Valentine`s Day Special ರೋಸ್ ಆಯ್ಕೆ ಮಾಡುವಾಗ ಎಚ್ಚರವಿರಲಿ. ಪ್ರತಿಯೊಂದಕ್ಕೂ ಅರ್ಥವಿದೆ.!

Sun, 07 Feb 2021-12:35 pm,

ಗೊತ್ತಿರಲಿ.ವಾಲೈಂಟೆನ್ ಡೇ ಶುರುವಾಗುವುದು ಇವತ್ತಿನಿಂದಲೇ. ನಿಮಗೆ ಅಚ್ಚರಿಯಾಗಬಹುದು. ವಾಲೆಂಟೈನ್ ಡೇ ಫೆ. 14 ಕ್ಕೆ ಆಚರಿಸಲಾಗುತ್ತದೆ. ಆದರೆ, ಫೆ. 7ಕ್ಕೆ ಯಾವ ರೀತಿಯ ವಾಲೈಂಟೆನ್ ಡೇ..? ನಿಜ. ಇವತ್ತಿನಿಂದಲೇ ಅಂದರೆ ಫೆ. 7 ರಿಂದಲೇ ವಾಲೈಂಟೆನ್ ವೀಕ್ ಅಂದರೆ ಪ್ರೇಮಿಗಳ ಸಪ್ತಾಹ ಆಚರಿಸಲಾಗುತ್ತದೆ. ಫೆ. 14 ಕ್ಕೆ ಅದು ಕೊನೆಗೊಳ್ಳುತ್ತದೆ. ಈ ದಿನಗಳಲ್ಲಿ ನೀಡುವ ಗುಲಾಬಿಗೆ ವಿಶೇಷ ಅರ್ಥ ಇದೆ. ಬನ್ನಿ ಅದನ್ನು ತಿಳಿದುಕೊಳ್ಳೋಣ

ಕೆಂಪು ಗುಲಾಬಿ (Red Rose): ಕೆಂಪು ಗುಲಾಬಿ ಪ್ರೇಮಿಗಳ ಫೆವರಿಟ್ ಕಲರ್. ಇದು ಗಾಢ ಪ್ರೇಮದ ಸಂಕೇತ (Symbol of deep love).  ಕೆಂಪು ಬಣ್ಣದ ಗುಲಾಬಿ ಗಾಢ ಪ್ರೇಮವನ್ನು ಪ್ರತಿನಿಧಿಸುತ್ತದೆ. ನೀವು ಯಾರನ್ನಾದರೂ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದರೆ ಅವರಿಗೆ ಇಂದೇ ರೆಡ್ ರೋಸ್ ಕೊಡಿ.   

ಹಳದಿ ಗುಲಾಬಿ (Yellow Rose) ಯಾವುದರ ಸಂಕೇತ : ಹಳದಿ ಗುಲಾಬಿ ಗೆಳೆತನದ (Symbol of Friendship) ಸಂಕೇತ.   ನಿಮಗೆ ಯಾರಾದರೂ ಬೆಸ್ಟ್ ಫ್ರೆಂಡ್ ಇದ್ದರೆ, ಅವರ ಸ್ನೇಹವನ್ನು  ನೀವು ಪ್ರೀತಿಸುತ್ತಿದ್ದರೆ, ಇವತ್ತು ಹಳದಿ ಗುಲಾಬಿ ನೀಡಿ. ಇದು ಗಾಢ ಸ್ನೇಹದ ಪ್ರತೀಕ. ಸ್ನೇಹಿತರಿಗೆ ಹಳದಿ ಬಣ್ಣದ ರೋಸ್ ಕೊಟ್ಟರೆ ನಿಮ್ಮ ದೋಸ್ತಿ ಇನ್ನಷ್ಟು ಗಟ್ಟಿಯಾಗಬಹುದು. 

ಶ್ವೇತ ಗುಲಾಬಿ (White Rose): ಶ್ವೇತ ಗುಲಾಬಿ ಪವಿತ್ರತೆ ಮತ್ತು ಶಾಂತಿಯ ಸಂಕೇತ (Symbol of Peace). ನಿಮಗೆ ಗೊತ್ತಿರಬಹುದು. ಹೆಚ್ಚಾಗಿ ಮದುವೆಗಳಲ್ಲಿ ಶ್ವೇತ ಗುಲಾಬಿ ಬಳಸುತ್ತಾರೆ. ಯಾರನ್ನಾದರೂ ಶುದ್ದ ಮನಸ್ಸಿನಿಂದ ನೀವು ಪ್ರೀತಿಸುತ್ತಿದ್ದರೆ ಅವರಿಗೆ ಶ್ವೇತಗುಲಾಬಿ ನೀಡಿ. ಇದು ನಿಮ್ಮ ನಿಷ್ಕಳಂಕ ಪ್ರೀತಿಯನ್ನು ಪ್ರತಿನಿಧಿಸುತ್ತದೆ. ಅಮ್ಮ, ಅಜ್ಜಿ, ಅಕ್ಕಂದಿರಿಗೂ ನೀವು ಶ್ವೇತ ಗುಲಾಬಿ ಕೊಟ್ಟು, ನಿಮ್ಮ ಪ್ರೀತಿಯನ್ನು ಪ್ರಕಟಿಸಬಹುದು.

ಪಿಂಕ್ ರೋಸ್ :ಇದು ಅರ್ಪಣಾ (Symbol of Dedication) ಮನೋಭಾವವನ್ನು ಪ್ರಕಟಿಸುತ್ತದೆ. ನಿಮ್ಮ ಜೀವನದಲ್ಲಿ ನೀವು ಯಾರನ್ನಾದರೂ ರೋಲ್ ಮಾಡೆಲ್ ಎಂದು ಸ್ವೀಕರಿಸಿರಬಹುದು. ಒಬ್ಬರನ್ನು ನೀವು ಅತ್ಯಂತ ಹೆಚ್ಚು ಅನುಸರಿಸುತ್ತಿರಬಹುದು. ಅವರಿಗೆ ಖಂಡಿತಾ ಪಿಂಕ್ ರೋಸ್ ಕೊಡಿ. 

ಕಿತ್ತಳೆ ಬಣ್ಣದ ಗುಲಾಬಿ : ಕಿತ್ತಳೆ ಬಣ್ಣದ ರೋಸ್ ಸಿಗುವುದು ಬಲು ಅಪರೂಪ. ಧರ್ಮ ಪರಂಪರೆಯಲ್ಲಿ ಈ ಬಣ್ಣದ ರೋಸ್ಗೆ್ ಅತ್ಯಂತ ಹೆಚ್ಚು ಮಹತ್ವವಿದೆ. ನೀವು ಜೀವನದಲ್ಲಿ ಯಾರಿಗೆ ಹೆಚ್ಚು ಋಣಿಯಾಗಿದ್ದೀರೋ ಅಥವಾ ಥ್ಯಾಂಕ್ಫು ಲ್ (Symbol of thankfulness) ಆಗಿದ್ದೀರೋ ಅವರಿಗೆ ಕಿತ್ತಳೆ ಬಣ್ಣದ ರೋಸ್ ನೀಡಿ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link