ್ಲ.