ತಲೆಯಲ್ಲಿರುವ ಹೇನನ್ನು ಹೋಗಲಾಡಿಸಲು ಈ ಮನೆ ಮದ್ದು ಬಳಸಿ!
ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಹೇನುಗಳ ಸಮಸ್ಯೆ ಪ್ರತಿಯೊಬ್ಬರನ್ನು ಕಾಡುತ್ತಲೇ ಇರುತ್ತದೆ ಮತ್ತು ಮಕ್ಕಳಿಗೆ ಶಾಲೆಯಿಂದ ಹರಡುವ ಹೇನು ಸಮಸ್ಯೆ ಅಮ್ಮಂದಿರಿಗೆ ತಲೆನೋವಾಗಿ ಬಿಟ್ಟಿದೆ. ಇದನ್ನು ನಾಶಮಾಡುವುದು ಒಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.
ಹೇನುಗಳ ನಾಶಕ್ಕೆ ಮನೆಮದ್ದುಗಳೇ ದೊಡ್ಡ ಪರಿಹಾರ, ಮನೆ ಮದ್ದು ಹೇನುಗಳ ನಿವಾರಣೆಗೆ ಪರಿಣಾಮಕಾರಿಯಾದ ಪಾತ್ರ ವಹಿಸುತ್ತದೆ, ಈ ಮನೆ ಮದ್ದುಗಳನ್ನು ವಾರಕೊಮ್ಮೆ ಬಳಸಿದರು ಬೇಗ ಈ ಸಮಸ್ಯೆಗೆ ಪರಿಹಾರ ಸಿಗುತ್ತದೆ
ಬೆಳ್ಳುಳ್ಳಿಯನ್ನು ಬಳಸಿ ತಲೆಯಲ್ಲಿರುವ ಹೇನುಗಳ ನಿರ್ಮೂಲನೆ ಮಾಡಬಹುದು, ಇದು ಆ್ಯಂಟಿಬಯಾಟಿಕ್ ಅಂಶವನ್ನು ಹೊಂದಿದ್ದು, ಕೂದಲನ್ನು ಸ್ವಚ್ಛಗೊಳಿಸಿ ಬ್ಯಾಕ್ಟೀರಿಯಾ ನಿರ್ಮೂಲನೆ ಮಾಡುತ್ತದೆ. ಬೆಳ್ಳುಳ್ಳಿಯನ್ನು ಜಜ್ಜಿ ಅದರ ರಸವನ್ನು ತಲೆಗೆ ಹಾಕಿಕೊಳ್ಳಿ, 15 ರಿಂದ 20 ನಿಮಿಷ ಬಿಟ್ಟು, ಬೆಚ್ಚಗಿನ ನೀರಿನಿಂದ ಕೂದಲು ತೊಳೆದುಕೊಂಡರೆ ಇದರಿಂದ ಹೇನು ನಾಶವಾಗುತ್ತದೆ.
ಟೀ ಟ್ರಿ ಆಯಿಲ್ ಅನ್ನು ಬಳಸುವುದು ಉತ್ತಮ, ಈ ಎಣ್ಣೆಗೆ ಲ್ಯಾವೆಂಡರ್ ಎಣ್ಣೆ ಮಿಶ್ರ ಮಾಡಿ, ಶ್ಯಾಂಪೂವಿಗೆ ಇದನ್ನು ಮಿಶ್ರ ಮಾಡಿ ಚೆನ್ನಾಗಿ ಕೂದಲಿನ ಬುಡಕ್ಕೆ ತುದಿಗೆ ಹಚ್ಚಿಕೊಂಡು ತಲೆ ಸ್ನಾನ ಮಾಡಿ, ವಾರಕ್ಕೊಮ್ಮೆ ಟೀ ಟ್ರಿ ಆಯಿಲ್ ಕೂದಲಿಗೆ ಬಳಸುವುದರಿಂದ ಇದಕ್ಕೆ ಪರಿಹಾರ ಸಿಗುತ್ತದೆ.
ಈರುಳ್ಳಿ ರಸ: ನೈಸರ್ಗಿಕ ಹೇನು ನಿವಾರಕವಾಗಿ ಈರುಳ್ಳಿ ರಸ ಕಾರ್ಯನಿರ್ವಹಿಸುತ್ತದೆ. ಇದರಲ್ಲಿರುವ ಆ್ಯಸಿಡಿಕ್ ಅಂಶ ಹೇನುಗಳಿಗೆ ರಾಮ ಬಾಣವಾಗಿದೆ. ಮನೆಯಲ್ಲೇ ಈರುಳ್ಳಿ ರಸ ತಯಾರಿಸಿ ಕೂದಲಿಗೆ ಹಚ್ಚಿಕೊಳ್ಳಿ. ನಂತರ ಚೆನ್ನಾಗಿ ರಸವನ್ನು ತೊಳೆದುಕೊಳ್ಳಿ. ಈರುಳ್ಳಿ ರಸ ಕೂದಲಿಗೆ ರಾಮಬಾಣವಾಗಿದ್ದು ವಾರಕ್ಕೊಮ್ಮೆ ರಸವನ್ನು ಕೂದಲಿಗೆ ಹಚ್ಚಿ ಪ್ರಯೋಜನ ಪಡೆದುಕೊಳ್ಳುತ್ತೀರಾ
ಒದ್ದೆ ತಲೆ ಬಾಚಿಕೊಳ್ಳುವುದು: ಮೊದಲಿಗೆ ತಲೆಯ ಸಿಕ್ಕು ಬಿಡಿಸಿಕೊಂಡು ಕೂದಲನ್ನು ಒಣಗಿಸಿ. ನಂತರ ಕೂದಲಿಗೆ ನೀರು ಹಾಕಿ ಮತ್ತು ಕಂಡೀಷನರ್ ಬಳಸಿ. ಕೂದಲನ್ನು ಎರಡು ವಿಭಾಗ ಮಾಡಿ ಹಾಗೂ ಅಗಲ ಹಲ್ಲುಗಳಿರುವ ಬಾಚಣಿಗೆಯಿಂದ ಬಾಚಿಕೊಳ್ಳಿ. ಒದ್ದೆ ಕೂದಲಿನಲ್ಲಿ ಹೇನುಗಳು ಬೇಗನೇ ಬರುತ್ತವೆ.
ಬೇವಿನ ಎಣ್ಣೆ: ಬೇವಿನ ಎಣ್ಣೆ ಅದ್ಭುತ ಆ್ಯಂಟಿಬ್ಯಾಕ್ಟೀರಿಯಲ್ ಅಂಶಗಳನ್ನೊಳಗೊಂಡಿದೆ. ಇದನ್ನು ತ್ವಚೆಗೂ ಬಳಸಬಹುದು. ಹೇನುಗಳ ನಿವಾರಣೆಗೆ ಇದು ಉತ್ತಮ ಮನೆಮದ್ದಾಗಿದೆ. ಸ್ವಲ್ಪ ಎಣ್ಣೆ ತೆಗೆದುಕೊಂಡು ಅದನ್ನು ಕೂದಲಿಗೆ ಹಚ್ಚಿ. ನಿಮ್ಮ ದಿನವೂ ಬಳಸುವ ತೆಂಗಿನೆಣ್ಣೆಗೂ ಇದನ್ನು ಸೇರಿಸಿಕೊಳ್ಳಿ. ಬೆಚ್ಚಗಿನ ಟವೆಲ್‌ನಿಂದ ಕೂದಲನ್ನು ಸುತ್ತಿಕೊಳ್ಳಿ. ಸ್ವಲ್ಪ ನಿಮಿಷ ಹಾಗೆಯೇ ಬಿಡಿ. ನಂತರ ತಲೆ ತೊಳೆದುಕೊಳ್ಳಿ. ವಾರಕ್ಕೊಮ್ಮೆ ಇದನ್ನು ಅನುಸರಿಸಿ ಕೂದಲಿನಿಂದ ಹೇನುಗಳು ನಿವಾರಣೆಯಾಗುತ್ತವೆ.