Tulsi Vastu Tips: ಈ ದಿನದಂದು ತಪ್ಪಿಯೂ ತುಳಸಿಗೆ ನೀರು ಹಾಕಬೇಡಿ, ಶ್ರೀಮಂತನೂ ಕೂಡ ದಾರಿದ್ರ್ಯ ವಕ್ಕರಿಸಿ ಕಡು ಬಡವನಾಗುವ!
ತುಳಸಿ ಪೂಜೆಯಿಂದ ಮನೆಯಲ್ಲಿ ಸಂತೋಷ, ಸಮೃದ್ಧಿ ನೆಲೆಸುತ್ತದೆ. ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ತುಳಸಿಗೆ ನೀರನ್ನು ಅರ್ಪಿಸಿ ಪೂಜಿಸುತ್ತಾರೆ.
ತುಳಸಿಗೆ ಈ ಎರಡು ದಿನದಂದು ತಪ್ಪಿಯೂ ನೀರು ಹಾಕಬಾರದು. ಇದು ಜೀವನದಲ್ಲಿ ಬಡತನಕ್ಕೆ ಕಾರಣವಾಗುತ್ತದೆ.
ತುಳಸಿಗೆ ಹಿಂದೂ ಧರ್ಮದಲ್ಲಿ ಅದರದೇ ಆದ ಮಹತ್ವವಿದೆ. ತುಳಸಿ ಮಂಗಳಕರ ಮತ್ತು ಪವಿತ್ರ ಸಸ್ಯವೆಂದು ಪರಿಗಣಿಸಲಾಗಿದೆ. ತುಳಸಿಯನ್ನು ವಿಷ್ಣು ಮತ್ತು ಲಕ್ಷ್ಮಿಯ ವಾಸಸ್ಥಾನವೆಂದು ನಂಬಲಾಗಿದೆ.
ತುಳಸಿ ಗಿಡವನ್ನು ಮನೆಯ ಮುಂದೆ ನೆಟ್ಟು ಪ್ರತಿನಿತ್ಯ ಪೂಜಿಸುವುದರಿಂದ ಲಕ್ಷ್ಮೀದೇವಿಯ ಅನುಗ್ರಹಕ್ಕೆ ಪಾತ್ರರಾಗುವಿರಿ.
ತುಳಸಿಗೆ ನೀರನ್ನು ಅರ್ಪಿಸಲು ಕೆಲವು ನಿಯಮಗಳಿವೆ. ವಾರದ ಕೆಲವು ದಿನ ತುಳಸಿಗೆ ನೀರು ಅರ್ಪಿಸಬಾರದು. ಇದು ಮನೆಯ ಐಶ್ವರ್ಯಕ್ಕೆ ಧಕ್ಕೆ ತರುತ್ತದೆ.
ತುಳಸಿಗೆ ಭಾನುವಾರ ನೀರನ್ನು ಅರ್ಪಿಸಬಾರದು. ಈ ದಿನ ತುಳಸಿ ನೀರಿಲ್ಲದ ಉಪವಾಸವನ್ನು ಆಚರಿಸುತ್ತಾಳೆ.
ಭಾನುವಾರ ತುಳಸಿಗೆ ನೀರನ್ನು ಅರ್ಪಿಸುವುದು ಉಪವಾಸವನ್ನು ಮುರಿದಂತೆ ಆಗುತ್ತದೆ. ಈ ದಿನ ಅಪ್ಪಿತಪ್ಪಿಯೂ ತುಳಸಿಗೆ ನೀರು ಅರ್ಪಿಸಬೇಡಿ. ವಿಷ್ಣುವಿನ ಕೋಪಕ್ಕೆ ಗುರಿಯಾಗುವಿರಿ.
ಏಕಾದಶಿಯ ದಿನದಂದು ತುಳಸಿ ಎಲೆಗಳನ್ನು ಕೀಳಬಾರದು. ಅಲ್ಲದೇ ತುಳಸಿ ಗಿಡಕ್ಕೆ ನೀರನ್ನು ಅರ್ಪಿಸಬಾರದು.
ಏಕಾದಶಿಯಂದು ತುಳಸಿಯು ವಿಷ್ಣುವಿನ ಪೂಜೆಯಲ್ಲಿ ನಿರತಳಾಗಿ ನಿರ್ಜಲ ವ್ರತವನ್ನು ಆಚರಿಸುತ್ತಾಳೆ. ಈ ದಿನ ತುಳಸಿಗೆ ನೀರನ್ನು ಅರ್ಪಿಸಿದರೆ ತುಳಸಿ ಕೋಪಗೊಳ್ಳುತ್ತಾಳೆ.
(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿ ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)