ಈ 3 ವಸ್ತುಗಳನ್ನು ಹೀಗೆ ಬಳಸಿದ್ರೆ ಬಿಳಿ ಕೂದಲು ಶಾಶ್ವತವಾಗಿ ಕಪ್ಪಾಗುತ್ತದೆ!
ಕೂದಲು ಬಿಳಿಯಾಗುವುದಕ್ಕೂ ವಯಸ್ಸಿಗೂ ಸಂಬಂಧ ಕಲ್ಪಿಸುವ ಕಾಲವಿತ್ತು, ಆದರೆ ಇಂದು ಅದು ಸಾಮಾನ್ಯ ಸಮಸ್ಯೆಯಾಗಿದೆ. ಈಗ ಚಿಕ್ಕ ವಯಸ್ಸಿನಲ್ಲೇ ಜನರ ಕೂದಲು ಬಿಳಿ ಬಣ್ಣಕ್ಕೆ ತಿರುಗಲು ಪ್ರಾರಂಭಿಸಿದೆ.
ಕೂದಲು ಬಿಳಿಯಾಗುವುದು ನಮ್ಮ ಆತ್ಮವಿಶ್ವಾಸದ ಮೇಲೂ ಪರಿಣಾಮ ಬೀರುತ್ತದೆ. ಕೆಲವು ಮನೆಮದ್ದುಗಳ ಸಹಾಯದಿಂದ ನೈಸರ್ಗಿಕವಾಗಿ ನಿಮ್ಮ ಕೂದಲನ್ನು ಮತ್ತೆ ಕಪ್ಪಾಗಿಸಬಹುದು.
ಹಾರ್ಮೋನ್ ಬದಲಾವಣೆಗಳು, ತಪ್ಪು ಕೂದಲು ಉತ್ಪನ್ನಗಳ ಬಳಕೆ, ಮೆಲನಿನ್ ವರ್ಣದ್ರವ್ಯದ ಕಡಿತ ಹೀಗೆ ಬಿಳಿ ಕೂದಲಿಗೆ ವಿವಿಧ ಕಾರಣಗಳಿವೆ.
ಕೂದಲಿನ ಆರೋಗ್ಯಕ್ಕೆ ಚಹಾ ಎಲೆಗಳು ತುಂಬಾ ಪ್ರಯೋಜನಕಾರಿ. ಚಹಾ ಎಲೆಗಳನ್ನು ನೀರಿನಲ್ಲಿ ಕುದಿಸಿ ಮತ್ತು ತಣ್ಣಗಾಗಲು ಬಿಡಿ. ನೀರು ತಣ್ಣಗಾದಾಗ ಕೂದಲಿನ ಬುಡಕ್ಕೆ ಹಚ್ಚಿ ಸ್ವಲ್ಪ ಸಮಯ ಮಸಾಜ್ ಮಾಡಿ. ಸುಮಾರು ಒಂದು ಗಂಟೆಯ ನಂತರ, ಸಾಮಾನ್ಯ ನೀರಿನಿಂದ ಕೂದಲನ್ನು ತೊಳೆಯಿರಿ.
ಆಮ್ಲಾ ಕೂದಲಿನ ಆರೋಗ್ಯಕ್ಕೆ ಪ್ರಯೋಜನಕಾರಿ. ಕೂದಲನ್ನು ಬಲಪಡಿಸಲು, ಕಪ್ಪಾಗಿಡಲು ಮತ್ತು ಉದುರುವಿಕೆಯನ್ನು ತಡೆಯಲು ಸಹಾಯಕ. ಆಮ್ಲಾವನ್ನು ಗೋರಂಟಿ ಜೊತೆ ಬಳಸಬಹುದು. ಕೂದಲಿನ ಬೇರುಗಳಿಗೆ ತಾಜಾ ಆಮ್ಲಾ ರಸವನ್ನು ಹಚ್ಚಬಹುದು.
ಮೆಂತ್ಯ ನೈಸರ್ಗಿಕವಾಗಿ ಕೂದಲನ್ನು ಕಪ್ಪಾಗಿಸುತ್ತದೆ. ಎರಡು ಚಮಚ ಮೆಂತ್ಯ ಬೀಜಗಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿಡಿ. ಬೆಳಿಗ್ಗೆ ಅದನ್ನು ಪುಡಿಮಾಡಿ ಕೂದಲಿನ ಬೇರುಗಳಿಗೆ ಹಚ್ಚಿ ನಂತರ ತಲೆ ಸ್ನಾನ ಮಾಡಿ. ನಿಮಗೆ ಬೇಕಿದ್ದರೆ ತೆಂಗಿನೆಣ್ಣೆ ಅಥವಾ ಬಾದಾಮಿ ಎಣ್ಣೆಯೊಂದಿಗೆ ಬೆರೆಸಿ ಹೇರ್ ಪ್ಯಾಕ್ ಆಗಿಯೂ ಬಳಸಬಹುದು.