Vastu shastra: ಮನೆ ಕಟ್ಟುವಾಗ ಪ್ರತಿಯೊಬ್ಬರೂ ಗಮನಿಸಬೇಕಾದ ಅಂಶಗಳು
ಮನೆಯ ಬಾಗಿಲು ಉತ್ತರ ಅಥವಾ ಪೂರ್ವದ ಕಡೆ ಇರಬೇಕು. ಮನೆಯ ಮುಂದುಗಡೆ 3 ದಾರಿಯಿದ್ದರೆ ಆ ಮನೆಯಲ್ಲಿ ವಾಸಿಸುವವರಿಗೆ ಮಾನಸಿಕ ಒತ್ತಡ ಅಧಿಕವಿರುತ್ತದೆ. ಹೀಗಾಗಿ ಇದರ ಬಗ್ಗೆ ಎಚ್ಚರಿಕೆ ವಹಿಸುವುದು ಉತ್ತಮ.
ಮನೆ ಪೌಂಡೇಷನ್ ಅಥವಾ ಅಡಿಪಾಯಕ್ಕೆ ಮಣ್ಣು ತೆಗೆಯುವಾಗ ಮೊದಲು ಪೂರ್ವದಿಂದ ತೆಗೆದು ನಂತರ ಉತ್ತರ, ಪಶ್ಚಿಮ ಕೊನೆಯದಾಗಿ ದಕ್ಷಿಣ ದಿಕ್ಕಿನಲ್ಲಿ ಮಣ್ಣು ತೆಗೆಯಬೇಕು. ಹೀಗೆ ಮಾಡುವುದರಿಂದ ನಿಮಗೆ ಯಾವುದೇ ವಾಸ್ತುದೋಷದ ಸಮಸ್ಯೆ ಕಾಡುವುದಿಲ್ಲ.
ರಸ್ತೆಗೆ ತುಂಬಾ ಸಮೀಪವಿರುವ ಜಾಗ ಮನೆ ಕಟ್ಟಲು ಅಷ್ಟು ಒಳ್ಳೆಯದಲ್ಲ. ಹೀಗಾಗಿ ರಸ್ತೆಯಿಂದ ಸ್ವಲ್ಪ ದೂರವಿರುವ ಜಾಗವನ್ನೇ ಮನೆ ಕಟ್ಟಲು ಆಯ್ದುಕೊಳ್ಳಿರಿ. ಹೀಗೆ ಮಾಡಿದ್ರೆ ನಿಮಗೆ ಯಾವುದೇ ತೊಂದರೆಗಳಿರುವುದಿಲ್ಲ.
ಮನೆಯ ಮುಂಬಾಗಿಲು ಪೂರ್ವ, ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿರಬೇಕು. ದಕ್ಷಿಣ ಭಾಗದಲ್ಲಿ ಮನೆಯ ಮುಂಭಾಗಲು ಇರುವುದು ಮನೆಗೆ ಶ್ರೇಯಸ್ಸು ತರುವುದಿಲ್ಲ. ಹೀಗಾಗಿ ಈ ಅಂಶದ ಬಗ್ಗೆ ನೀವು ಸ್ವಲ್ಪ ಗಮನಹರಿಸಬೇಕು.
ನೈರುತ್ಯ ದಿಕ್ಕಿನಲ್ಲಿ ಮನೆಯ ಯಾವುದೇ ಬಾಗಿಲು ಇರಬಾರದು. ಮನೆಯ ಬಾಗಿಲು ತೆರೆದಾಗ ಒಳಗೆ ಹೋಗುವಂತಿರಬೇಕು, ಹೊರಗಡೆ ಬರುವಂತೆ ಇರಬಾರದು. ಮನೆ ಬಾಗಿಲು ತೆರೆದಾಗ ಅದು ಒಳಗಡೆ ಹೋಗುವಂತಿದ್ದರೆ ಧನಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ. ಇಲ್ಲದಿದ್ದರೆ ನಕಾರಾತ್ಮಕ ಶಕ್ತಿ ಆವರಿಸಿ ಮಾನಸಿಕ ನೆಮ್ಮದಿಗೆ ಭಂಗವನ್ನುಂಟು ಮಾಡುತ್ತದೆ.