ವರಲಕ್ಷ್ಮೀ ವ್ರತದಂದೇ ಅಪರೂಪದ ರಾಜಯೋಗ: ಈ 5 ರಾಶಿಗೆ ಸಾಕ್ಷಾತ್‌ ಅಷ್ಟಲಕ್ಷ್ಮೀಯರೇ ಹೊತ್ತುತರುವರು ಅದೃಷ್ಟ, ಕೀರ್ತಿ, ಧನಸಂಪತ್ತು, ಸಮೃದ್ಧಿ!

Thu, 15 Aug 2024-8:34 pm,

ಶ್ರಾವಣ ಮಾಸವೆಂಬುದು ಪವಿತ್ರ ತಿಂಗಳಾಗಿದ್ದು ಶಿವನಿಗೆ ಸಮರ್ಪಿತವಾಗಿದೆ. ಇನ್ನು ಮಾಸದಲ್ಲಿ ಬರುವ ಪ್ರತಿಯೊಂದು ದಿನಾಂಕ ಮತ್ತು ಹಬ್ಬಕ್ಕೂ ವಿಶೇಷ ಮಹತ್ವವಿದೆ. ಇನ್ನು ವರಲಕ್ಷ್ಮಿ ವ್ರತವನ್ನು ಇದೇ ಮಾಸದಲ್ಲಿ ಆಚರಿಸಲಾಗುತ್ತದೆ, ಆ ದಿನ ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿಯನ್ನು ಪೂಜಿಸಲಾಗುತ್ತದೆ.

 

ಈ ದಿನದಂದು ಲಕ್ಷ್ಮಿ ದೇವಿಯನ್ನು ಭಕ್ತಿಯಿಂದ ಪೂಜಿಸಿದರೆ ಜೀವನದುದ್ದಕ್ಕೂ ದೇವಿಯ ಆಶೀರ್ವಾದ ಸಿಗುತ್ತದೆ ಎಂಬುದು ನಂಬಿಕೆ. ಸಂತೋಷ, ಶಾಂತಿ, ಸಮೃದ್ಧಿ, ಸಂಪತ್ತು ಹೆಚ್ಚಳವಾಗುತ್ತದೆ ಎಂದು ಹೇಳಲಾಗುತ್ತದೆ.

 

ವೈದಿಕ ಪಂಚಾಂಗದ ಪ್ರಕಾರ, ಆಗಸ್ಟ್ 16 ರಂದು ವರಲಕ್ಷ್ಮಿ ವ್ರತವನ್ನು ಆಚರಿಸಲಾಗುತ್ತದೆ. ಇನ್ನು ಈ ದಿನದಂದು ಪ್ರೀತಿ ಯೋಗ ಕೂಡ ರೂಪುಗೊಳ್ಳುತ್ತಿದೆ.  ಮಧ್ಯಾಹ್ನ 1:11 ರಿಂದ ಮರುದಿನ ಆಗಸ್ಟ್ 17 ರಂದು ಬೆಳಿಗ್ಗೆ 10:47 ರವರೆಗೆ ಇರುತ್ತದೆ. ಪ್ರೀತಿ ಯೋಗದಲ್ಲಿ ಮಾಡುವ ಕೆಲಸವು ಯಾವಾಗಲೂ ಉತ್ತಮ ಫಲಿತಾಂಶವನ್ನು ನೀಡುತ್ತದೆ ಎಂದು ನಂಬಲಾಗಿದೆ.

 

ಬೆನ್ನು ನೋವಿನ ಸಮಸ್ಯೆ ಇದ್ದರೆ ಅದರಿಂದ ಪರಿಹಾರ ಸಿಗುತ್ತದೆ. ವಿವಾಹಿತರ ವೈಯಕ್ತಿಕ ಸಮಸ್ಯೆಗಳು ಪರಿಹರಿಸಲ್ಪಡುತ್ತವೆ. ಇದರಿಂದಾಗಿ ಅವರು ಮಾನಸಿಕ ಶಾಂತಿಯನ್ನು ಅನುಭವಿಸುತ್ತಾರೆ. ಭವಿಷ್ಯದಲ್ಲಿ ಉತ್ತಮ ಲಾಭವನ್ನು ಗಳಿಸುವ ನಿರೀಕ್ಷೆಯಿದೆ.

 

ಸರ್ಕಾರಿ ಉದ್ಯೋಗ ಪಡೆಯುವ ವಿದ್ಯಾರ್ಥಿಗಳ ಕನಸು ನನಸಾಗಬಹುದು. ಭವಿಷ್ಯದಲ್ಲಿ ಆರ್ಥಿಕ ಲಾಭವಾಗಬಹುದು. ಬಹಳ ದಿನಗಳಿಂದ ಆಸ್ತಿ ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ, ಈ ದಿನದಂದು ಕೆಲಸ ಪೂರ್ಣಗೊಳ್ಳುತ್ತದೆ.

 

ಮನೆಗೆ ಅತಿಥಿಗಳ ಆಗಮನದಿಂದ ಸಂತಸದ ವಾತಾವರಣವಿರುತ್ತದೆ. ಕುಟುಂಬ ಸದಸ್ಯರಲ್ಲಿ ಪ್ರೀತಿ ಹೆಚ್ಚಾಗುತ್ತದೆ ಮತ್ತು ಸಂಬಂಧಗಳು ಗಾಢವಾಗುತ್ತವೆ. ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವುದು ಸೂಕ್ತ. ವ್ಯಾಪಾರದಲ್ಲಿ ಲಾಭದ ಜೊತೆ ಒತ್ತಡ ಕಡಿಮೆಯಾಗಲಿದೆ.

 

ಉದ್ಯೋಗದಲ್ಲಿರುವ ಜನರು ಶೀಘ್ರದಲ್ಲೇ ತಮ್ಮ ಹೆಸರಿನಲ್ಲಿ ಹೊಸ ಕಾರನ್ನು ಖರೀದಿಸಬಹುದು. ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ವೈಯಕ್ತಿಕ ಜೀವನದಲ್ಲಿ ನಡೆಯುತ್ತಿರುವ ಸಮಸ್ಯೆಗಳು ಅಂತಿಮವಾಗಿ ಕೊನೆಗೊಳ್ಳುತ್ತವೆ.

 

ವರಲಕ್ಷ್ಮಿ ವ್ರತದಂದು ಮಕರ ರಾಶಿಗೆ ಶುಭ ಫಲಿತಾಂಶ ಸಿಗಲಿದೆ. ಉದ್ಯೋಗಸ್ಥರು ದೀರ್ಘಕಾಲದಿಂದ ಬರಬೇಕಿದ್ದ ಹಣವನ್ನು ಮರಳಿ ಪಡೆಯುತ್ತಾರೆ. ಲಕ್ಷ್ಮೀ ದಯೆಯಿಂದ ಮದುವೆ ಯೋಗವೂ ನಿಮಗಿದೆ

 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ವೈದಿಕ ಜ್ಯೋತಿಷ್ಯವನ್ನು ಆಧರಿಸಿದೆ ಮತ್ತು ಮಾಹಿತಿಗಾಗಿ ಮಾತ್ರ ನೀಡಲಾಗುತ್ತಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link