Vakri Shani: ಸೆಪ್ಟೆಂಬರ್ ತಿಂಗಳಲ್ಲಿ, ಈ ರಾಶಿಯವರ ಮೇಲೆ ವಕ್ರೀ ಶನಿಯ ಪ್ರಭಾವ

Tue, 31 Aug 2021-12:00 pm,

ಮಿಥುನ ರಾಶಿಯಲ್ಲಿ ಶನಿಯ ಧಯೇ ನಡೆಯುತ್ತಿದೆ. ಮಕರ ರಾಶಿಯಲ್ಲಿ ಶನಿಯ ಹಿನ್ನಡೆ ಮಿಥುನ ರಾಶಿಯವರನ್ನು ಆರ್ಥಿಕ ಸಂಕಷ್ಟದಿಂದ ಹೊರತರುತ್ತದೆ. ಆದರೆ ಅವರ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಆದ್ದರಿಂದ ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ.  

ಶನಿಯ ಧಯೇ ಹೊಂದಿರುವ ತುಲಾ ರಾಶಿಯ ಜನರು ಸೆಪ್ಟೆಂಬರ್‌ನ ಮೂರು ವಾರಗಳಲ್ಲಿ ಉತ್ತಮ ಆರ್ಥಿಕ ಲಾಭ ಗಳಿಸುತ್ತಾರೆ, ಆದರೆ ಕೊನೆಯ ವಾರವೂ ಹಾನಿಕಾರಕ ಎಂದು ಹೇಳಲಾಗುತಿದೆ. ಈ ರಾಶಿಯ ಜನರು ಈ ತಿಂಗಳು ಸಾಧ್ಯವಾದಷ್ಟು ಯಾವುದೇ ರೀತಿಯ ವಾದ-ವಿವಾದಗಳಿಂದ ದೂರವಿರಲು ಪ್ರಯತ್ನಿಸಿ.  

ಶನಿಯ ಸಾಡೇ ಸಾತಿ ಪ್ರಭಾವದ ಮೊದಲ ಹಂತವನ್ನು ಎದುರಿಸುತ್ತಿರುವ ಧನು ರಾಶಿಯವರಿಗೆ ಸೆಪ್ಟೆಂಬರ್ ತಿಂಗಳು ಸಂತೋಷವನ್ನು ತರುತ್ತದೆ. ಹಣದ ಮನೆಯಲ್ಲಿ ಶನಿ ದೇವ (Shani Deva) ಇರುವುದು ಕೂಡ ಅವರಿಗೆ ಲಾಭವನ್ನು ನೀಡುತ್ತದೆ ಮತ್ತು ಉತ್ತಮ ಹೂಡಿಕೆಗೆ ಕೂಡ ಒಳ್ಳೆಯ ಸಮಯ. ವೃತ್ತಿಜೀವನದಲ್ಲಿ ಯಶಸ್ಸು ಕೂಡ ಇರುತ್ತದೆ.

ಇದನ್ನೂ ಓದಿ- Shukra Rashi Parivartan: ಈ ರಾಶಿಯವರಿಗೆ ಅದೃಷ್ಟ ಹೊತ್ತು ತರಲಿದೆ ಶುಕ್ರನ ರಾಶಿ ಪರಿವರ್ತನೆ

ಈ ರಾಶಿಯವರು ಶನಿಯ ಎರಡೇ ಹಂತದ ಸಾಡೇ ಸಾತಿಯ (Sade Sati Shani) ಪ್ರಭಾವದಲ್ಲಿದ್ದು ಈ ಸಮಯದಲ್ಲಿ ನೀವು ಅನಾರೋಗ್ಯ ಮತ್ತು ಅಪಘಾತಗಳ ಬಗ್ಗೆ ಬಹಳ ಎಚ್ಚರಿಕೆಯಿಂದ ಇರುವುದು ಮುಖ್ಯ. ಮಕರ ರಾಶಿಯ ಜನರು ವಾಹನ ಚಲಾಯಿಸುವಾಗ ಬಹಳ ಜಾಗರೂಕರಾಗಿಬೇಕು. ಅಷ್ಟೇ ಅಲ್ಲ ಹಣದ ವಿಷಯದಲ್ಲೂ ಎಚ್ಚರಿಕೆಯಿಂದ ಇರಬೇಕು, ಇಲ್ಲವೇ ನಷ್ಟವಾಗಬಹುದು.

ಇದನ್ನೂ ಓದಿ- Monthly Horoscope, September 2021: ಸೆಪ್ಟೆಂಬರ್ ತಿಂಗಳಿನಲ್ಲಿ ಈ ರಾಶಿಯವರಿಗೆ ವೃತ್ತಿ ಜೀವನದಲ್ಲಿ ಯಶಸ್ಸು ಪ್ರಾಪ್ತಿ

ಸಾಡೇ ಸಾತಿ ಶನಿಯ ಕೊನೆಯ ಪ್ರಭಾವದಲ್ಲಿರುವ ಕುಂಭ ರಾಶಿಯವರಿಗೆ ಶನಿಯು ನಿಮ್ಮ ಕುಟುಂಬದ ಸಮಸ್ಯೆಗಳನ್ನು ಹೆಚ್ಚಿಸಬಹುದು. ಹಣದ ಕೊರತೆಯು ಈ ರಾಶಿಯ ಜನರನ್ನು ಸಾಲ ತೆಗೆದುಕೊಳ್ಳುವಂತೆ ಒತ್ತಾಯಿಸುತ್ತದೆ. ಹಾಗಾಗಿ ಈ ಸಮಯದಲ್ಲಿ ನೀವು ನಿಮ್ಮ ಖರ್ಚು-ವೆಚ್ಚದ ಬಗ್ಗೆ ಹೆಚ್ಚು ನಿಗಾ ವಹಿಸಿ. (ಸೂಚನೆ: ಈ ಲೇಖನದಲ್ಲಿ ನೀಡಿರುವ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಊಹೆಗಳನ್ನು ಆಧರಿಸಿದೆ. ಜೀ ಹಿಂದೂಸ್ಥಾನ್ ಕನ್ನಡ ನ್ಯೂಸ್ ಇದನ್ನು ದೃಢೀಕರಿಸುವುದಿಲ್ಲ.)

ZEENEWS TRENDING STORIES

By continuing to use the site, you agree to the use of cookies. You can find out more by Tapping this link