Vastu Shastra: ಈ 5 ವಸ್ತುಗಳು ಮನೆಯಲ್ಲಿದ್ದರೆ ದುರಾದೃಷ್ಟ
ಒಡೆದ ಗಾಜಿನ ವಸ್ತುಗಳನ್ನು ಮನೆಯಲ್ಲಿ ಇಡುವುದು ಅಶುಭವೆಂದು ಪರಿಗಣಿಸಲಾಗುತ್ತದೆ. ಇದಲ್ಲದೇ ಮನೆಯಲ್ಲಿ ಭಗ್ನಗೊಂಡ ದೇವರ ವಿಗ್ರಹಗಳು ಇರಬಾರದು.
ವಾಸ್ತು ಪ್ರಕಾರ ಮಹಾಭಾರತ, ರಾಮಾಯಣ ಅಥವಾ ಯಾವುದೇ ರೀತಿಯ ಯುದ್ಧಗಳ ಚಿತ್ರಗಳನ್ನು ಮನೆಯಲ್ಲಿ ಇಡಬಾರದು. ವಾಸ್ತವವಾಗಿ, ಅಂತಹ ಚಿತ್ರಗಳನ್ನು ಮನೆಯಲ್ಲಿ ಇಡುವುದರಿಂದ ಕುಟುಂಬದ ಸದಸ್ಯರ ನಡುವೆ ಪರಸ್ಪರ ಹೊಂದಾಣಿಕೆಯ ಕೊರತೆ ಇರಬಹುದು ಎನ್ನಲಾಗುತ್ತದೆ.
ವಾಸ್ತು ಪ್ರಕಾರ ಮನೆಯಲ್ಲಿ ಮರದಿಂದ ಮಾಡಿದ ಯಾವುದೇ ಭೂತ ಅಥವಾ ರಾಕ್ಷಸರ ಚಿತ್ರ ಅಥವಾ ಮೂರ್ತಿ ಇರಬಾರದು. ವಾಸ್ತು ತಜ್ಞರ ಪ್ರಕಾರ ಮನೆಯಲ್ಲಿ ಸಿಂಹ, ಕರಡಿ, ಹುಲಿ, ತೋಳಗಳಂತಹ ಕಾಡು ಪ್ರಾಣಿಗಳ ಚಿತ್ರಗಳು ಸಹ ಇರಬಾರದು.
ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಮುಳ್ಳಿನ ಗಿಡಗಳನ್ನು ಇಡಬಾರದು. ಆದರೂ ಗುಲಾಬಿ ಗಿಡ ನೆಡಬಹುದು.
ವಾಸ್ತು ಶಾಸ್ತ್ರದ ಪ್ರಕಾರ, ತಾಜ್ ಮಹಲ್‌ಗೆ ಸಂಬಂಧಿಸಿದ ಯಾವುದೇ ಶೋಪೀಸ್ ಅಥವಾ ಚಿತ್ರಗಳನ್ನು ಮನೆಯಲ್ಲಿ ಇಡಬಾರದು. ವಾಸ್ತವವಾಗಿ ಅದೊಂದು ಸಮಾಧಿ. ಇದನ್ನು ಸಾವು ಅಥವಾ ನಿಷ್ಕ್ರಿಯತೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.