ಪ್ರೀತಿಯ ಗುಟ್ಟನ್ನು ಬಿಚ್ಚಿಟ್ಟ ವರ್ತೂರು ಸಂತೋಷ್! ಎರಡನೇ ಮದುವೆ ಬಗ್ಗೆ ಕೊಟ್ಟರು ಬಿಗ್ ಅಪ್‌ಡೇಟ್..!
ಕನ್ನಡ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಅನೇಕ ಸ್ಪರ್ಧಿಗಳ ಜೀವನವನ್ನೇ ಬದಲಿಸಿದೆ.ಇದು ಬಹುತೇಕ ಸ್ಪರ್ಧಿಗಳಿಗೆ ಹೊಸ ಖ್ಯಾತಿಯನ್ನು ತಂದಿದೆ.
ಈಗ ಸೀಸನ್ 10 ಮುಗಿದ 11ನೇ ಸೀಸನ್ ಕೂಡ ಮುಗಿಯುವ ಹಂತಕ್ಕೆ ಬಂದಿದೆ ಅಂತದ್ದರಲ್ಲಿ 10 ನೇ ಸೀಸನ್ ನ್ನಿನ ಹವಾ ಮಾತ್ರ ಇಂದಿಗೂ ಕಡಿಮೆಯಾಗಿಲ್ಲ. 10 ನೇ ಸೀಸನ್ ಸ್ಪರ್ಧಿಗಳಾದ ಆಗಾಗ ವರ್ತೂರ್ ಸಂತೋಷ್ ಮತ್ತು ತನಿಷಾ ಜೊತೆಯಾಗಿ ಕಾಣಿಸಿಕೊಳ್ಳುವುದರಿಂದಾಗಿ ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ರೂಮರ್ಸ್ ಗಳು ಎಲ್ಲೆಡೆ ಹರಿದಾಡುತ್ತಿವೆ.
ನೀವು ಪ್ರೀತಿಯಲ್ಲಿ ಬಿದ್ದಿದ್ದಿರಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಸಂತೋಷ್ ಅದನ್ನು ಈಗ ಹೇಗೆ ಹೇಳಬೇಕು ಎಂದು ಅವರು ಮಾರ್ಮಿಕವಾಗಿ ಪ್ರತಿಕ್ರಿಯಿಸಿದ್ದಾರೆ.
ಇನ್ನೂ ಮುಂದುವರೆದು ಮಾತನಾಡಿದ ಅವರು ಪ್ರೀತಿಯಂತೂ ಇದೆ ಆದರೆ ನೀವೆಲ್ಲಾ ಸೋಶಿಯಲ್ ಮೀಡಿಯಾದಲ್ಲಿ ನೋಡುತ್ತಿರುವ ಫೋಟೋ ವೀಡಿಯೋ ಗಳಲ್ಲಿ ಬರುತ್ತಿರುವಂತೆ ಅಲ್ಲ ಎಂದು ಅವರು ವದಂತಿಗಳಿಗೆ ಅವರು ಸ್ಪಷ್ಟನೆ ನೀಡಿದ್ದಾರೆ.
'ಪ್ರೀತಿಯಲ್ಲಿ ಇದ್ದೀರಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ವರ್ತೂರು ಸಂತೋಷ್ ಅದನ್ನು ಹೇಗೆ ಹೇಳಲಿ ಎಂದು ಉತ್ತರಿಸಿದ್ದಾರೆ. ಇನ್ನು ಈ ಬಗ್ಗೆ ಸ್ಪಷ್ಟವಾಗಿ ಉತ್ತರಿಸಿದ ಅವರು, ಸೋಶಿಯಲ್ ಮೀಡಿಯಾದಲ್ಲಿ ನೀವು ನೋಡುತ್ತಿರುವ ಫೋಟೋ ವಿಡಿಯೋಗಳಲ್ಲಿ ಬರುತ್ತಿರುವುದಂತೂ ಅಲ್ಲ. ಆದರೆ ಲವ್ ಇದೆ ಆದರೆ ಅದಲ್ಲಾ' ಎನ್ನುವ ಮೂಲಕ ಪರೋಕ್ಷವಾಗಿ ತಮ್ಮ ಮತ್ತು ನಟಿ ತನಿಷಾ ಕುಪ್ಪಂಡ ಬಗ್ಗೆ ಇರುವ ವದಂತಿಗೆ ಸ್ಪಷ್ಟನೆ ನೀಡಿದ್ದಾರೆ.