ಖುಲಾಯಿಸುವುದು ಈ ರಾಶಿಯವರ ಅದೃಷ್ಟ ! ಇನ್ನೊಂದು ತಿಂಗಳಲ್ಲಿ ಹರಿದು ಬರುವುದು ಧನ ಸಂಪತ್ತು

Thu, 20 Jul 2023-10:05 am,

ಗುರು ಗ್ರಹವನ್ನು ಸಮೃದ್ಧಿ, ವೈಭವ, ಸಂಪತ್ತು, ಆಧ್ಯಾತ್ಮಿಕತೆ ಮತ್ತು ಪೂಜೆ ಇತ್ಯಾದಿಗಳ ಅಂಶವೆಂದು ಕರೆಯಲಾಗುತ್ತದೆ.ಹಾಗಾಗಿ ಗುರುವಿನ ಚಲನೆ ಜಾತಕ ಫಲದ ಮೇಲೆ ಬಹಳ ಪರಿಣಾಮ ಬೀರುತ್ತದೆ. 

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಗುರು ಸೆಪ್ಟೆಂಬರ್ 4, 2023 ರಂದು ಬೆಳಿಗ್ಗೆ 9.15 ಕ್ಕೆ ಹಿಮ್ಮುಖವಾಗಿ ಚಲಿಸಲು ಆರಂಭಿಸಲಿದ್ದಾನೆ. ಗುರುವಿನ ಹಿಮ್ಮುಖ ಚಲನೆ ಕೆಲವು ರಾಶಿಯವರ ಜೀವನದಲ್ಲಿ ಸಂತೋಷವನ್ನು ಹೆಚ್ಚಿಸಲಿದೆ. ಇವರ ಜೀವನದ ಪ್ರಗತಿಯ ಹಾದಿಯು ತೆರೆದುಕೊಳ್ಳುತ್ತದೆ

ಕಟಕ ರಾಶಿ : ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಸೆಪ್ಟೆಂಬರ್‌ನಲ್ಲಿ ಗುರುಗ್ರಹದ ಹಿಮ್ಮುಖ ಚಲನೆಯು ಕರ್ಕಾಟಕ ರಾಶಿಯವರ ವೃತ್ತಿ ಮತ್ತು ವ್ಯವಹಾರದ ಮೇಲೆ ಮಂಗಳಕರ ಪರಿಣಾಮವನ್ನು ಬೀರುತ್ತದೆ. ಗುರುವು ಈ ರಾಶಿಯ ಹತ್ತನೇ ಮನೆಯಲ್ಲಿ ಹಿಮುಖ ಚಲನೆ ಆರಂಭಿಸಲಿದೆ. ಈ ರಾಶಿಯ ಜನರು ವ್ಯವಹಾರದಲ್ಲಿ ಯಶಸ್ಸನ್ನು ಸಾಧಿಸುತ್ತಾರೆ. ಉದ್ಯೋಗಿಗಳು ಈ ಅವಧಿಯಲ್ಲಿ ಉನ್ನತ ಸ್ಥಾನಕ್ಕೆ ಏರುತ್ತಾರೆ. ವೃತ್ತಿಯಲ್ಲಿಯೂ ಪ್ರಗತಿಗೆ ಹೊಸ ಅವಕಾಶಗಳು ದೊರೆಯಲಿವೆ.

ಮಿಥುನ ರಾಶಿ :ಗುರುಗ್ರಹದ ಹಿಮ್ಮುಖ ಚಲನೆಯಿಂದಾಗಿ ಈ ರಾಶಿಯವರ ಒಳ್ಳೆಯ ದಿನಗಳು ಪ್ರಾರಂಭವಾಗುತ್ತವೆ. ಗುರುಗ್ರಹವು ನಿಮ್ಮ ಸಂಕ್ರಮಣ ಜಾತಕದ ಆದಾಯದ ಮನೆಯಲ್ಲಿ ಹಿಮ್ಮುಖವಾಗಿ ಚಲಿಸಲಿದ್ದಾನೆ. ಇದರ ಪರಿಣಾಮ ಆದಾಯದಲ್ಲಿ ಭಾರೀ ಹೆಚ್ಚಳ ಕಂಡುಬರುತ್ತದೆ. ಜೀವನ ಸಂಗಾತಿಯ ಪ್ರಗತಿಯೂ ಖಚಿತವಾಗಿ ಆಗುತ್ತದೆ. ಸಂಗಾತಿಯ ಜೊತೆ ಸೇರಿ ಹೊಸ ಆಸ್ತಿ ಇತ್ಯಾದಿಗಳನ್ನು ಖರೀದಿಸಬಹುದು. 

ಮೇಷ ರಾಶಿ : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮೇಷ ರಾಶಿಯವರಿಗೆ ಹಿಮ್ಮುಖ ಗುರು ಕೂಡಾ ಮಂಗಳಕರವಾಗಿರುತ್ತದೆ. ಈ ರಾಶಿಯವರಿಗೆ ಅದೃಷ್ಟದ ಬೆಂಬಲ ಸಿಗಲಿದೆ. ಆತ್ಮವಿಶ್ವಾಸ ಹೆಚ್ಚಾಗಲಿದೆ. ಈ ಸಮಯದಲ್ಲಿ, ಉದ್ಯೋಗವನ್ನು ಹುಡುಕುತ್ತಿರುವ ಯುವಕರಿಗೆ ಶುಭ ಸುದ್ದಿ ಸಿಗಲಿದೆ. ವಿದೇಶ ಪ್ರಯಾಣದ ಯೋಗ ಕೂಡಿ ಬರುವುದು.

(  ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)   

ZEENEWS TRENDING STORIES

By continuing to use the site, you agree to the use of cookies. You can find out more by Tapping this link