ಬೆಳ್ಳುಳ್ಳಿ ಸಿಪ್ಪೆಯನ್ನು ಹೀಗೆ ಬಳಸಿದರೆ ಹತ್ತೇ ನಿಮಿಷದಲ್ಲಿ ಬುಡದಿಂದಲೇ ಶಾಶ್ವತವಾಗಿ ಕಪ್ಪಾಗುವುದು ಬಿಳಿ ಕೂದಲು
ಬಿಳಿ ಕೂದಲು ತಲೆಯಲ್ಲಿ ಕಂಡ ಕೂಡಲೇ ಚಿಂತೆ ಹತ್ತಿ ಬಿಡುತ್ತದೆ. ಕೆಲವರು ತಕ್ಷಣ ಹೇರ್ ಡೈ, ಅಥವಾ ಹೇರ್ ಕಲರ್ ಮೊರೆ ಹೋಗಿ ಬಿಡುತ್ತಾರೆ. ಇದು ಬಿಳಿ ಕೂದಲಿನ ಸಮಸ್ಯೆಗೆ ಖಂಡಿತವಾಗಿಯೂ ಶಾಶ್ವತ ಪರಿಹಾರವಲ್ಲ.
ನಮ್ಮ ಸುತ್ತಲೇ ಇರುವ ಕೆಲವೊಂದು ನೈಸರ್ಗಿಕ ವಸ್ತುಗಳನ್ನು ಬಳಸುವ ಮೂಲಕ ಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪಾಗಿಸಬಹುದು. ಅವುಗಳಲ್ಲಿ ಒಂದು ಬೆಳ್ಳುಳ್ಳಿ ಸಿಪ್ಪೆ.
ಬೆಳ್ಳುಳ್ಳಿ ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಈ ಬೆಳ್ಳುಳ್ಳಿಯ ಸಿಪ್ಪೆಯನ್ನು ಬಳಸುವ ಮೂಲಕ ಬಿಳಿ ಕೂದಲನ್ನು ಬುಡದಿಂದಲೇ ಕಪ್ಪಾಗಿಸಬಹುದು. ಅದು ಕೂಡಾ ಯಾವುದೇ ಅಡ್ಡ ಪರಿಣಾಮವಿಲ್ಲದೆ.
ಇದಕ್ಕಾಗಿ ನಿಮ್ಮ ಬೊಗಸೆ ತುಂಬಾ ಬೆಳ್ಳುಳ್ಳಿ ಸಿಪ್ಪೆಯನ್ನು ತೆಗೆದುಕೊಳ್ಳಿ. ಇದರ ಜೊತೆ ಅಷ್ಟೇ ಪ್ರಮಾಣದಲ್ಲಿ ಈರುಳ್ಳಿ ಸಿಪ್ಪೆ ಕೂಡಾ ಬೇಕಾಗುತ್ತದೆ. ಈ ಎರಡೂ ತರಕಾರಿಗಳ ಸಿಪ್ಪೆಯನ್ನು ಬಾಣಲೆಯಲ್ಲಿ ಹಾಕಿ ಹುರಿಯಿರಿ.
ನಂತರ ಇದನ್ನೂ ಚೆನ್ನಾಗಿ ಪುಡಿ ಮಾಡಿ. ಈ ಪುಡಿಗೆ ತೆಂಗಿನೆಣ್ಣೆ, ಸಾಸಿವೆ ಎಣ್ಣೆ, ಅಥವಾ ಎಳ್ಳೆಣ್ಣೆ ನಿಮಗೆ ಅನುಕೂಲವಿದ್ದಂತೆ ಯಾವುದದರೊಂದು ಎಣ್ಣೆಯನ್ನು ಬೆರೆಸಿ ನುಣ್ಣಗೆ ಪೇಸ್ಟ್ ತಯಾರಿಸಿಕೊಳ್ಳಿ.
ಹೀಗೆ ತಯಾರಿಸಿಕೊಂಡ ಪೇಸ್ಟ್ ಅನ್ನು ಕೂದಲಿಗೆ ಹಚ್ಚಿ 10 ರಿಂದ 15 ನಿಮಿಷಗಳವರೆಗೆ ಬಿಟ್ಟರೆ ಸಾಕು. ತಲೆಯ ಮೇಲಿನ ಬಿಳಿ ಕೂದಲು ಮಾಯವಾಗಿ ಬಿಡುತ್ತದೆ. ಈ ಮೂಲಕ ನಿರುಪಯೋಗ ಎಂದು ಎಸೆಯುವ ಬೆಳ್ಳುಳ್ಳಿ ಈರುಳ್ಳಿ ಸಿಪ್ಪೆ ಬಳಸಿ ಬಿಳಿ ಕೂದಲನ್ನು ಕಪ್ಪಾಗಿಸಬಹುದು. (ಸೂಚನೆ : ಇಲ್ಲಿ ನೀಡಲಾಗಿರುವ ಮಾಹಿತಿಯನ್ನು ಸಾಮಾನ್ಯ ಜ್ಞಾನದ ಆಧಾರದ ಮೇಲೆ ನೀಡಲಾಗಿದೆ. ಇದನ್ನು Zee Kannada News ಅನುಮೋದಿಸುವುದಿಲ್ಲ. )