Vastu Tips: ಕುಬೇರನ ಕೃಪೆಯಿಂದ ಚಿನ್ನದಂತೆ ಹೊಳೆಯುತ್ತೆ ನಿಮ್ಮ ಅದೃಷ್ಟ, ಈ ಕೆಲಸ ಮಾಡಿ ಸಾಕು
1. ಮನೆಯ ಪೂಜಾ ಸ್ಥಳದಲ್ಲಿ ತಾಯಿ ಲಕ್ಷ್ಮಿ ಹಾಗೂ ಕುಬೇರನ ದೇವನ ವಿಗ್ರಹಗಳನ್ನು ಪ್ರತಿಷ್ಠಾಪಿಸಿ ಪ್ರತಿದಿನ ಪೂಜಿಸುವುದರಿಂದ ಅದೃಷ್ಟದ ಬಾಗಿಲು ತೆರೆಯುತ್ತದೆ. ಇದು ಮನೆಗೆ ಸಾಕಷ್ಟು ಶ್ರೇಯಸ್ಸನ್ನು ತರುತ್ತದೆ ಮತ್ತು ಹಣದ ಕೊರತೆ ಎದುರಾಗುವುದಿಲ್ಲ.
2. ಮನೆಯಲ್ಲಿ ದೇವರಿಗೆ ಪುಷ್ಪಗಳನ್ನು ಅರ್ಪಿಸಿದ ನಂತರ ಜನರು ಅವುಗಳನ್ನು ಹಾಗೆಯೇ ಬಿಡುತ್ತಾರೆ ಮತ್ತು ಅವು ಒಣಗಿ ಹೋಗುತ್ತವೆ. ವಾಸ್ತು ನಿಯಮಗಳ ಪ್ರಕಾರ ಒಣ ಹೂವುಗಳು ಹಾಗೂ ಹೂಮಾಲೆಗಳು ಪೂಜಾ ಗ್ರಹದಲ್ಲಿ ಹಾಗೆಯೇ ಬಿಡಬಾರದು. ಇದರಿಂದ ಮನೆಯಲ್ಲಿ ಬಡತನ ಬರುತ್ತದೆ. ಇಂತಹ ಪರಿಷ್ಟಿತಿಯಲ್ಲಿ ದೇವರ ಕೋಣೆಯಲ್ಲಿ ಹೂವುಗಳು ಬಾಡಿದಾಗ, ತಕ್ಷಣವೆ ಆ ನೈರ್ಮಾಲ್ಯವನ್ನು ತೆಗೆದು ಹಾಕಬೇಕು.
3. ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಉತ್ತರ ದಿಕ್ಕನ್ನು ಕುಬೇರನ ವಾಸಸ್ಥಾನವೆಂದು ಪರಿಗಣಿಸಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಈ ದಿಕ್ಕಿನಲ್ಲಿ ಹಣವನ್ನು ಇರಿಸಲು ಸುರಕ್ಷಿತ ನಿರ್ಮಿಸುವುದು ತುಂಬಾ ಮುಖ್ಯವಾದ ಸಂಗತಿ. ಅಷ್ಟೇ ಅಲ್ಲ ತಿಜೋರಿಯ ಮಧ್ಯ ಅಥವಾ ಮೇಲ್ಭಾಗದಲ್ಲಿ ಮಾತ್ರ ಹಣವನ್ನು ಇರಿಸಿ. ಇದರ ಜೊತೆಗೆ ತಿಜೋರಿಯಲ್ಲಿ ವ್ಯಾಪಾರ ವೃದ್ಧಿ ಯಂತ್ರ, ಮಹಾಲಕ್ಷ್ಮಿ ಯಂತ್ರ, ಬೀಸಾ ಯಂತ್ರ ಇರಿಸುವುದು ಕೂಡ ಅತ್ಯಂತ ಶುಭಕರ ಎಂದು ಭಾವಿಸಲಾಗುತ್ತದೆ.
4. ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಪೂಜಾ ಸ್ಥಾನದಲ್ಲಿ ದಕ್ಷಿಣಾವರ್ತಿ ಶಂಖ ಇರಿಸುವುದು ಅತ್ಯಂತ ಮಂಗಳಕರ ಎಂದು ಪರಿಗಣಿಸಲಾಗುತ್ತದೆ. ನಿತ್ಯ ಪೂಜೆಯ ವೇಳೆ ಇದನ್ನು ಓದಬೇಕು. ಶಂಖದ ಶಬ್ದದಿಂದ ತಾಯಿ ಲಕ್ಷ್ಮಿ ಪ್ರಸನ್ನಳಾಗುತ್ತಾಳೆ ಮನೆಯಲ್ಲಿಯೇ ವಾಸ ಮಾಡಿ, ನಿಮ್ಮ ಹಣಕಾಸಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ನಿವಾರಿಸುತ್ತಾಳೆ.
5. ಸಾಮಾನ್ಯವಾಗಿ ಊಟ ಅಥವಾ ತಿಂಡಿ ಮುಗಿಸಿದ ನಂತರ ಜನರು ಮುಸುರಿ ಪಾತ್ರೆಗಳನ್ನು ಹಾಗೆಯೇ ತಮ್ಮ ಕಿಚನ್ ನಲ್ಲಿ ಇರಿಸುತ್ತಾರೆ. ಆದರೆ ವಾಸ್ತು ಶಾಸ್ತ್ರದ ಲೆಕ್ಕಾಚಾರದಲ್ಲಿ ಇದು ಸರಿಯಲ್ಲ. ಈ ರೀತಿ ಮಾಡುವುದರಿಂದ ತಾಯಿ ಲಕ್ಷ್ಮಿ ಮುನಿಸಿಕೊಳ್ಳುತ್ತಾಳೆ ಮತ್ತು ಮನೆಯನ್ನು ತೊರೆಯುತ್ತಾಳೆ. ಹೀಗಿರುವಾಗ ಊಟ ಹಾಗೂ ತಿಂಡಿ ಮುಗಿಸಿದ ಬಳಿಕ ತಕ್ಷಣವೇ ಪಾತ್ರೆಗಳನ್ನು ತೊಳೆಯಿರಿ.(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)