Vastu Plants: ಮನೆಯಲ್ಲಿ ಲಕ್ಷ್ಮಿ- ನಾರಾಯಣರ ವಾಸಕ್ಕೆ ಎಲ್ಲಾ ದಿಕ್ಕುಗಳಲ್ಲಿ ಈ ಸಸ್ಯಗಳನ್ನು ನೆಡಿ
1. ಗ್ರಹದೋಷಗಳಿಂದ ಮುಕ್ತಿ ಸಿಗುತ್ತದೆ - ಕುಂಡಲಿಯಲ್ಲಿರುವ ಗ್ರಹದೋಷಗಳಿಂದ ಮುಕ್ತಿ ಪಡೆಯಲು ವಾಸ್ತುಶಾಸ್ತ್ರದಲ್ಲಿ ಹಲವು ಸಸ್ಯಗಳ ಕುರಿತು ಉಲ್ಲೇಖಿಸಲಾಗಿದೆ. ವ್ಯಕ್ತಿಯ ಜೀವನದಲ್ಲಿ ಶಾಂತತೆ ಮನೆಮಾಡುತ್ತದೆ ಮತ್ತು ಧನ-ಸಂಪತ್ತು ಮತ್ತು ಸುಖ ಸಮೃದ್ಧಿ ಪ್ರಾಪ್ತಿಯಾಗುತ್ತದೆ. ಆದರೆ, ಈ ಸಸ್ಯಗಳನ್ನು ಸರಿಯಾದ ದಿಕ್ಕಿನಲ್ಲಿ ನೆಟ್ಟರೆ ಮಾತ್ರ ಅವುಗಳಿಂದ ಅಪಾರ ಲಾಭ ಸಿಗುತ್ತದೆ.
2. ಅರಿಶಿಣ ಗಿಡ- ವಾಸ್ತು ಶಾಸ್ತ್ರದಲ್ಲಿ ತುಳಸಿಯಂತೆಯೇ ಅರಿಶಿಣ ಗಿಡ ನೆಡುವ ಸಲಹೆಯನ್ನು ಕೂಡ ನೀಡಲಾಗುತ್ತದೆ. ಈ ಗಿಡ ಮನೆಯಲ್ಲಿ ನೆಡುವುದರಿಂದ ಮನೆಯಲ್ಲಿ ಸುಖ ಸಮೃದ್ಧಿ ನೆಲೆಸುತ್ತವೆ ಮತ್ತು ವ್ಯಕ್ತಿಯ ಆರೋಗ್ಯದ ಮೇಲೆ ಸಕಾರಾತ್ಮಕ ಪ್ರಭಾವ ಉಂಟಾಗುತ್ತವೆ. ವಿವಾಹದಲ್ಲಿ ಎದುರಾಗುತ್ತಿರುವ ಅಡೆತಡೆಗಳನ್ನು ಈ ಸಸ್ಯ ನಿವಾರಿಸುತ್ತದೆ. ನಿಯಮಿತ ರೂಪದಲ್ಲಿ ಅರಿಶಿಣ ಗಿಡಕ್ಕೆ ಪೂಜೆಯನ್ನು ಸಲ್ಲಿಸಲಾಗುತ್ತದೆ. ಈ ರೀತಿ ಮಾಡುವುದರಿಂದ ಜಾತಕದಲ್ಲಿ ಬೃಹಸ್ಪತಿಯ ಸ್ಥಾನಕ್ಕೆ ಬಲ ಸಿಗುತ್ತದೆ
3. ಶಮಿ ವೃಕ್ಷ- ಶನಿದೇವರಿಗೆ ಶಮಿ ವೃಕ್ಷ ತುಂಬಾ ಇಷ್ಟ. ಶನಿದೇವರನ್ನು ಪ್ರಸನ್ನಗೊಳಿಸಲು ನಿಯಮಿತವಾಗಿ ಈ ಗಿಡಕ್ಕೆ ಪೂಜೆ ಸಲ್ಲಿಸಬೇಕು. ಮನೆಯಿಂದ ಹೊರಹೋಗುವಾಗ ಬಲಭಾಗದಿಂದ ಈ ಗಿಡದ ದರ್ಶನ ಮಾಡುವುದರಿಂದ ನಿಮ್ಮ ಇಡೀ ದಿನ ಉತ್ತಮ ರೀತಿಯಲ್ಲಿ ಕಳೆಯುತ್ತದೆ.
4. ದಾಸವಾಳದ ಗಿಡ - ವಾಸ್ತು ತಜ್ಞರ ಪ್ರಕಾರ ಮನೆಯಲ್ಲಿ ದಾಸವಾಳ ಗಿಡ ನೆಡುವುದರಿಂದ ವ್ಯಕ್ತಿಯ ಜಾತಕದಲ್ಲಿನ ಮಂಗಳದೋಷದಿಂದ ಮುಕ್ತಿ ಸಿಗುತ್ತದೆ. ಇದಲ್ಲದೆ ಜಾತಕದಲ್ಲಿ ಸೂರ್ಯನ ಸ್ಥಿತಿಗೆ ಬಲ ಸಿಗುತ್ತದೆ. ಜೀವನದಲ್ಲಿ ಬರುವ ಆರ್ಥಿಕ ಸಂಕಷ್ಟದಿಂದ ಪಾರಾಗಲು ಮನೆಯಲ್ಲಿ ದಾಸವಾಳ ಗಿಡ ನೆಡಲು ಸಲಹೆಯನ್ನು ನೀಡಲಾಗುತ್ತದೆ.
5. ದಾಳಿಂಬೆ ಗಿಡ - ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಈಶಾನ್ಯ ದಿಕ್ಕಿನಲ್ಲಿ ದಾಳಿಂಬೆ ಗಿಡ ನೆಡುವುದು ಶುಭ ಫಲದಾಯಿ ಸಾಬೀತುಪಡಿಸುತ್ತದೆ. ಈ ಗಿಡವನ್ನು ಮನೆಯಲ್ಲಿ ನೆಡುವುದರಿಂದ ಹಲವು ರೀತಿಯ ಗ್ರಹ ದೋಷಗಳಿಂದ ಮುಕ್ತಿ ಸಿಗುತ್ತದೆ. ಇದಲ್ಲದೆ ಜೇನು ತುಪ್ಪದಲ್ಲಿ ದಾಳಿಂಬೆಯ ಹೂವುಗಳನ್ನು ಅದ್ದಿ ಶಿವನಿಗೆ ಅರ್ಪಿಸಬೇಕು. ಇದರಿಂದ ಎಲ್ಲಾ ಸಂಕಷ್ಟಗಳಿಂದ ಮುಕ್ತಿ ಸಿಗುತ್ತದೆ.