Vastu Tips: ಈ ದಿಕ್ಕಿನಲ್ಲಿ ಕುಳಿತು ಊಟ ಮಾಡಿದ್ರೆ ಬಡತನ & ಆರ್ಥಿಕ ಸಮಸ್ಯೆಗಳು ಹೆಚ್ಚುತ್ತವೆ!
ಆಹಾರ ಸೇವಿಸುವ ಮತ್ತು ನೀರು ಕುಡಿಯುವ ದಿಕ್ಕಿನ ಬಗ್ಗೆ ವಾಸ್ತು ಶಾಸ್ತ್ರದಲ್ಲಿಯೂ ಉಲ್ಲೇಖಿಸಲಾಗಿದೆ. ಇದು ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಮೇಲೆ ನೇರ ಪರಿಣಾಮ ಬೀರುತ್ತದೆ.
ಆಹಾರವನ್ನು ಸೇವಿಸುವಾಗ ವಾಸ್ತುವಿನ ನಿಯಮಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ. ಇದನ್ನು ಪಾಲಿಸದಿದ್ದರೆ ಯಾವುದೇ ಒಬ್ಬ ವ್ಯಕ್ತಿಯು ಗಂಭೀರ ಅನಾರೋಗ್ಯ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ.
ವಾಸ್ತು ಶಾಸ್ತ್ರದ ಪ್ರಕಾರ ಆಹಾರ ಸೇವಿಸಲು ಉತ್ತಮವಾದ ದಿಕ್ಕನ್ನು ಉತ್ತರ ಮತ್ತು ಪೂರ್ವ ಎಂದು ಪರಿಗಣಿಸಲಾಗುತ್ತದೆ. ಈ ದಿಶೆಯಲ್ಲಿ ಆಹಾರ ಸೇವಿಸುವುದರಿಂದ ಪ್ರಗತಿಗೆ ಹೊಸ ಅವಕಾಶಗಳು ಲಭ್ಯವಿದ್ದು, ಧನಲಾಭದ ಸಾಧ್ಯತೆಗಳಿವೆ.
ದಕ್ಷಿಣ ದಿಕ್ಕನ್ನು ‘ಯಮ’ ಎಂದು ಪರಿಗಣಿಸಲಾಗುತ್ತದೆ, ಆದ್ದರಿಂದ ಈ ದಿಕ್ಕನ್ನು ಆಹಾರ ಸೇವನೆಗೆ ಅತ್ಯಂತ ಅಶುಭವೆಂದು ಪರಿಗಣಿಸಲಾಗಿದೆ. ಈ ದಿಕ್ಕಿನಲ್ಲಿ ಆಹಾರವನ್ನು ಸೇವಿಸುವುದರಿಂದ ಆಯುಷ್ಯ ಕಡಿಮೆಯಾಗುತ್ತದೆ ಮತ್ತು ದುರದೃಷ್ಟವನ್ನು ಆಹ್ವಾನಿಸುತ್ತದೆ.
ಆಹಾರವನ್ನು ತಿನ್ನಲು ಪಶ್ಚಿಮ ದಿಕ್ಕನ್ನು ಸಹ ಸರಿಯಾಗಿ ಪರಿಗಣಿಸಲಾಗುವುದಿಲ್ಲ. ಈ ದಿಕ್ಕಿಗೆ ಮುಖಮಾಡಿ ಆಹಾರವನ್ನು ಸೇವಿಸುವುದರಿಂದ ಯಾವುದೇ ಒಬ್ಬ ವ್ಯಕ್ತಿಯು ಸಾಲದ ಬಾಧೆಯನ್ನು ಅನುಭವಿಸುತ್ತಾನೆ.
(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)