ಈ ಪುಡಿಯನ್ನು ಸಕ್ಕರೆಯೊಂದಿಗೆ ಬೆರೆಸಿ ಹಾಕಿ..ಜಿರೆಳಗಳು ಸುಳಿವು ಕೂಡ ಇರದಂತೆ ಮಾಯವಾಗುತ್ತವೆ..!

Thu, 17 Oct 2024-7:13 am,

How to keep cockroaches away : ಮನೆಯಲ್ಲಿ ಎಲ್ಲರನ್ನೂ ಸಾಮಾನ್ವಯವಾಗಿ ಕಾಡುವ ತೊಂದರೆ ಎಂದರೆ, ಸೊಳ್ಳೆ ಹಾಗೂ ನೊಣಗಳ ಕಾಟ. ಸೊಳ್ಳೆ ಹಾಗೂ ನೊಣಗಳನ್ನು ಬಿಡಿ, ಅದಕ್ಕೂ ಒಂದು ಕೈ ಮೇಲಾಗಿ ಜಿರೆಳಗಳು ಮನುಷ್ಯರಿಗೆ ಭಾರಿ ತೊಂದರೆಯನ್ನುಂಟು ಮಾಡುತ್ತವೆ. ಹಾಗಾದರೆ, ಈ ಜಿರಳೆಗಳನ್ನು ಮನೆಯಿಂದ ಹೊರಹಾಕಲು ಏನೂ ಮಡಬೇಕು ಎಂದು ಯೋಚಿಸುತ್ತಿದ್ದೀರಾ? ಹೀಗೆ ಮಾಡಿ ಸಾಕು...  

ಮನೆಯಲ್ಲಿ ಹೆಚ್ಚು ಜಿರಳೆಗಳಿರುವ ಕಾರಣ ಅವು ಎಷ್ಟು ಕಿರಿಕಿರಿ ಉಂಟು ಮಾಡುತ್ತವೆಯೋ, ಅಷ್ಟೇ ಕಿರಿಕಿರಿ ಆರೋಗ್ಯಕ್ಕೂ ಕೂಡ ಉಂಟು ಮಾಡುತ್ತವೆ. ಮನೆಯಲ್ಲಿ ಅನಗತ್ಯ ವಸ್ತುಗಳು, ದಿನಪತ್ರಿಕೆಗಳು, ಕಾರ್ಡ್‌ಬೋರ್ಡ್‌ಗಳು ಇದ್ದಲ್ಲಿ ಈ ರೀತಿ ಜಿರಳೆಗಳು ಕಾಣಿಸಿಕೊಳ್ಳುವುದು ಹೆಚ್ಚು. ಅದರಿಂದ ಜಿರಳೆಗಳನ್ನು ತಡೆದು ಹಾಕಬೇಕೆಂದರೆ, ನೀವು ಈ ವಸ್ತುಗಳನ್ನು ಮನೆಯಲ್ಲಿ ಇಡಬಾರದು.   

ಮನೆಯಲ್ಲಿ ಯಾವುದಾದರೂ ಒಂದು ಸ್ಥಳ ತುಂವಾ ಕೊಳಕಾಗಿ ಕಾಣಿಸುತ್ತಿದೆ ಎಂದರೆ, ಅಂತಹ ಸ್ಥಳದಲ್ಲಿ ಜಿರೆಳೆಗಳು ಬರುವುದು ಸಾಮಾನ್ಯ. ಇದರಿಂದ ಅಡಿಗೆ ಮತ್ತು ಪ್ಯಾಂಟ್ರಿಯನ್ನು ಸಹ ಸ್ವಚ್ಛಗೊಳಿಸಿ, ಹಾಗೆಯೇ ಮನೆಯಲ್ಲಿ ಎಲ್ಲಿಯಾದರೂ ರಂಧ್ರಗಳು, ಬಿರುಕುಗಳು, ಒಡೆದ ಪೈಪ್‌ಗಳು, ಸಿಂಕ್‌ಗಳು ಇದ್ದರೆ, ಅವುಗಳನ್ನು ಕ್ಲೀನ್‌ ಆಗಿ ಇಡಲು ಪ್ರಯತ್ನಿಸಿ.   

ಬೋರಿಕ್ ಆಸಿಡ್‌ ಜಿರಳೆಗಳನ್ನು ಹಿಮ್ಮೆಟ್ಟಿಸಲು ಸಹಾಯ ಮಾಡುತ್ತದೆ. ಆದ್ದರಿಂದ, ಜಿರಳೆಗಳು ಹೆಚ್ಚು ಓಡಾಡುವ ಸ್ಥಳಗಳಲ್ಲಿ ಸಿಂಪಡಿಸಿ, ಇದು ಜಿರಳೆಗಳನ್ನು ದೂರವಿಡಲು ಸಹಾಯ ಮಾಡುತ್ತದೆ.   

ಅಡಿಗೆ ಸೋಡಾ ಮತ್ತು ಸಕ್ಕರೆಯನ್ನು ಸಮಾನ ಪ್ರಮಾಣದಲ್ಲಿ ಮಿಶ್ರಣ ಮಾಡಿ. ಈ ಪುಡಿಯನ್ನು ಅಲ್ಲಿ ಇಲ್ಲಿ ಸಿಂಪಡಿಸಿ. ಇದರಿಂದ ಜಿರಳೆಗಳು ಕಣ್ಣಿಗೆ ಕಾಣದಂತೆ ಓಡಿ ಹೋಗುತ್ತದೆ. ಸಕ್ಕರೆ ಜಿರಳೆಗಳನ್ನು ಆಕರ್ಷಿಸುತ್ತದೆ. ಅಡಿಗೆ ಸೋಡಾ ಜಿರಳೆಗಳನ್ನು ಹಿಮ್ಮೆಟ್ಟಿಸುತ್ತದೆ. ಹಾಗಾಗಿ ಇವೆರಡನ್ನು ಒಟ್ಟಿಗೆ ಬಳಸುವುದರಿಂದ ಜಿರಳೆಗಳ ಕಾಟದಿಂದ ಮುಕ್ತಿ ಪಡೆಯಬಹುದು.   

ವೈಟ್‌ ವಿನೆಗರ್‌ ವೈಟ್‌ ವಿನೆಗರ್‌ ಸಹ ಜಿರಳೆಗಳನ್ನು ಹಿಮ್ಮೆಟ್ಟಿಸಲು ಸಹಾಯ ಮಾಡುತ್ತದೆ. ಇದು ಬ್ಯಾಕ್ಟೀರಿಯಾಗಳನ್ನು ನಾಶ ಮಾಡಿ. ಜಿರಳೆಗಳನ್ನು ಕೂಡ ಓಡಿಸಲು ಸಹಾಯ ಮಾಡುತ್ತದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link