12 ತಿಂಗಳಲ್ಲಿ 49 ಶತಕ ಸಿಡಿಸಿ ಸಾಧನೆ ಬರೆದ 13 ವರ್ಷದ ಆಟಗಾರ..! ಆಸ್ಟ್ರೇಲಿಯಾ ಬೌಲರ್‌ಗಳ ಬೆವರಿಳಿಸಿದ ಟೀಂ ಇಂಡಿಯಾದ ಏಕೈಕ ಯುವಕ..?!

Tue, 26 Nov 2024-12:12 pm,

Vaibhav Suryavanshi: ಐಪಿಎಲ್‌ ಹರಾಜು ಪ್ರಕ್ರಿಯೆ ನಿನ್ನೆಯಷ್ಟೆ ನಡೆದು ಮುಗಿದಿದೆ. ತಮ್ಮ ತಂಡವನ್ನು ಗೆಲ್ಲಿಸಬಲ್ಲ ಆಟಗಾರರನ್ನು ಎಲ್ಲಾ ತಂಡಗಳು ಆಯ್ಕೆ ಮಾಡಿಕೊಂಡಿದ್ದು, ಅಚ್ಚರಿ ಎನಿಸುವಂತೆ, 13 ವರ್ಷದ ಯುವಕ ಐಪಿಎಲ್‌ ಹರಾಜಿಗೆ ಎಂಟ್ರಿ ಕೊಟ್ಟು ಭಾರಿ ಮೊತ್ತಕ್ಕೆ ಸೇಲ್‌ ಆಗಿದ್ದಾನೆ.  

ಹೌದು, ಸದ್ಯ ಐಪಿಎಲ್‌ ಹರಾಜಿನ ವಲಯದಲ್ಲಿ ಸಾಕಷ್ಟು ಹೊಸ ದಾಕಲೆಗಳು ನಿರ್ಮಾನವಾಗಿವೆ, ಅದರಲ್ಲಿ ಟೀಂ ಇಂಡಿಯಾದ 13 ವರ್ಷದ ಬಾಲಕನದ್ದು ಕೂಡ ಒಂದು. ಅಷ್ಟಕ್ಕೂ ವೈರಲ್‌ ಆಗುತ್ತಿರುವ ಈ ಯುವಕ ಯಾರು..? ಆತನ ಹಿನ್ನೆಲೆ ಏನು...? ತಿಳಿಯಲು ಮುಂದೆ ಓದಿ...  

ಐಪಿಎಲ್‌ನಲ್ಲಿ ರಿಷಬ್‌ ಪಂತ್‌, ಶ್ರೇಯಸ್‌ ಐಯ್ಯರ್‌ ಹಾಗೂ ದಾಕಲೆಯ ಮೊತ್ತಕ್ಕೆ ಸೇಲ್‌ ಆಗಿದ್ದಾರೆ, ಇವರಿಬ್ಬರ ಮಧ್ಯೆ 13 ವರ್ಷದ ಯುವಕ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದ್ದಾನೆ.  

ವೈಭವ್ ಸೂರ್ಯವಂಶಿ.. ಈ ಹೆಸರನ್ನು ನೀವು ಈ ಮುಂಚೆ ಕೇಲಿರದೆ ಇರಬಹುದು, ಕೇಳಿದ್ದೂ ಕೂಡ ಹೆಚ್ಚು ಗಮನಿಸದೆ ಬಿಟ್ಟಿರಬಹುದು, ಆದರೆ ಸದ್ಯ ಈ ಹೆಸರು ಕ್ರಿಕೆಟ್‌ ವಲಯದಲ್ಲಿ ಚರ್ಚೆಯ ಮುಕ್ಯ ಟಾಪಿಕ್‌ ಆಗಿದೆ.   

ನೆಟ್ಟಿಗರು ಗೂಗಲ್‌ನಲ್ಲಿ ಈ 13 ವರ್ಷದ ವೈಭವ್ ಸೂರ್ಯವಂಶಿ ಯಾರು ಎಂದು ಹುಡುಕಲು ಶುರು ಮಾಡಿದ್ದಾರೆ. ಅಷ್ಟಕ್ಕೂ ನೀವು ಆತನ ಬಗ್ಗೆ ಹುಡುಕುವುದು ಆಗಿರಲಿ, ಈ ಪುಟ್ಟ ಬಾಲಕನ ಸಾಧನೆಯ ಬಗ್ಗೆ ತಿಳಿದರೆ ನೀವು ಶಾಕ್‌ ಆಗುತ್ತೀರಿ.  

ವೈಭವ್ ಸೂರ್ಯವಂಶಿ ಒಂದೇ ವರ್ಷದಲ್ಲಿ 49 ಶತಕ ಬಾರಿಸಿ ಸಂಚಲನ ಮೂಡಿಸಿದ್ದಾರೆ. ಬಿಹಾರದ ಸಮಸ್ತಿಪುರದಲ್ಲಿ ಜನಿಸಿದ ವೈಭವ್ ಐಪಿಎಲ್ ಇತಿಹಾಸದಲ್ಲಿ ಖರೀದಿಸಿದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡಿದ್ದಾರೆ.  

13 ವರ್ಷದ ವೈಭವ್ ಸೂರ್ಯವಂಶಿ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆಡುವ ಅತ್ಯಂತ ಕಿರಿಯ ಆಟಗಾರ, ಮೆಗಾ ಹರಾಜಿನಲ್ಲಿ 30 ಲಕ್ಷ ರೂ.ಗಳ ಮೂಲ ಬೆಲೆಯೊಂದಿಗೆ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದ, ಈತನನ್ನು ರಾಜಸ್ಥಾನ್ ರಾಯಲ್ಸ್ ತಂಡ 1 ಕೋಟಿ 10 ಲಕ್ಷಕ್ಕೆ ಬಿಡ್ ಮಾಡುವ ಮೂಲಕ ತಮ್ಮ ತಂಡಕ್ಕೆ ಸೇರ್ಪಡೆ ಮಾಡಿಕೊಂಡಿದೆ.  

5 ವರ್ಷದವರಿದ್ದಾಗ ವೈಭವ್‌ ಸೂರ್ಯವಂಶಿ ಕ್ರಿಕೆಟ್‌ಗೆ ಕಾಲಿಟ್ಟಿದ್ದರು, 10 ನೇ ವಯಸ್ಸಿನಲ್ಲಿ, ಅವರು ಪಾಟ್ನಾಗೆ ಹೋಗಲು ನಿರ್ಧರಿಸಿದ ಇವರು, ಮಾಜಿ ರಣಜಿ ಆಟಗಾರ ಮನೀಶ್ ಓಜಾ ಅವರ ಬಳಿ ಟ್ರೇನಿಂಗ್‌ ಆರಂಭಿಸಿದರು.  

ವೈಭವ್ ಸೂರ್ಯವಂಶಿ ಕೇವಲ 13 ನೇ ವಯಸ್ಸಿನಲ್ಲಿ ತಮ್ಮ ಹೆಸರಿನಲ್ಲಿ ಅನೇಕ ದಾಖಲೆಗಳನ್ನು ಮಾಡಿದ್ದಾರೆ.ಆಸ್ಟ್ರೇಲಿಯಾದ ಅಂಡರ್-19 ತಂಡದ ವಿರುದ್ಧ ಯೂತ್ ಟೆಸ್ಟ್‌ನಲ್ಲಿ ಅಂತರಾಷ್ಟ್ರೀಯ ಶತಕ ಗಳಿಸಿದ ಅತ್ಯಂತ ಕಿರಿಯ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದರು.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link